logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂಕೋಲಧಾರೆ
ಶೇರುದಾರ ಜನಾಂಗದವರಲ್ಲಿ ವಿಧುರತ್ವ ಪ್ರಾಪ್ತವಾಗದಿರಲೆಂದು ಮಾಡುವ ಅನಿಷ್ಟ ನಿವಾರಣೆಯ ಆಚರಣೆ (ಉಕ.ಜಿ)

ಅಂಕೋಲೆ/ಅಂಕಾಲೆ
ಆಲ್ಯಾಂಜಿಯಮ್ ಲಮಾರ್ಕಿಐ: ಉದ್ದವಾದ ಮುಳ್ಳಿರುವ ಒಂದು ಬಗೆಯ ಮರ. ಸಂಕ್ರಾಂತಿ ಹಬ್ಬದ ಹಿಂದಿನ ದಿವಸ ಇದರ ಕಡ್ಡಿಯನ್ನು ಮನೆಗಳಲ್ಲಿ, ಹುಲ್ಲಿನ ಮೆದೆಗಳಲ್ಲಿ ಸಿಕ್ಕಿಸುತ್ತಾರೆ. ಮಾಟಮಂತ್ರ, ಭೂತಪಿಶಾಚಿಗಳ ಕಾಟವನ್ನು ನಿವಾರಿಸುತ್ತದೆಂಬ ನಂಬಿಕೆಯಿಂದ ಮಕ್ಕಳ ತೊಟ್ಟಿಲಿಗೆ ಕಟ್ಟುತ್ತಾರೆ. ಮೈನೆರೆದ ಹೆಣ್ಣುಮಕ್ಕಳ ಕೋಣೆಯಲ್ಲಿ ಇಡುತ್ತಾರೆ. ಈ ಮರದಿಂದ ವಾಸ್ತುಪುರುಷನನ್ನು ಮಾಡಿ ಗೃಹಪ್ರವೇಶ ಸಂದರ್ಭದಲ್ಲಿ ಮನೆಯ ಈಶಾನ್ಯದಿಕ್ಕಿನಲ್ಲಿ ನವರತ್ನಗಳೊಂದಿಗೆ ಹೂಳುವ ಸಂಪ್ರದಾಯವಿದೆ.
ಹೊಡ್ಗೆಗಡ (ತುಮ.ಜಿ), ಊಡುಗಮರ (ಕೋಲಾ.ಜಿ) (ಚಿತ್ರ ನೋಡಿ)

ಅಂಕ್‍ಪಂಕ್ಲರೋಗ
ಸಣ್ಣಪುಟ್ಟ ಕಾಯಿಲೆ; ಇಂತಹುದೇ ಎಂದು ಹೆಸರಿಸಲಾಗದ ಒಂದು ಸಣ್ಣ ಅನಾರೋಗ್ಯ ಸ್ಥಿತಿ
ಕಸಗಲು (ಮಂಡ್ಯ.ಜಿ/ಬೆಂಗ್ರಾ.ಜಿ)

ಅಂಕ್ಲ
ನೋಡಿ - ಅಂಕಣ

ಅಂಕ್ಲು
ಮಳೆ ಆಶ್ರಯದ ಜಮೀನು (ಶಿವ.ಜಿ).
ಬೆದ್ಲು

ಅಂಗ
ದೇಹದ ಒಂದು ಭಾಗ

ಅಂಗ
ಹಂಗ; ಶುಭ ಅಶುಭಗಳನ್ನು ಸೂಚಿಸುವುದೆಂದು ನಂಬಲಾದ ನೀಲಬಣ್ಣದ ಪಕ್ಷಿ; ಶಕುನದಹಕ್ಕಿ (ಬಳ್ಳಾ.ಜಿ)

ಅಂಗ
ದೋಣಿ ನಡೆಸುವ ಜನಾಂಗ; ಅಂಬಿಗ (ಉಕ.ಜಿ)

ಅಂಗಾಡಕ/ಅಂಗಾಡ್ಕ
ಓರಣ; ಲಕ್ಷಣ; ಅಚ್ಚುಕಟ್ಟು (ಮೈಸೂ.ಜಿ)
೧. ಮಾಡೋ ಕೆಲಸ್ದಾಗೆ ಒಂದು ಅಂಗ ಅಡ್ಕಇರ‍್ಬೇಕು

ಅಂಗಾಡಕ/ಅಂಗಾಡ್ಕ
೨. ಏನೇ ಮಾತಾಡಿದ್ರೂವೇ ಅದ್ರಲ್ಲಿ ಒಂದು ಅಂಗ ಅಡ್ಕ ಇರ‍್ಬೇಕು


logo