logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಕೆಹಾಕುವುದು/ಅಂಕೆಗೆ ಹಾಕುವುದು
ಶಿರಸಿಯ ಮಾರಿಕಾಂಬ ದೇವಸ್ಥಾನದ ಜಾತ್ರೆಗೆ ಸಂಬಂಧಿಸಿದ ಒಂದು ಆಚರಣೆ. ಜಾತ್ರೆಗೆ ಮುಂಚೆ ದೇವಿಯ ಮದುವೆ ನಿಶ್ಚಿತಾರ್ಥದ ಶಾಸ್ತ್ರಮಾಡಿ, ಅಣಿಮಾಡಿದ ವೇಇಕೆಯ ಬಳಿ ಸಣ್ಣ ಸಣ್ಣ ಗಡಿಗೆಗಳನ್ನು ಜೋಡಿಸಿಟ್ಟು, ಮಧ್ಯದಲ್ಲಿ ದೀಪ ಹಚ್ಚುತ್ತಾರೆ. ನಂತರ ಪಟ್ಟದ ಕೋಣದ (ನೋಡಿ - ಪಟ್ಟದ ಕೋಣ) ಕುಂಭಕ್ಕೂ ಉತ್ಸವದ ಪ್ರಮುಖರಿಗೂ ಕಂಕಣ ಕಟ್ಟುತ್ತಾರೆ

ಅಂಕೆಹಾಕುವುದು/ಅಂಕೆಗೆ ಹಾಕುವುದು
ಗ್ರಾಮದೇವತೆಗಳ ಜಾತ್ರೆಯಲ್ಲಿ ಕಂಡುಬರುವ ಒಂದು ಆಚರಣೆ

ಅಂಕೆಹಾಕುವುದು/ಅಂಕೆಗೆ ಹಾಕುವುದು
ನಂಬುಗೆ ಸ್ವೀಕರಿಸುವುದು

ಅಂಕೆಹಾಕುವುದು/ಅಂಕೆಗೆ ಹಾಕುವುದು
ಮದುವೆಯ ಕೂಸು ನಿಶ್ಚಯಿಸಿ ಕಂಕಣಕಟ್ಟಿ ವ್ರತಬದ್ಧರಾಗುವುದು

ಅಂಕೆಹಾಕುವುದು/ಅಂಕೆಗೆ ಹಾಕುವುದು
ಬಲಿಕೊಡಲು ಕಟ್ಟಿಹಾಕಿದ ಕೋಣನಿಗೆ ಐದು ಅಥವಾ ಒಂಬತ್ತು ದಿನ ಸುಣ್ಣದ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ಕುಡಿಸುವುದು (ಚಿತ್ರ.ಜಿ)

ಅಂಕೊಂಡಿ
ಕೂರಿಗೆಯ ದಿಂಡಿಗೆ ಕಟ್ಟಲು ಬಳಸುವ ಚರ್ಮದ ಪಟ್ಟಿಗೆ ಜೋಡಿಸಿರುವ ಚಿಕ್ಕ ಮೊಳೆ (ರಾಯ.ಜಿ)

ಅಂಕೊಜಿ
ನೋಡಿ - ಅಂಕೊಣಿ

ಅಂಕೊಡಿ
ನೋಡಿ - ಅಂಕೊಣಿ

ಅಂಕೊಣಿ/ಅಂಕೊಜಿ/ಅಂಕೊಡಿ
ಕತ್ತಿ ತೂಗುಹಾಕುವ ಮರದ ಅಥವಾ ಬಿದಿರಿನ ರಚನೆ

ಅಂಕೊಣಿ/ಅಂಕೊಜಿ/ಅಂಕೊಡಿ
ಸೊಂಟಪಟ್ಟಿ ಅಥವಾ ಕೊಕ್ಕೆ (ದಕ.ಜಿ)


logo