logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಔಂಕು
ಅಮುಕು; ಒತ್ತಿ ಹಿಡಿ.
ಔಕು, ಔಚುವೆ

ಔಂಗು
ಅಂಗು ಎಂಬ ಸಿಹಿ ಪದಾರ್ಥ ಮಾಡುವಾಗ ಬಳಕೆಯಾಗುವ ವಿಶಿಷ್ಟ ರೀತಿಯ ಗಡಿಗೆ. ಕೆಳಭಾಗದಲ್ಲಿ ಸುತ್ತಲೂ ನಾಲ್ಕು ಕಡೆ ಬಾಣ, ಸಂಕಲನ ಚಿಹ್ನೆ, ತ್ರಿಭುಜ, ವೃತ್ತಾಕಾರದ ರಂಧ್ರಗಳಿರುತ್ತವೆ. ಈ ಗಡಿಗೆಯನ್ನು ಒಲೆಯ ಮೇಲೆ ಬೋರಲು ಹಾಕಿ ಅದರ ಮೇಲೆ ಅಕ್ಕಿಯಹಿಟ್ಟನ್ನು ಸವರಿ ಬೇಯಿಸುತ್ತಾರೆ. ‍ನೋಡಿ- ಅಂಗು

ಔಂತ್ಲ
ನೋಡಿ- ಔತಣ.
ಅಂಟಿಕೆಪಂಟಿಕೆ ಔಂತ್ಲಕ್ಕೆ ಊಟಕ್ಕೆ ಕರೆದಿದ್ದಾರೆ

ಔಂಸ್ತಿ
ಔಷಧಿ

ಔಂಸ್ತಿ
ವಿಷ.
ಔಸುದ್ದಿ; ಔಸುದ್ಯಾ

ಔಖಳಿಮಳಿ
ಮಳೆಗಾಲಕ್ಕಿಂತ ಮುಂಚೆ ಬರುವ ಬೇಸಿಗೆ ಮಳೆ (ಬಿಜಾ.ಜಿ)

ಔಗಿನಮಡಕೆ
ಅಕ್ಕಿಬೆಲ್ಲ ರುಬ್ಬಿ ಸಿಹಿತಿಂಡಿಯನ್ನು ತಯಾರಿಸಲು ಬಳಸುವ ವಿಶಿಷ್ಟ ಆಕಾರದ ಮಡಕೆ (ಚಿಮ.ಜಿ/ಶಿವ.ಜಿ)

ಔಚು
ಅವುಚು; ಮೇಲೆ ಬೀಳು; ತಬ್ಬು (ಮೈಸೂ.ಜಿ)

ಔಜು
ನೀರಿನ ತೊಟ್ಟಿ (ಗುಲ್ಬ.ಜಿ)

ಔಟು
ಸುಳ್ಳು ಸುದ್ದಿ (ಬಳಾ.ಜಿ)


logo