logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಚನಾಕಟ್ಟು
ಅಂದಾಜು ಬೆಲೆ ನಿರ್ಧರಿಸು (ಧಾರ.ಜಿ)

ಅಂಚಿ
ಹಂಚಿ; ಬಯಲಿನಲ್ಲಿ ಬೆಳೆಯುವ ಒಂದು ಜಾತಿಯ ಹುಲ್ಲು. ಪೊರಕೆ ಮಾಡಲು ಬಳಸುವ ತೆನೆಯುಳ್ಳ ಹುಲ್ಲಿನ ಗಿಡ

ಅಂಚಿ
ನದಿಯ ಪಾತ್ರಕ್ಕೆ ಹೊಂದಿಕೊಂಡಿರುವ ನೆಲ.
ಬಳಬಂಚಿ

ಅಂಚಿಕ
ಅಕ್ಕಸಾಲೆಯ ಸಂಚಿ (ಶಿವ.ಜಿ)

ಅಂಚಿಕಡ್ಡಿಶಾಸ್ತ್ರ
ಮದುವೆ ನಿರ್ಣಯಿಸುವ ಮುಂಚೆ ಮನೆಯ ಹಿರಿಯರು ಮನೆದೇವರನ್ನು ಸ್ಮರಿಸಿಕೊಂಡು ಒಂದು ಹಿಡಿ ಹಂಚಿಕಡ್ಡಿಯನ್ನು ಜೋಡಿ ಬರುವ ಹಾಗೆ ಎತ್ತಿಡುತ್ತಾ ಬರುವುದು. ಕೊನೆಯಲ್ಲಿ ಜೋಡಿ ಬಂದರೆ ಈ ಸಂಬಂಧ ಮುಂದುವರೆಸಬಹುದು, ಒಂದೇ ಬಂದರೆ ಸಂಬಂಧ ಕುದುರುವುದಿಲ್ಲ ಎಂಬ ನಂಬಿಕೆ (ಬೆಂಗ್ರಾ.ಜಿ)

ಅಂಚಿಕಡ್ಡಿ ಸುಡುವುದು
ಮಕ್ಕಳಿಗೆ ಆದ ದೃಷ್ಟಿ ನಿವಾರಣೆಗಾಗಿ ಹಂಚಿಕಡ್ಡಿಯನ್ನು ಬೆಸಸಂಖ್ಯೆಯಲ್ಲಿ ತೆಗೆದುಕೊಂಡು, ಅದಕ್ಕೆ ಬೆಂಕಿ ಹಚ್ಚಿ, ಮಕ್ಕಳ ಮುಖದ ಮುಂದೆ ನಿವಾಳಿಸಿ ತೆಗೆದು ಸುಡುತ್ತಾರೆ. ಅದರ ಬೂದಿಯನ್ನು ಹಣೆಗೆ ಹಚ್ಚುತ್ತಾರೆ (ಮಂಡ್ಯ.ಜಿ)

ಅಂಚಿಕಾಸಿಹುಲ್ಲು
ಸಿಂಬೊಪೋಗಾನ್ ಸೀಸಿಯಸ್: ಕಾಸಿಹುಲ್ಲಿನ ಒಂದು ಪ್ರಭೇದ.
ಕಾಮಂಚ

ಅಂಚಿಗುಳ್ದಾಳಿ
ಕುಸುರಿ ಕೆಲಸ ಮಾಡಿರುವ ತಾಳಿ

ಅಂಚಿಗೆ
ತಟ್ಟೆಯ ಆಕಾರದ ಹೆಂಚಿನ ಬಕ್ಕರೆ.
ಓಡು, ಬವೋಡು

ಅಂಚಿನ ದಟ್ಟಿ
ಅಂಚಿನಿಂದ ಕೂಡಿದ ನಡುಪಟ್ಟಿ


logo