logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಗೈಯಟು
ಅಂಗೈನಷ್ಟು; ಚಿಕ್ಕ ಪ್ರಮಾಣದ; ಸಣ್ಣ ಗಾತ್ರದ (ಬಿಜಾ.ಜಿ)

ಅಂಗೈಯಾಗಾರುತಿ ಬೆಳಗು
ಶಸ್ತ್ರವೊಂದಕ್ಕೆ ಕಕ್ಕಡವನ್ನು ಸುತ್ತಿ, ಅದನ್ನು ಮುಂಗೈ ಮಣಿಕಟ್ಟು ಅಥವಾ ಅಂಗೈಯಲ್ಲಿ ಆರುಪಾರಾಗುವಂತೆ ಚುಚ್ಚಿಕೊಂಡು ಕಕ್ಕಡ ಹೊತ್ತಿಸಿ, ಅದರಿಂದ ದೇವರಿಗೆ ಕಕ್ಕಡಾರತಿ ಬೆಳಗುವುದು (ಬಳ್ಳಾ.ಜಿ) ನೋಡಿ - ಕಕ್ಕಡ

ಅಂಗೈರೇಖು
ಅಂಗೈಯಲ್ಲಿರುವ ಗೆರೆ. ಈ ಗೆರೆಗಳ ವಿನ್ಯಾಸವನ್ನು ಆಧರಿಸಿ ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ ನೋಡಿ - ಅಂಗರೇಕೆ

ಅಂಗೈಹಾಂಗ
ಸಮತಟ್ಟಾದ (ಧಾರ.ಜಿ)

ಅಂಗೊಸ್ತ್ರ
ಅಂಗವಸ್ತ್ರ

ಅಂಗೊಸ್ತ್ರ
ವಲ್ಲಿ; ಉತ್ತರೀಯ

ಅಂಗೊಸ್ತ್ರ
ಚಿಕ್ಕಪಂಚೆ;ಪಾಣಿಪಂಚೆ

ಅಂಗ್‌ತಾರ‍್ಣ
ಆಕಾಶದ ಕಡೆಗೆ ಮುಖಮಾಡಿ ಮಲಗಿದ ಭಂಗಿ; ಅಂಗಾತ (ಮೈಸೂ.ಜಿ)

ಅಂಗ್ನೂಲು
ನೋಡಿ - ಅಂಗದಾರ

ಅಂಗ್‌ಮಂಗಿ
ಬೆಡಗಿ; ತಿಳಿದೂ ತಿಳಿಯದವಳಂತೆ ನಟಿಸುವವಳು


logo