logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಅಗಲ
[ನಾ] ಒಂದು ವಸ್ತುವಿನ ಅಡ್ಡಳತೆ (ಅದರಗಲಮೊಂದು ಯೋಜನಂ: ಆದಿಪು, ೧೦. ೨೭)

ಅಗಲಿತು
[ಗು] ವಿಶಾಲ (ಅದಱೊಳಗೆ ಕಪ್ಪುರವಳುಕಿನ ಜಗಲಿ ಅಗಲತಾಗಿ ಸಮೆದು ಚಂದನದೆಳದಳಿರ್ಗಳಂ ಪಾಸಿ: ಪಂಪಭಾ, ೫. ೬ ವ); [ನಾ] ವಿಸ್ತಾರ (ಪುಸಿ ನಸುವಂಚನೆ ನೋರ್ಪು ಅಸಿದು ಅಗಲಿತು ತಕ್ಕು ದಕ್ಕು ಪಗೆ ಕೆಯ್ಬಗೆ ಕೆಯ್ ಕುಸುರಿ ನುಸುಳೆಂಬ ಕೇಣದ ಕುಸುರಿಯಂ ಅಱಿದು ಇಱಿದು ಮೆಱೆದು ಉಱೆದೆ ಅರೆಬರ್: ಪಂಪಭಾ, ೧೦. ೮೧)

ಅಗಲುರ
[ನಾ] ಹರವಾದ ಎದೆ (ಮೃಗಮದದ ಪುಳಿಂಚುಗಳ್ ಪನಿತ್ತಿರಲೆಡೆಯಾದ ಅಗಲುರಮನೆನಗೆ ಪಡೆದಜಂ ಒಗಸುಮಲ್ತು ಎಲಗೆ ನಿನ್ನನೆನಗೆಯೆ ಒಡೆದಂ: ಪಂಪಭಾ, ೮. ೬೭)

ಅಗಲೆ ಪೋೞ್
[ಕ್ರಿ] ಅಗಲವಾಗಿ ಸೀಳು, ಹೋಳುಮಾಡು (ಕುಡಿವೆಂ ದುಶ್ಶಾಸನ ಉರಸ್ಥಳಮಂ ಅಗಲೆ ಪೋೞ್ದು ಆರ್ದು ಕೆನ್ನೆತ್ತರಂ: ಪಂಪಭಾ, ೭. ೧೩)

ಅಗಲೆವೋಗು
[ಕ್ರಿ] ಅಗಲಿಯೇ ಹೋಗು, ದೂರ ಹೋಗು (ಅಗಲೆವೋದ ಹಂಸನನಱಸಲ್ ಪದದೆಳಸುವ ಪೆಣ್ಣಂಚೆ: ಪಂಪಭಾ, ೫. ೫೬)

ಅಗಲೊತ್ತು
[ಕ್ರಿ] ಹರವಾಗಿ ಒತ್ತು (ಸುರಿಗೆಯೊಳುರಮಂ ಬಿಕ್ಕನೆ ಬಿರಿಯಿಱಿದು ಬರಿಯನಗಲೊತ್ತಿ ಮನಂ ಕೊಕ್ಕರಿಸದೆ: ಪಂಪಭಾ, ೧೨. ೧೫೩)

ಅಗಲ್ಕೆ
[ನಾ] ಅಗಲುವಿಕೆ, ವಿಯೋಗ (ಮೆಯ್ಗೊಂಡ ಒಲವಿಂದೆ ಅಗಲ್ಕೆಗೆ ಅಣಂ ಆಱದೆ ಪಕ್ಕಿಗಳೆಲ್ಲಮಂ ಮರುಳ್ಗೊಂಡವೊಲ್ ಊಳ್ದು ಕೂಡೆ ಬೆಸಗೊಂಡು ಬೞಲ್ದುವು ಜಕ್ಕವಕ್ಕಿಗಳ್: ಪಂಪಭಾ, ೪. ೪೮)

ಅಗಲ್ಚು
[ಕ್ರಿ] ಕಳಚು (ಪಸರಿಸೆ ಜರಾಯುಪಟಲಂ ಪಸುಗೂಸುಗಳೊಡಲೊಳ್ ಅವನಗಲ್ಚುವ ಮತಿಯಂ ವಸುಮತಿಗಱಿಪಿ: ಆದಿಪು, ೬. ೬೫)

ಅಗೞ್
[ನಾ] ಕಂದಕ (ಈಂಟುಜಳಧಿಯೆನಿಪ ಅಗೞ ನೀಳ್ಪಿನಿಂ: ಪಂಪಭಾ, ೩. ೨೨)

ಅಗಾಧ
[ಗು] ಅಳೆಯಲಾಗದ (ಅಗಾಧವಾರಿಧಿಯೆ ಗುಣ್ಪಂ .. .. ಏಳಿದಮಾಗೆ ಬಿಸುೞ್ಪೊಡಂ ಬಿಸುೞ್ಕೆಮ ಬಿಸುಡೆಂ ಮದೀಯ ಪುರುಷವ್ರತಮೊಂದುಮನೀಗಳಂಬಿಕೇ: ಪಂಪಭಾ, ೧. ೮೩)


logo