logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಣೆ
[ಕ್ರಿ] [ಅಂಕುಶದಿಂದ] ತಿವಿ (ತನ್ನ ನಚ್ಚುವ ಕೆಯ್ದುಗಳನಿತುಂ ಪೊಳೆಯೆ ಮಸೆದೊಟ್ಟಿ ಮತ್ತಹಸ್ತಿಯನಣೆದು ತೋಱಿಕೊಟ್ಟಾಗಳ್: ಪಂಪಭಾ, ೧೨. ೮೩ ವ)

ಅಣೋರಣ್ವಂತರವ್ಯತಿಕ್ರಮಣಮಾತ್ರಂ
[ನಾ] ಅಣುಮಾತ್ರದ ಅಂತರದ ಉಲ್ಲಂಘನೆ (ಜಿನ ನಿನ್ನಂ ಸ್ಮರಿಯಿಪುದಂ ಅಣೋರಣ್ವಂತರ ವ್ಯತಿಕ್ರಮಣಮಾತ್ರಮಂ ಮಱೆದಪೆನೇ: ಆದಿಪು, ೧೦. ೫೯)

ಅಣ್ಕೆ
[ನಾ] ಲೇಪನ (ಚೆಂಬೊನ್ನ ಪಟ್ಟವಣೆ ರನ್ನದ ಕನ್ನಡಿವೆರಸು ಸರ್ವಧಾನ್ಯದ ನಡುವಿರೆ ಮೊಸರಣ್ಕೆವೆರಸಿದ ಎಳೆದಳಿರ್ಗಳಸಂ: ಆದಿಪು, ೪. ೩೩)

ಅಣ್ಪು
[ನಾ] ಲೇಪನ (ಮೃಗಮದದಣ್ಪು ಜಾದಿಯ ಬೞಲ್ಮುಡಿ ನೆಯ್ದಿಲ ಕರ್ಣಪೂರಂ ಉತ್ತು: ಆದಿಪು, ೧೨. ೧೨)

ಅಣ್ಮಿ ಸಾಯಿಂ
[ಕ್ರಿ] ಹೋರಾಡಿ ಸಾಯಿರಿ (ಕುರುಕ್ಷೇತ್ರಮಂ ಕಳವೇೞ್ದಟ್ಟಿದಂ ಅಣ್ಮಿ ಸಾಯಿಂ ಉೞಿಯಿಂ ನಿಮ್ಮೊಂದು ಬಾೞ್ವಾಸೆಯಂ: ಪಂಪಭಾ, ೯. ೯೦)

ಅಣ್ಮು
[ಕ್ರಿ] ಧೈರ್ಯಮಾಡು (ಸಂಸೃತಿಯೊಳ್ಮತ್ತೆ ಗಡಂ ಕಡಂಗಿ ತೊಡರ್ದಾಂ ಮಾಣ್ದಿರ್ಪೆಂ ಎಂದು ಅಣ್ಮಿ ಘೋರ ತಪೋವೃತ್ತಿಯನಾಂತ ಪೆಂಪು ಅತಿಬಳಂಗಕ್ಕುಂ ಪೆಱರ್ಗಕ್ಕುಮೇ: ಆದಿಪು, ೧. ೮೧); [ನಾ] ಪರಾಕ್ರಮ (ತಪೋವನದ ಮುನಿಜನಮುಂ ದೇವತಾಜನಮುಂ ತನ್ನ ಅಣ್ಮಂ ಪೊಗೞೆ: ಪಂಪಭಾ, ೨. ೨೬ ವ); [ಕ್ರಿ] ಪ್ರಯತ್ನಿಸು (ಬಳೆಯಲ್ಕಣ್ಮಿದುದಿಲ್ಲ ವಿಂಧ್ಯಗಿರಿಯುಂ ತನ್ನಾಜ್ಞೆಯಿಂದೊರ್ಮೆ ಮುಕ್ಕುಳಿಸಲ್ ಅಂಬುನಿಧಿ ಸಾಲ್ದುದಿಲ್ಲ: ಪಂಪಭಾ, ೪. ೨೦); [ಕ್ರಿ] ಪೌರುಷ ತೋರು (ಅನಿತು ಅಣ್ಮಿ ಸತ್ತ ನರನಂದನಂಗೆ ಕಣ್ ಸೋಲ್ತು ಬಗೆಯದೆ ಅಮರೇಂದ್ರನಂ ಇನ್ನೆನಗೆ ಎನಗೆಂಬ ದೇವಾಂಗನೆಯರ ಕಳಕಳಮೆ ಪಿರಿದುಮಾಯ್ತು: ಪಂಪಭಾ, ೧೧. ೧೦೫)

ಅಣ್ಮುಗುಂದು
[ಕ್ರಿ] ಪೌರುಷ ಕುಗ್ಗು (ಅಳ್ಕದೆ ಬಳ್ಕದೆ ತನ್ನೊಡಲ್ ಪಡಲ್ವಡುವಿನಮಣ್ಮುಗುಂದನೆ ದಲೇನಭಿಮಾನಧನಂ ಸುಯೋಧನಂ: ಪಂಪಭಾ, ೧೩. ೯೭)

ಅತನು
[ನಾ] ದೇಹವಿಲ್ಲದವನು, ಮನ್ಮಥ (ಎನಗೆಡೆವೇೞ್ಕುಮೆ ಎಂಬವೊಲ್ ಅನಿಬರುಮಂ ಪೂಣ್ದಂ ಅತನು ನನೆಯಂಬುಗಳಿಂ: ಪಂಪಭಾ, ೩. ೪೨)

ಅತನುಚರಿತ
[ನಾ] ಕಾಮಕೇಳಿಯ ಚರಿತ್ರೆ (ತರಳಾಪಾಂಗವಿಳಾಸ ಸ್ಪುರಿತಮೆ ಲೆಕ್ಕಣಿಕೆಯಾಗೆ ನಲ್ಲಳ್ ಮುನ್ನಂ ಬರೆದತನು ಚರಿತಮೀಗಳ್ ಬರೆದಂತಿರ್ಪುದು ಮನ್ಮನಃಪುಸ್ತಕದೊಳ್: ಆದಿಪು, ೪. ೧೪)

ಅತನುಧನು
[ನಾ] ಕಾಮನ ಬಿಲ್ಲು (ಲತೆಯುಂ ಕರ್ನೆಯ್ದಿಲುಂ ಸೋಗೆಯುಂ ಅತನುಧನುರ್ಲೇಖೆಯುಂ: ಆದಿಪು, ೪. ೨೦)


logo