logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಓಂಕ
ತೋಳಿಗೆ ತೊಡುವ ಆಭರಣ ವಿಶೇಷ.
ಓಕು; ಒಂಕಿ; ವಂಕಿ

ಓಂಕರಿಕೆ
ವಾಕರಿಕೆ (ಕೊಡ.ಜಿ)

ಓಂಕರಿಸು
ಹೂ೦ಕರಿಸು; ಘರ್ಜಿಸು

ಓಂಕಾರ
ಕಷ್ಟ; ತೊಂದರೆ (ಮೈಸೂ.ಜಿ)

ಓಂಜಲು
ಓರೆಯಾಗಿ ತೂಗಾಡು (ದಕ.ಜಿ)

ಓಂಜು
ಸತ್ವರಹಿತ; ಒಣ; ಕೆಟ್ಟ (ಉಕ.ಜಿ)

ಓಂಟೂರಿ
ಒಂದು ಬಗೆಯ ನಗಾರಿ

ಓಂಟ್ರಕ
ಆಮೆ ಜಾತಿಗೆ ಸೇರಿದ ಪ್ರಾಣಿ, ಇದು ಶತ್ರುಗಳು ಎದುರಾದಾಗ ದುರ್ವಾಸನೆಯುಕ್ತ ಗಾಳಿಯನ್ನು ಹೊರಹೊಮ್ಮಿಸಿ ತಪ್ಪಿಸಿಕೊಳ್ಳುವುದು

ಓಂತಿ
ಹಲ್ಲಿಯ ಜಾತಿಗೆ ಸೇರಿದ ಪ್ರಾಣಿ; ಓತಿಕ್ಯಾತ; ಗೋಸುಂಬೆ.
ಓತಿಕಾಟಾ, ಓತಿಕ್ಯಾತ, ಓಂತೆ, ಒಣ್ಣೇಕಾಟ

ಓಂಪುಡಿ
ಕಡಲೆಹಿಟ್ಟಿಗೆ ಓಮವನ್ನು ಹಾಕಿ ಮಾಡುವ ಒಂದು ಬಗೆಯ ಕರಿದ ತಿನಿಸು. ಖಾರಾಸೇವು.
ಬ೦ದವ್ರಿಗೆ ಓಂಪುಡಿ ಕಾಫಿ ಕೊಟ್ಟರು


logo