logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಗಣಬಲಿ
ಮಾರಿಹಬ್ಬದಲ್ಲಿ ದೇವಸ್ಥಾನದ ಅಂಗಳದಲ್ಲಿ ನಡೆಯುವ ಸಮೂಹ ಕುಣಿತ

ಅಂಗಣೆದಾರ
ನೋಡಿ - ಅಂಗದಾರ.
ಅತ್ತಿರೆಂಬೆಗೆ ಅಂಗಣೆದಾರ ಕಟ್ಟಿ ಅರಿಸಿನ ಕುಂಕುಮ ಇಕ್ಕುತ್ತಾರೆ

ಅಂಗಣ್ಣು
ವಕ್ರನೋಟ ಬೀರುವ ಕಣ್ಣು; ಮಾಲುಗಣ್ಣು; ಮೆಳ್ಳಗಣ್ಣು

ಅಂಗತಾಪ
ಆಯಾಸ (ದಕ.ಜಿ)

ಅಂಗತ್ತು
(ಕ್ರಿ)
ಅಂಗಾತ; ಮುಖ ಮೇಲೆ ಮಾಡಿ ಮಲಗುವ ಭಂಗಿ (ಬಿಜಾ.ಜಿ)

ಅಂಗದನ ಸುಳಿ
ಯಕ್ಷಗಾನದಲ್ಲಿ ಅಂಗದನ ಪಾತ್ರದ ಮುಖವರ್ಣಿಕೆಯಲ್ಲಿ ಬರುವ ಸುಳಿಯಂಥ ವಿನ್ಯಾಸ (ದಕ.ಜಿ)

ಅಂಗದಾರ/ಅಂಗುದಾರ
ಅರಿಸಿಣ ಹಚ್ಚಿದ ನೂಲು; ಹಂಗುನೂಲು; ಪೂಜೆ ಸಂದರ್ಭದಲ್ಲಿ ಬಳಸುವ ಐದು ಅಥವಾ ಒಂಬತ್ತು ಎಳೆಗಳ ಅರಿಶಿಣದ ದಾರ (ದಾವ.ಜಿ)
ಅಂಗಣೆದಾರ, ಅಂಗನೂಲು, ಹೊಂಗದಾರ (ಮೈಸೂ.ಜಿ)

ಅಂಗನಮಣಿ
ಜುಂಜಪ್ಪನ ಹಸುವಿನ ಹೆಸರು

ಅಂಗನೂಲು
ನೋಡಿ - ಅಂಗದಾರ.
ವಂಗನೂಲು, ಹೊಂಗನೂಲು

ಅಂಗಮಂಗೇಕಾಯಿ
ಚಪ್ಪರದವರೆ ಕಾಯನ್ನು ಹೋಲುವ ಒಂದು ಬಗೆಯ ಕಾಯಿ (ಮಂಡ್ಯ.ಜಿ)


logo