logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಚಿರರುಚಿಸಂಚಳ
[ಗು] ಮಿಂಚಿನ ಕಾಂತಿಯಂತೆ ಚಂಚಲವಾದ (ಭೂತಳರಾಜ್ಯವಿಮೋಹಂ ಅಚಿರರುಚಿಸಂಚಳಂ ಇಂತಳವುಗಿಡಿಸಿದುದು ಮನುಕುಳತಿಳಕನುಮಂ: ಆದಿಪು, ೧೪. ೧೨೧)

ಅಚೇತನನಾಗು
[ಕ್ರಿ] ಮೂರ್ಚೆ ಹೋಗು (ದುರ್ಯೋಧನ ಗದಾಪ್ರಹರಣದಿಂದ ಅಚೇನನಾಗಿರ್ದೊಡೆ ಬಿೞ್ದನಂ ಇಱಿಯೆನೆಂದು: ಪಂಪಭಾ, ೧೩. ೯೫ ವ)

ಅಚೇತನರ್
[ನಾ] ಪ್ರಾಣರಹಿತರು (ಅಂತೆ ಗೆಯ್ವೆನೆಂದು ಬಂದು ಕೊಳನ ತಡಿಯೊಳ್ ಅಚೇತನರಾಗಿ ಬಿೞ್ದಿರ್ದ ತಮ್ಮಂದಿರಿರ್ವರುಮಂ ಕಂಡು: ಪಂಪಭಾ, ೮. ೪೦ ವ)

ಅಚ್ಚ
[ಗು] ಶುದ್ಧ (ಮಹೀಶಂ ತೆಗೆದೆಚ್ಚನಚ್ಚ ಬಿಸುನೆತ್ತರ ಸುಟ್ಟುರೆ ಸೂಸುವನ್ನೆಗಂ: ಪಂಪಭಾ, ೧೦. ೯೮)

ಅಚ್ಚಬೆಳ್ದಿಂಗಳ್
[ನಾ] ಶುಭ್ರವಾದ ಬೇಳುದಿಂಗಳು (ಅಂತು ಸೊಗಯಿಸುವ ಅಚ್ಚಬೆಳ್ದಿಂಗಳೊಳ್ ಸುಧಾಧವಳಿತ ಉತ್ತುಂಗ ರಮ್ಯಹರ್ಮ್ಯದೆರಡನೆಯ ನೆಲೆಯ: ಪಂಪಭಾ, ೪. ೫೨ ವ)

ಅಚ್ಚರಸಿ
[ನಾ] [ಅಪ್ಸರಸ್ತ್ರೀ] ಅಪ್ಸರೆ (ಪೂತ ಜಂಗಮಲತೆಗಳಂತೆಱಗಿ ತನ್ನ ಮುಂದೆ ಬಂದಾಡುವಚ್ಚರಸಿಯರುಮಂ: ಆದಿಪು, ೨. ೬೫ ವ)

ಅಚ್ಚರಸೆ
[ನಾ] ಅಪ್ಸರೆ (ಉಗ್ರಗ್ರಾಹಸ್ವರೂಪದೊಳಿರ್ದ ಅಚ್ಚರಸೆಯರಂ ವಿಶಾಪೆಯರ್ಮಾಡಿ: ಪಂಪಭಾ, ೪, ೨೦ ವ)

ಅಚ್ಚರಿಯಾಗು
[ಕ್ರಿ] ಆಶ್ಚರ್ಯಕರವಾಗು (ಬಳಸಿದ ವೇದಪಾರಗರ ಸಂದಣಿಯೆಂಬಿವಱಿಂ ವಿವಾಹಮಂಗಳಮದು ಕುಂತಿಮಾದ್ರಿಗಳೊಳ್ ಅಚ್ಚರಿಯಾದುದು ಪಾಂಡುರಾಜನಾ: ಪಂಪಭಾ, ೧. ೧೦೭)

ಅಚ್ಚರಿವೆಱು
[ಕ್ರಿ] ಅಚ್ಚರಿಗೊಳಿಸು (ಆ ಲಲಿತಾಂಗಿ ಬೆಚ್ಚನುಸಿರ್ದಚ್ಚರಿವೆತ್ತಿರೆ ಮೂರ್ಛೆವೋಪುದುಂ: ಆದಿಪು, ೩. ೨೩)

ಅಚ್ಚವೆಳ್ದಿಂಗಳ್
[ನಾ] ಶುಭ್ರ ಬೆಳುದಿಂಗಳು (ತನ್ನ ಜಸದಂತೆ ಪಸರಿಸಿದಚ್ಚವೆಳ್ದಿಂಗಳಂ: ಪಂಪಭಾ, ೪. ೬೯ ವ)


logo