logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಗಾಟಮಂಗಾಟ
ರತಿಚೇಷ್ಟೆ

ಅಂಗಾಟಮಂಗಾಟ
ಹುಸಿ ನಿರಾಕರಣೆ

ಅಂಗಾತ
ಬೆನ್ನು ಅಡಿಯಾಗಿ

ಅಂಗಾತಮಲಗು
ಎದೆ ಹೊಟ್ಟೆ ಮೇಲೆ ಮಾಡಿ ಮಲಗುವುದು
ಅಂಗಾತ ಮಲಕೊಂಡು ಆಕಾಶ ನೋಡ್ತಿದ್ದ (ಶಿವ.ಜಿ)

ಅಂಗಾತಮಾಡು
ಕುಸ್ತಿ ಮುಂತಾದವುಗಳಲ್ಲಿ, ಸೋಲಿಸು; ಚಿತ್ ಮಾಡು (ಯಾದ.ಜಿ)

ಅಂಗಾರ
ಕೆಂಡ

ಅಂಗಾರ
ಬೆಂಕಿ
ಬಂಗಾರಕ್ಕೆ ಅಂಗಾರವೇ ಸಾಕ್ಷಿ ಬೆಳಿಗ್ಗೆ ಕೊಳ್ಳಿಯೇ ಸಾಕ್ಷಿ

ಅಂಗಾರ
ಪ್ರಸಾದ ರೂಪದ ಭಸ್ಮ; ಬೂದಿ

ಅಂಗಾರ
ದೇವರ ಮುಂದೆ ಕರ್ಪೂರ ಗುಗ್ಗಳಗಳನ್ನು ಸುಟ್ಟ ಬೂದಿ (ಧಾರ.ಜಿ)
ಅಂಗನೆ ಒಲಿಯೋದು ಬಂಗಾರಕ್ಕೆ ಸಂಗಯ್ಯ ಒಲಿಯೋದು ಅಂಗಾರಕ್ಕೆ

ಅಂಗಾರೆಗಿಡಿ
ಯಕ್ಷಗಾನ ಬಯಲಾಟಗಳಲ್ಲಿ ಬರುವ ಕೋಡಂಗಿಯ ಗಂಡು ವೇಷಭೂಷಣಗಳಲ್ಲಿ ಒಂದು


logo