logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಐಂದ್ರಿ
ಪೂರ್ವದಿಕ್ಕು

ಐಂದ್ರಿ
ಇಂದ್ರನ ಹೆಂಡತಿ, ಶಚಿ

ಐಂಸರ
ಕೇರೆಹಾವು (ದಕ.ಜಿ)

ಐಕಳಪ
ಆಶ್ಚರ್ಯಸೂಚಕ ಪದ (ಚಿಮ.ಜಿ)

ಐಕ್ಳು/ಐಕಳು
ಹೈಕಳು; ಮಕ್ಕಳು (ದಕ).
ಐಕ್ಳು ಅವ್ರಪ್ಪ ದಾರಿ ಕಾಯ್ತಾ ಕೂತಿದ್ದೋ

ಐಗಂಚಿ
ಬಹುದೂರದ ಊರು: ಬಹಳ ದೂರ.
ಅದೇನು ಐಗಂಚಿಯೇ? ಒಂದು ಗಂಟೆಯಲ್ಲಿ ಊರು ತಲುಪಬಹುದು (ಮಂಡ್ಯ.ಜಿ)

ಐಗಂಚಿಮರ
ಮುಗಿಲೆತ್ತರದ ಮರ (ಮಂಡ್ಯ.ಜಿ)

ಐಗಂಡಗ
ಐದು ಖಂಡಗ (ಗುಲ್ಬ.ಜಿ)

ಐಗಳ
ಐವತ್ತು ಸೇರುಗಳ ಅಳತೆ; ಐದು ಕೊಳಗ; ದವಸ ಧಾನ್ಯಗಳನ್ನು ಅಳೆಯಲು ಈ ಅಳತೆಯನ್ನು ಉಪಯೋಗಿಸಲಾಗುತ್ತದೆ. ಹತ್ತು ಸೇರು ಹಿಡಿಸುವ ಕೊಳಗದಲ್ಲಿ ಐದು ಬಾರಿ ಅಳೆದರೆ ಐಗಳ ಆಗುತ್ತದೆ (ಧಾರ.ಜಿ)

ಐಗಳ
ಕಾಳು ತುಂಬಿದ ಹತ್ತು ಚೀಲಗಳ ಮಾನ; ಐದು ಕೊಳಗಗಳ ಮಾನ (ರಾಯ.ಜಿ).
ಐಗೊಳ


logo