logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಜಾತಭಯಂ
ಭಯರಹಿತ (ಆತತ ಯಶೋವಿತಾನಂ ಅಜಾತಭಯಂ ಪೂರ್ವಪರಿಮಿತ ಆಯುಷ್ಯಂ ಸಂಜಾತದಯಂ: ಆದಿಪು, ೬. ೬೪)

ಅಜಾತಶತ್ರು
[ನಾ] ಶತ್ರು ಹುಟ್ಟದಿರುವವನು, ಧರ್ಮರಾಯ (ಅಂತು ಅಜಾತಶತ್ರು ಶತ್ರುಪಕ್ಷಕ್ಷಯಕರಕರವಾಳದಂಷ್ಟ್ರಾಭೀಳ ಭುಜಂಗಮೂರ್ತಿ .. .. ಅಪ್ಪ ಅರಿಕೇಸರಿಯ ತೋಳ್ವಲದೊಳ್: ಪಂಪಭಾ, ೪. ೧೦ ವ)

ಅಜಾನೇಯ
[ನಾ] ಒಳ್ಳೆಯ ತಳಿಯ ಕುದುರೆ (ಶುಭಲಕ್ಷಣ ಲಕ್ಷಿತಂಗಳಪ್ಪಜಾನೇಯ ಕಾಂಭೋಜ ವಾಜಿರಾಜಿಗಳೊಳ್: ಪಂಪಭಾ, ೨, ೨೯ ವ)

ಅಜಿತ
[ನಾ] ಜಯಿಸಲಸಾಧ್ಯನಾದವನು, ಕೃಷ್ಣ (ಧರ್ಮರಾಜಂ ರಾಜರಾಜನಲ್ಲಿಗೆ ನಿರ್ವ್ಯಾಜದಿಂ ದಿತಿಜಕುಳ ವಿಜಯಿಯಪ್ಪಜಿತನನೆ ದೂತಕಾರ್ಯಕ್ಕಟ್ಟಿದೊಡೆ: ಪಂಪಭಾ, ೯. ೨೬ ವ)

ಅಜಿನ
[ನಾ] ಚರ್ಮ (ತ್ರಿಜಗತ್ ಸಾಶ್ಚರ್ಯ ದಂಡಸ್ಥಪತಿ ಗೃಹಪತಿ ಛತ್ರಿ ಯೋಷಿತ್ ಪುರೋಧ ಗಜ ನಿಸ್ತ್ರಿಂಶ ಅಶ್ವ ಕಾಕಿಣಿ ಅಜಿನ ಮಣಿ ಚಮೂನಾಥಚಕ್ರಾಧಿನಾಥಂಗೆ: ಆದಿಪು, ೧೨. ೮)

ಅಜಿರ
[ನಾ] ಅಂಗಳ (ಸಂಗರಾಜಿರದೊಳ್ ಕೌರವರೆಂಬ ಕಾಕಕುಳಕ್ಕೆನ್ನೀಯೊಂದೆ ಬಿಲ್ ಸಾಲದೇ: ಪಂಪಭಾ, ೧೨. ೧೩೫)

ಅಜೀವತತ್ವ
[ನಾ] [ಜೈನ] ಅಜೀವ, ಚೇನರಹಿತವಾದದ್ದು. ಅವುಗಳಳ್ಲಿ ಐದು ಬಗೆ (ಚೇತನಾರಹಿತಮಜೀವತತ್ತ್ವ್ವಂ ಅದು ಗತಿಸ್ಥಿತ್ಯವಗಾಹ ಶರೀರಾದಿ ವರ್ತನಾಹೇತು ಧರ್ಮಾಧರ್ಮಾಕಾಶ ಪುದ್ಗಲಕಾಲಭೇದದಿಂ ಪಂಚವಿಧಂ: ಆದಿಪು, ೧೦. ೬೧ ವ)

ಅಜ್ಜ
[ನಾ] [ಆರ್ಯ] ತಂದೆ ಅಥವಾ ತಾಯಿಯ ತಂದೆ (ತನಯಂ ತಾಯ್ ತಂದೆ ತಮ್ಮಂ ಕೆಳೆಯಂ ಅಳಿಯಂ ಆಳ್ ಪಜ್ಜಂ ಎಮ್ಮಜ್ಜಂ ಇಷ್ಟಾಂಗನೆಯೆಂದು: ಆದಿಪು, ೩. ೫೫)

ಅಜ್ಞಾನತೆ
[ನಾ] ತಿಳಿವಳಿಕೆಯಿಲ್ಲದ ಬಗೆ (ದಿವ್ಯವಚನಮಂ ಅದಂ ಅಂತೇನುಂ ಬಗೆಯದೆ ಕುಡಿದು ಅಜ್ಞಾನತೆಯಿಂ ನಂಜುಗುಡಿದರಂತಿರೆ ಕೆಡೆದಂ: ಪಂಪಭಾ, ೮. ೪೦)

ಅಟನಿ
[ನಾ] ಬಿಲ್ಲಿನ ಕೊಪ್ಪು (ಆಸೇತೋ ರಾಮಚಾಪ ಅಟನಿತಟಯುಗ ಟಂಕ ಅಂಕಿತ ಆಖಂಡಖಂಡಾತ್: ಪಂಪಭಾ, ೧೪. ೨೭)


logo