logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಗಾಲಖಳಿ
ಪಾದದ ತಳದ ಕಳೆ (ಧಾರ.ಜಿ)

ಅಂಗಾಲಜಡೆ
ನೀಳವಾದ ಜಡೆ; ನೆಲ ಸೋಕುವಷ್ಟು ಉದ್ದದ ಕೂದಲು

ಅಂಗಾಲಲ್ಲಿ ಚಕ್ರ
ಅಂಗಾಲಿನಲ್ಲಿ ಚಕ್ರಾಕಾರದಲ್ಲಿರುವ ರೇಖೆಗಳು. ಹೀಗಿದ್ದವರು ಒಂದೆಡೆ ನೆಲೆಸದೆ ಸದಾ ಅಲೆಮಾರಿಯಂತೆ ಊರೂರು ಸುತ್ತುತ್ತಿರುತ್ತಾರೆ ಎಂದು ಪ್ರತೀತಿ (ಬೆಂಗ್ರಾ.ಜಿ)

ಅಂಗಾಲಿಗೆ ನರೆ ಬರೋವರೆಗೂ
ಹಣ್ಣು ಹಣ್ಣು ಮುದುಕ ಆಗುವವರೆಗೂ; ದೀರ್ಘ ಕಾಲದವರೆಗೂ (ರಾಮ.ಜಿ)

ಅಂಗಾಲು
ಪಾದಗಳ ಕೆಳಗಿನ ಭಾಗ (ಬೆಂಗ.ಜಿ)

ಅಂಗಾಲುಪಣಿ
ಅಂಗಾಲಿನಲ್ಲಿ ಏಳುವ ಒಂದು ಹುಣ್ಣು (ಮಂಡ್ಯ.ಜಿ)

ಅಂಗಾಸಿ
ಕೌಪೀನ; ಚಡ್ಡಿ

ಅಂಗಾಳೆಬಿಂಗಾಳೇ
ಮಕ್ಕಳು ತಮ್ಮ ಸುತ್ತ ತಿರುಗುತ್ತ ಆಡುವ ಆಟ (ಉಕ.ಜಿ)

ಅಂಗಿ
ಸೊಂಟದಿಂದ ಮೇಲ್ಭಾಗದಲ್ಲಿ ಧರಿಸುವ ಪುರುಷರ ಉಡುಪು. ಇದರಲ್ಲಿ ತುಂಡಂಗಿ, ಬಗಲಂಗಿ, ನಿಲುವಂಗಿ, ಕಸೆಅಂಗಿ, ಬಿಗಿಅಂಗಿ ಇತ್ಯಾದಿ ವಿಧಗಳಿವೆ

ಅಂಗಿಕಸೆಕಾಯಿ
ಹಲಸಂದೆ ಕಾಯಿ (ತುಮ.ಜಿ)


logo