logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಗಮಕಡೆ
ಬೋರಲಾಗಿ; ಮುಖ ಅಡಿಯಾಗಿ

ಅಂಗಮಾ
ಪೂಜೆಗೆ ಬಳಸುವ ಕೊಣಮಾವಿನ ಸೊಪ್ಪು

ಅಂಗರ/ಅಂಗ್ರು/ಹಂಗರ
ಔಷಧಿಗುಣವುಳ್ಳ ಕಾಡುಜಾತಿಯ ಪುದೆಸಸ್ಯ; ಎಲೆಗಳ ಸಮೇತವಾಗಿ ಇದರ ಕಡ್ಡಿಯನ್ನು ಪೊರಕೆಯಾಗಿಯೂ, ಗುಡಿಸಲಿಗೆ ಗೋಡೆಗಳ ಬದಲು ತಡಿಕೆಯಂತೆಯೂ ಬಳಸುತ್ತಾರೆ. ಇದರ ಸೊಪ್ಪನ್ನು ಅರೆದು ಕುರಕ್ಕೆ ಹಚ್ಚುತ್ತಾರೆ.
ಅಂಗರಿಗೆ ಹಸಿ ಇಲ್ಲ ಸೊಸೆಗೆ ಬಿಸಿ ಇಲ್ಲ

ಅಂಗರಿಕೆ
ನೋಡಿ -ಅಂಗರ

ಅಂಗರೀಕ
ಉಡುಗೆ

ಅಂಗರೀಕ
ದೇಹಕ್ಕೆ ಲೇಪಿಸುವ ಸುಗಂಧದ್ರವ್ಯ

ಅಂಗರೀಕ
ಅಂಗರಕ್ಷ; ರಕ್ಷಾಕವಚ

ಅಂಗರೇಕು
ನೋಡಿ - ಅಂಗರೇಕೆ

ಅಂಗರೇಕೆ: ಅಂಗರೇಖೆ
ಅಂಗೈಯಲ್ಲಿರುವ ಗೆರೆಗಳು. ಇವು ವ್ಯಕ್ತಿಯ ಸ್ವಭಾವ ಲಕ್ಷಣ ಹಾಗೂ ಭವಿಷ್ಯವನ್ನು ತಿಳಿಸುತ್ತವೆ ಎಂಬ ನಂಬಿಕೆ.
ಕುಲಗೋತ್ರದಲ್ಲಿ ಕಣ್ಣು ಕೈಕಾಲ್ನಲ್ಲಿ ಅಂಗರೇಕೆನಲ್ಲಿ ರವಷ್ಟೂ ಮಿಸ್ಟೀಕು ಇಲ್ದೆ ಇರತಕ್ಕಂತ ಒಬ್ಳು ರಾಜಕುಮಾರಿನ ನೋಡ್ಕಂಡು ಬಾ

ಅಂಗರೇಕೆ: ಅಂಗರೇಖೆ
ದೇಹಲಕ್ಷಣ
ಅಂಗರೇಕು


logo