logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಒಂಕ
ಡೊಂಕ; ವಂಕ; ವಕ್ರ (ಚಾಮ.ಜಿ)

ಒಂಕಿ
ಸ್ತ್ರೀಯರು ತೋಳಿಗೆ ಧರಿಸುವ ಆಭರಣ; ತೋಳುಬಂದಿ; ವಂಕಿ (ಬೆಂಗ್ರಾ.ಜಿ).
ಒಂಕಿಬಂದಿ

ಒಂಖಾರ
ಒಣಮೆಣಸಿನಕಾಯಿ ಪುಡಿ

ಒಂಗೆ
ಹೊಂಗೆ (ಕೋಲಾ.ಜಿ)

ಒಂಗ್ಲನ್ನ
ಮೆಂತ್ಯ ಅನ್ನ; ಮೆಂತ್ಯ ಚಿತ್ರಾನ್ನ

ಒಂಗ್ಲು
ಹೊಂಗ್ಲ; ಬೆಳೆಯ ಮಧ್ಯಮ ಹಂತದಲ್ಲಿ ಮಾಡುವ ಪೂಜೆ (ಬಳ್ಳಾ.ಜಿ/ಬೆಂಗ.ಜಿ).

ಒಂಚಲಗಣ್ಣು
ಒಂಟಿ ಕಣ್ಣು
ಒಪ್ಪಾರಿಕಣ್ಣು (ಗುಲ್ಬ.ಜಿ)

ಒಂಚುಟ್ಕಿ
ಒಂದು ಚಿಟಿಕೆ;ತೋರುಬೆರಳು ಮತ್ತು ಹೆಬ್ಬೆರಳುಗಳ ನಡುವೆ ಹಿಡಿಯಬಹುದಾದಷ್ಟು ಅಳತೆ (ಮಂಡ್ಯ.ಜಿ)

ಒಂಚುಟ್ಟಿ
ಒಂಚುಟ್ಕಿ
ಒಂಚುಟ್ಟಿ ನೆಶ್ಯ ಕೊಡು

ಒಂಟಿಗಿತ್ತಿ
ಒಬ್ಬಂಟಿಯಾಗಿರುವವಳು (ಬಿಜಾ.ಜಿ)


logo