logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಗಸ
ಅಂಕುಶ

ಅಂಗಸ
ಅಕ್ಕಸಾಲಿಗರು, ಕಮ್ಮಾರರು ಬಳಸುವ ಒಂದು ಬಗೆಯ ಇಕ್ಕಳ (ಬಳ್ಳಾ.ಜಿ)

ಅಂಗಸು
ಹಂಗಿಸು; ಅಣಕಿಸು; ಗೇಲಿಮಾಡು; ಹಾಸ್ಯಮಾಡು

ಅಂಗಳ
ಮನೆಯ ಮುಂದಿನ ಬಯಲು
ಅಂಗಳ ಕಸ ಗುಡಿಸುತ್ತಿದ್ದಳು

ಅಂಗಳ
ಮನೆಗೆ ಸೇರಿರುವ ಆವರಣದ ಬಯಲು
ಅಂಗಳದಲ್ಲಿರೋ ಕರುಗೊಳ ಯಾರೂ ಗ್ಯಾಪಿಸಿಕೊಳ್ಳಲಿಲ್ಲ

ಅಂಗಳ
ತೊಟ್ಟಿಮನೆಯ ಮಧ್ಯೆ ಗಾಳಿ ಬೆಳಕು ಬರಲು ಬಿಟ್ಟಿರುವ ತೆರೆದ ಜಾಗ

ಅಂಗಳಗಪ್ಪೆ
ನೋಡಿ - ಅಂಗಳುಗುಪ್ಪಿ

ಅಂಗಳಬತ್ತಿ
ಸಡುಸಡುವೆ ಗೆಜ್ಜೆಯ ಆಕಾರವಿರುವ ಹತ್ತಿಯ ಹಾರ (ಉಕ.ಜಿ).
ಗೆಜ್ಜೊಸ್ತ್ರ

ಅಂಗಳು
ಕಿರುನಾಲಗೆ; ಗಂಟಲಿನ ಮೇಲ್ಭಾಗದಲ್ಲಿ ಇರುವ ನಾಲಗೆಯಂಥ ಅಂಗ; ತಾಲು (ದಕ.ಜಿ)

ಅಂಗಳುಗುಪ್ಪಿ/ಅಂಗಳಗಪ್ಪೆ
ದನಗಳಿಗೆ ಬರುವ ಗಂಟಲುಬಾವು ರೋಗ; ಮೇವು ತಿನ್ನಲು ಸಾಧ್ಯವಾಗದಂತೆ ದನಗಳ ನಾಲಗೆಯ ಸಂದಿಯಲ್ಲಿ ಏಳುವ ಹುಣ್ಣು. ರಾಕ್ಸನಮುಳ್ಳಿನಿಂದ ಅಂಗಳುಗುಪ್ಪಿಯನ್ನು ಬಗೆದು ತೆಗೆಯುತ್ತಾರೆ (ಮಂಡ್ಯ.ಜಿ/ಚಿಮ.ಜಿ)


logo