logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಚು ಮುರೀದಂಗೆ
ಸೀರೆ, ಪಂಚೆ ಮೊದಲಾದವುಗಳ ಮಡಿಕೆ ಬಿಚ್ಚದೆ.
ಸ್ಯಾಲೆ ತಕೊಂಡು ಎರಡು ವರ್ಸಾದ್ರು ಇನ್ನೂ ಅಂಚು ಮುರಿದಂಗೆ ಮಡಗವ್ಳೆ

ಅಂಚ್‌ತಗ್ರೀಸೊಪ್ಪು
ರಿನ್ ಕೋಸಿಯ ಮಿನಿಮ: ತೊಗರಿ ಗಿಡದ ರೀತಿ ಇರುವ ಗಿಡ. ದನ ಕುರಿ ಮೊದಲಾದ ಪ್ರಾಣಿಗಳ ಕಾಲು ಮುರಿದಾಗ ಕೋಳಿಮೊಟ್ಟೆ ರಸದೊಂದಿಗೆ ಈ ಗಿಡದ ಅಂಟುರಸ ಬೆರೆಸಿ ಕಟ್ಟಿದರೆ ಕಾಲು ಕೂಡಿಕೊಳ್ಳುತ್ತದೆ (ಹಾಸ.ಜಿ).
ಅಂಟ್ ತಗ್ರಿ

ಅಂಜಕ್ಕಿ
ಅರೆಬೆಂದ ಅನ್ನ (ಬಳ್ಳಾ.ಜಿ)

ಅಂಜಣೆ
ನೋಡಿ - ಅಂಜನ (ಮೈಸೂ.ಜಿ)

ಅಂಜನ
ನಿಧಿಯನ್ನು ಕಂಡುಹಿಡಿಯುವವರು ಅಥವಾ ಅದೃಶ್ಯವಿದ್ಯೆ ಬಲ್ಲವರು ಹಚ್ಚಿಕೊಳ್ಳುವ ಮಾಂತ್ರಿಕ ಶಕ್ತಿಯುಳ್ಳ ಕಾಡಿಗೆ.
ಯಾಕಯ್ಯ ಇಷ್ಟು ಕಷ್ಟ ಜೀವನ. ನಾನು ಅಂಜನ ಹಾಕ್ತೀನಿ, ಬೇಕಾದಂಥ ನಿಧಿ ನಿಕ್ಷೇಪ ಕಣ್ಣಿಗೆ ಕಾಣ್ತವೆ ಅಂದ...

ಅಂಜನಕಪ್ಪು
ನೋಡಿ - ಅಂಜನ

ಅಂಜನವಿದ್ಯೆ
ನೋಡಿ - ಅಂಜನಹಾಕುವುದು

ಅಂಜನಹಾಕುವುದು
ಎಲೆ ಅಥವಾ ಅಂಗೈಗೆ ಮಾಂತ್ರಿಕ ಶಕ್ತಿಯುಳ್ಳ ಕಪ್ಪು ಲೇಪಿಸಿ ಅಗೋಚರವಾಗಿರುವುದನ್ನು ತೋರಿಸುವುದು. ವ್ಯಕ್ತಿಗಳು ಅಥವಾ ವಸ್ತುಗಳು ಕಾಣೆಯಾದಾಗ ಈ ರೀತಿ ಅಂಜನ ಹಾಕಿಕೊಂಡು ನೋಡುವವರನ್ನು ಕರೆಸಿ ಪತ್ತೆ ಮಾಡಿಸುವ ರೂಢಿ ಇದ್ದಿತು

ಅಂಜನಾದೇವಿ
ಹನುಮಂತನ ತಾಯಿ

ಅಂಜರ
ನೋಡಿ - ಅಂಜೂರ (ಧಾರ.ಜಿ)


logo