logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಗ್ನಿಸೂಕ್ತ
[ನಾ] ಅಗ್ನಿಯ ಸ್ತೋತ್ರ (ಮಂದಪಾಲನೆಂಬ ಮುನಿಗಂ ಒಂದು ಲಾವಗೆಗಂ ಪುಟ್ಟಿದ ನಾಲ್ಕುಂ ಲಾವಗೆಗಳ್ ಅಗ್ನಿಸೂಕ್ತಂಗಳಂ ಓದುತ್ತುಂ ಅದಿರದೆ ಇದಿರಂ ಬರೆ: ಪಂಪಭಾ, ೫. ೧೦೦ ವ)

ಅಗ್ನಿಹೋತ್ರಶಾಲೆ
[ನಾ] ಹೋಮಾಗ್ನಿಯಿರುವ ಸ್ಥಳ (ಅಗ್ನಿಹೋತ್ರಶಾಲೆಗೆ ವಂದು ದರ್ಭಶಯನದೊಳ್ ಒಱಗಿ ಬೆಳಗಪ್ಪ ಜಾವದೊಳ್: ಪಂಪಭಾ, ೧೩. ೩೨ ವ)

ಅಗ್ನೀಧ್ರ
[ನಾ] ಯಜ್ಞಾಗ್ನಿಯನ್ನು ಪ್ರಜ್ವಲನ ಮಾಡುವವನು (ವ್ಯಾಸ ಕಶ್ಯಪ ವಿಶ್ವಾಮಿತ್ರ ಭರದ್ವಾಜ ಬ್ರಹ್ಮ ಅಧ್ವರ್ಯು ಅಗ್ನೀಧ್ರ ಮೈತ್ರಾವರುಣ ಅಗ್ನಿಪರಿಚಾರಕ: ಪಂಪಭಾ, ೬. ೩೩ ವ)

ಅಗ್ರಗಣ್ಯ
[ನಾ] ಶ್ರೇಷ್ಠ (ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮಱೆದೊಱಗಿದಾ ಪ್ರಸ್ತಾವದೊಳ್: ಪಂಪಭಾ, ೧. ೧೦೪ ವ)

ಅಗ್ರಜಾತ
[ನಾ] ಅಣ್ಣ (ನೆಗೞ್ದಭಿಮನ್ಯುವಂ ಚಲದಿಂ ಅಂದಿಱಿದು ಇಂದು ನಿಜಾಗ್ರಜಾತನಂ ಸುಗಿವಿನಂ ಎಚ್ಚು ಬೀರದೊಳೆ ಬೀಗುವ ಸೂತಸುತಂಗೆ: ಪಂಪಭಾ, ೧೨. ೨೦೮)

ಅಗ್ರತನೂಭವ
[ನಾ] ಹಿರಿಯ ಮಗ (ನಿಜಾನ್ವಯೋದ್ಧರಣ ಸಮರ್ಥನಪ್ಪ ಅಗ್ರತನೂಭವಂಗೆ ಆತ್ಮೀಯ ಧರ್ಮ ಧನ ಬಂಧುಗಳಂ ಸಮರ್ಪಿಪ ಸಕಳದತ್ತಿಯುಂ: ಆದಿಪು, ೧೫. ೧೩ ವ)

ಅಗ್ರನಿರ್ವೃತಿ
[ನಾ] ಜೈನ] ಒಂದು ಗರ್ಭಾನ್ವಯಕ್ರಿಯೆ (ಆರ್ಹಂತ್ಯ ವಿಹಾರ ಯೋಗತ್ಯಾಗ ಅಗ್ರನಿರ್ವೃತಿಯೆಂಬ ಅಯ್ವತ್ತಮೂಱು ಗರ್ಭಾದಿ ನಿರ್ವಾಣಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಅಗ್ರಪಲ್ಲವ
[ನಾ] ಆನೆಯ ಸೊಂಡಿಲ ತುದಿ (ಶಿಖರಿತರಂಗಿತ ಚತುರಂಗುಳ ಅಗ್ರಪಲ್ಲವನಿವಸನಂ: ಆದಿಪು, ೧೩. ೪೫. ವ)

ಅಗ್ರಪುತ್ರ
ಹಿರಿಯ ಮಗ (ತಪಕ್ಕೆ ಪೋಪ ಪದದೊಳ್ ತನ್ನಗ್ರಪುತ್ರಂ ಕ್ರಮಂಬಿಡಿದಿರ್ದಂ: ಆದಿಪು, ೨. ೩೭ ವ)

ಅಗ್ರಪೂಜೆ
[ನಾ] ಮೊದಲ ಗೌರವ (ಪೇೞಿಮೀ ಸಭೆಯೊಳ್ ಅಗ್ರಪೂಜೆಗಾರ್ ತಕ್ಕರ್: ಪಂಪಭಾ, ೬. ೪೦ ವ)


logo