logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಉಂಕಿ
ಮಗ್ಗದ ಉದ್ದ ಹಾಸು (ಧಾರ.ಜಿ); ಹತ್ತಿ ನೂಲಿನ ಹಾಸು (ಬೆಳ.ಜಿ)

ಉಂಕಿ
ನೂಲುವ ಲಾಳಿ

ಉಂಗಿಉಡಿಕೆ
ಧಾರೆಯ ಸೀರೆ (ಧಾರ.ಜಿ)

ಉಂಗಿಲ/ಉಂಗುರ
ಕೈ ಬೆರಳಿನ ಆಭರಣ

ಉಂಗಿಲ/ಉಂಗುರ
ವಿವಾಹ ನಿಶ್ಚಿತಾರ್ಥ (ದಕ.ಜಿ)

ಉಂಗುಉಡಿಕೆ ಶಾಸ್ತ್ರ
ಮದುವೆಯಲ್ಲಿ ಧಾರಾ ಮುಹೂರ್ತಕ್ಕೆ ಮುಂಚೆ ವರನಿಗೆ ಅಲಂಕಾರ ಮಾಡುವ ಶಾಸ್ತ್ರ (ಚಿಮ.ಜಿ)

ಉಂಗುಟ/ಉಂಗ್ಟ
ಉಂಗುಷ್ಠ

ಉಂಗುಟ/ಉಂಗ್ಟ
ಕಾಲಿನ ಹೆಬ್ಬೆರಳು.
ಅವನಿಗೆ ಸಿಟ್ಟು ಉಂಗುಟದಿಂದ ನತ್ತಿ ಥನಕ ಏರ‍್ತು

ಉಂಗುಟ/ಉಂಗ್ಟ
ಕಾಲಿನ ಹೆಬ್ಬೆರಳನ್ನು ತೂರಿಸುವ ಚಪ್ಪಲಿಯ ಭಾಗ.
ಉಂಗ್ಟ ಕಿತ್ಹೋಗಿದೆ, ಚಪ್ಲಿ ಹಾಕಳಕ್ಕೆ ಆಗಲ್ಲ

ಉಂಗುಟಬಾರು
ಚಪ್ಪಲಿಯ ಉಂಗುಷ್ಟದಿಂದ ಎದೆ ಬಾರಿನವರೆಗೆ ಇರುವ ವಿವಿಧ ವಿನ್ಯಾಸದ ಚರ್ಮದ ಎಸಳು


logo