logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಜೂರ
ಫೈಕಸ್ ಅನಾರ್ಟಿಯಾನ: ಅತ್ತಿ ಹಣ್ಣಿನ ಜಾತಿಗೆ ಸೇರಿದ ಒಂದು ಬಗೆಯ ಹಣ್ಣು (ಬಿಜಾ.ಜಿ)

ಅಂಜೂರ
ಕೇಸರಿ ಮತ್ತು ನೇರಳೆ ಮಿಶ್ರಿತ ಬಣ್ಣ (ಬಾಗ.ಜಿ)

ಅಂಜ್ರ
ಹಂಜರ

ಅಂಜ್ರ
ತಡಿಕೆ

ಅಂಜ್ರ
ಮನೆಯ ಮೇಲಿನ ಹುಲ್ಲಿನ ಛಾವಣಿ; ಸೂರು

ಅಂಜ್ರಬಿಗಿಯದು
ಮನೆ ಕಟ್ಟುವಾಗ, ಬಿದಿರನ್ನು ನಾಲ್ಕಾರು ಭಾಗಗಳಾಗಿ ಸೀಳಿ ಒಂದೊಂದೆ ಸೀಳುಗಳನ್ನು ಕೂರಿಸಲು ಆಧಾರವಾಗುವಂತೆ ತೀರುಗಳ ಮೇಲೆ ಅಡ್ಡಡ್ಡಲಾಗಿ ಕತ್ತಾಳೆ, ಸೆಣಬು, ಉಗುಣಿ ಅಂಬು, ಆಲದ ಬಿಳಲು ಮೊದಲಾದವುಗಳಿಂದ ಹಂಜರ ಬಿಗಿದು ಕಟ್ಟುವ ಕ್ರಿಯೆ (ಹಾಸ.ಜಿ)

ಅಂಟಕುಂಟ
ಅಸಂಬದ್ಧ

ಅಂಟಕುಂಟ
ಉದ್ದೇಶಿತ ಕೆಲಸಕ್ಕಾಗುವ ಅಡೆತಡೆ

ಅಂಟಕುಂಟ
ಹಾದಿತಪ್ಪಿದವ

ಅಂಟಕುಂಟ
ಆಯತವೇಳೆಯಲ್ಲಿ ಕೈಕೊಡುವ ಸ್ವಭಾವದವ (ಬಳ್ಳಾ.ಜಿ)


logo