logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಡಿ
[ನಾ] ಹೆಜ್ಜೆ (ಪರಮೋತ್ಸಾಹದಿಂ ಆಗಳೇೞಡಿವರಂ ಭೂಪಾಲರುಯ್ದರ್ ವಿಯಚ್ಚರರೇೞಡಿಯಂ ವಿಯದ್ಗಮನದಿಂದಾಂತುಯ್ದರ್: ಆದಿಪು, ೯. ೭೩)

ಅಡಿಗಡಿಗೆ
[ಕ್ರಿವಿ] ಮತ್ತೆ ಮತ್ತೆ (ವನಜಮುಖಿ ಪಿರಿದುಮನುರಾಗದಿಂದಡಿಗಡಿಗೆ ಸೊಗಯಿಸಿದಳಾಗ ಮೊಗರಾಗದಿಂ: ಆದಿಪು, ೭. ೨೭ ರಗಳೆ)

ಅಡಿಗರ್ದು
[ಕ್ರಿ] ಕೆಳಕ್ಕೆ ಮುಳುಗಿಸು (ಒಂದಱ ನೀರ್ಮಳಲೊಂದರ್ಕೊಂದುತುಂ ಮೇಗೆ ಕೊಂಡು ನೆಗೆವುದಿದೇಂ ಮತ್ತೊಂದಱ ನೀರಡಿಗರ್ದುವುದೆಂದತಿ ವಿಸ್ಮಯದೆ ನೋಡಿದಂ ಭರತೇಶಂ: ಆದಿಪು, ೧೩. ೫೧)

ಅಡಿಗೞ್ದು
[ಕ್ರಿ] ತಳದಲ್ಲಿ ಮುಳುಗಿಸು (ಪಾವುಗಳಂ ಕೊಳಿಸಿ ಮಹಾಗ್ರಾವಮಂ ಉಱದೆ ಅಡಸಿ ಕಟ್ಟಿ ಕೊರಲೊಳ್ ಗಂಗಾದೇವಿಯ ಮಡುವಿನೊಳ್ ಅೞ್ದಿದರ್ ಏವಯಿಸದೆ ತಮ್ಮ ಕುಲಮಂ ಅಡಿಗೞ್ದುವವೋಲ್: ಪಂಪಭಾ, ೨. ೩೨)

ಅಡಿಗಿಡು
[ಕ್ರಿ] [ಅಡಿ+ಕಿಡು] ಆಧಾರ ತಪ್ಪು (ಬೊದಿಲ್ಲೆನೆ ಬಿೞ್ದತ್ತಡಿಗಿಡೆ ಕೂರ್ಮನ ಬೆನ್ನಂದೊಡೆದು ಸಿಡಿಲ್ದೊಡನೆ ನುಚ್ಚುನೂಱಪ್ಪಿನೆಗಂ: ಪಂಪಭಾ, ೧೦. ೭೦); [ಕ್ರಿ] ನಡಿಗೆ ತಪ್ಪು (ಮಚ್ಚರದಿಂ ಗಜೆಗೊಂಡು ಸುತ್ತುಗೊಂಡು ಅಡಿಗಿಡೆ ನುರ್ಗಿ ಪೊಯ್ದು ಪೆಱಪಿಂಗುವುದುಂ: ಪಂಪಭಾ, ೧೧. ೭೪)

ಅಡಿಗುಟ್ಟು
[ಕ್ರಿ] ಹೆಜ್ಜೆ ಹಾಕು, ಕುಣಿ (ದೇವವನಿತೆಯರೆ ಪರಿವಿಡಿಯೊಳ್ ಅಡಿಗುಟ್ಟೆಯುಂ: ಆದಿಪು, ೨೭ ರಗಳೆ)

ಅಡಿಗೊತ್ತು
[ಕ್ರಿ] ಕೆಳಕ್ಕೆ ಅದುಮು (ಬಿರುದರಂ ಒತ್ತಿ ಬೀರರಂ ಅಡಂಗಿಸಿ ಕೊಂಕಿಗರಂ ಕೞಲ್ಚಿ ಚೆನ್ನರಂ ಅಡಿಗೊತ್ತಿ ಮಂಡಳಿಕರಂ ಬೆಸಕಯ್ಸಿ .. .. ಮಾಡಿರೆ ರಾಜಸೂಯಮಂ: ಪಂಪಭಾ, ೭. ೧೮)

ಅಡಿಮೊದಲ್
[ನಾ] ಪಾದದ ಮೂಲ (ಎಮ್ಮಂ ನಡಪು ಉಪದೇಶದಿನಲ್ಲದೊಡೆ ಒಡಗೞಿದಪೆವು ಅಸುವನಿಲ್ಲಿ ನಿನ್ನಡಿಮೊದಲೊಳ್: ಆದಿಪು, ೬. ೭೫)

ಅಡಿಯೂಡು
[ಕ್ರಿ] ಪಾದಗಳಿಗೆ ಲೇಪಿಸು (ಅಡಿಯೂಡಲ್ಕಲತಗೆಯಂ ತುಡಲ್ಕೆ ತುಡುಗೆಯಂ ಉಡಲ್ಕೆ ದಿವ್ಯಾಂಬರಮಂ: ಆದಿಪು, ೭. ೧೧)

ಅಡಿಯೆತ್ತು
[ಕ್ರಿ] ಹೆಜ್ಜೆ ಇಡು, ಹೊರಡು, ದಯಮಾಡಿಸು (ಪೆರ್ಜಸಮನೆ ಪಿಡಿದೆನ್ನನೆ ರಣದೊಳೞಿವೆಂ ಇರದಡಿಯೆತ್ತಿಂ: ಪಂಪಭಾ, ೯. ೮೭)


logo