logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಆಂಕಾರ
ಅಹಂಕಾರ; ದುರಹಂಕಾರ; ಗರ್ವ

ಆಂಕೆ
ನಿಯಂತ್ರಣ; ಹತೋಟಿ (ದಕ.ಜಿ).
ಬಲ ಕೈಯಲ್ಲಿ ಆಂಕೆಯೆ ಇಲ್ಯೆ

ಆಂಕ್ಲಿ
ಅಂಕೋಲೆ ಮರ

ಆಂಜ
ಎತ್ತರವಾದ ಅಟ್ಟ

ಆಂಜನೇಯನ ಬೆಟ್ಟ
ಒಂದು ರಂಗೋಲಿ ವಿನ್ಯಾಸದ ಹೆಸರು. ಆಂಜನೇಯ ಸಂಜೀವಿನಿ ಹುಡುಕಲು ಏರಿದ ಬೆಟ್ಟದ ವಿನ್ಯಾಸ. ಬೆಟ್ಟದ ಜೊತೆಗೆ ತುದಿಯಲ್ಲೊಂದು ಧ್ವಜವನ್ನು ಇಟ್ಟು ನಕ್ಷೆಯನ್ನು ಬಿಡಿಸುವುದರ ಮೂಲಕ ಹನುಮಂತನು ತಮ್ಮ ಎಲ್ಲಾ ಇಚ್ಚೆ ನೆರವೇರಿಸಲಿ ಎಂಬ ಆಶಯ (ದಕ.ಜಿ)

ಆಂಜನೇಯವೇಷ
ಹನುಮಂತನ ವೇಷ; ಬಹುರೂಪಿಗಳು ಬುಡ್ಗ ಜಂಗಮರು ಮುಂತಾದವರು ಭಿಕ್ಷೆಮಾಡುವಾಗ ಹಾಕಿಕೊಳ್ಳುವ ವಿವಿಧ ವೇಷಗಳಲ್ಲಿ ಒಂದು

ಆಂಜು
ಹಾಯು; ಚಲಿಸಿದಂತೆ ಭಾಸವಾಗು (ದಕ.ಜಿ)

ಆಂಟಲ
ಅಟ್ಟ

ಆಂಟಿ
ಎರಡರಿಂದ ಮೂರು ಅಡಿ ದೊಡ್ಡದಾದ, ದಪ್ಪ ತುಟಿಯ ಮೀನು (ಉಡು.ಜಿ)

ಆಂಟಿಮುರಿಯುವುದು
ಕುಸ್ತಿಯಲ್ಲಿ ಎದುರಾಳಿಯನ್ನು ಎರಡೂ ಕೈಗಳಿಂದ ತಬ್ಬಿ ಹಿಡಿದು ಎದೆಗೆ ತಲೆಕೊಟ್ಟು ಶರೀರವನ್ನು ಮುರಿದಂತೆ ಮಾಡುವುದು


logo