logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಷಡ್ವರ್ಗಸಿದ್ಧಿ
[ನಾ] ಜ್ಯೋತಿಷ್ಯದಲ್ಲಿ ಲಗ್ನ, ಹೋರೆ, ದ್ರೆಕ್ಕಾಣ, ನವಾಂಶ, ದ್ವಾದಶಾಂಶ ಮತ್ತು ತ್ರಿಶಾಂಶ ಇವುಗಳು (ಗ್ರಹಂಗಳೆಲ್ಲಂ ತಂತಮ್ಮ ಉಚ್ಚಸ್ಥಾನಂಗಳೊಳಿರ್ದು ಷಡ್ವರ್ಗಸಿದ್ಧಿಯಂ ಉಂಟುಮಾಡೆ ಶುಭಲಗ್ನೋದಯದೊಳ್: ಪಂಪಭಾ, ೧. ೧೪೪ ವ)

ಷಡ್ವಿಧಸೇನಾನಾಯಕ
[ನಾ] ರಥ ಆನೆ ತುರಗ ಪದಾತಿ ದಿವಿಜ ಖೇಚರ ಎಂಬ ಆರು ಸೈನ್ಯಗಳ ಸೇನಾನಿಗಳು (ಮ್ಲೇಚ್ಛರಾಜ ಸೇನಾಪತಿಚ್ಛದ ಮದಾವಲೇಪಪರಿಲೋಪ ವಿಳಾಸಿಯುಂ ಷಡ್ವಿಧಸೇನಾನಾಯಕ ಪರಾಯಣನುಮಪ್ಪ ಅಯೋಧ್ಯನೆಂಬ ಸೇನಾನಿರತ್ನಮುಂ: ಆದಿಪು, ೧೧. ೩ ವ)

ಷಣ್ಣವತಿ
[ನಾ]ತೊಂಬತ್ತಾರು (ಚೆಲ್ವೆಸೆದುದು ಷಣ್ಣವತಿಸಹಸ್ರ ಅಂತಃಪುರಮವಯವದೊಳೆ ಭರತಚಕ್ರವರ್ತಿಯ ಕೆಲದೊಳ್:ಆದಿಪು, ೧೧. ೩೯)

ಷಷ್ಟಿಕಾವ್ರೀಹಿ
[ನಾ]ಅರವತ್ತು ದಿನಗಳಲ್ಲಿ ಕಟಾವಿಗೆ ಬರುವ ಬತ್ತ (ಕಳಮ ಷಷ್ಟಿಕಾವ್ರೀಹಿ ಯವ ಯಾವನಾಳ .. .. ಧಾನ್ಯಕಾದಿ ವಿವಿಧಧಾನ್ಯಭೇದಂಗಳುಂ:ಆದಿಪು,೬. ೭೨ ವ)

ಷಷ್ಟಿಸಹಸ್ರ
[ನಾ] ಅರುವತ್ತು ಸಾವಿರ (ಅಖಿಳಷಟ್ಖಂಡಭೂಭಾಗಮಂ ಷಷ್ಟಿಸಹಸ್ರಾಬ್ದಂಗಳಿಂ ದಿಗ್ವಿಜಯದೊಳೊಗೆದ ಆನಂದಭೇರೀ ರವಂ: ಆದಿಪು, ೧೪. ೧೪೮)

ಷೋಡಶ
[ನಾ]ಹದಿನಾರು (ಇಂತಿರ್ವರುಂಪೂಣ್ದುಅಲಂಪಿನೊಳುಂಡರ್ಕಡೆಯೆಯ್ದೆಷೋಡಶನದೀನಾಥೋಪಮಆಯುಷ್ಯಮಂ:ಆದಿಪು,೩.೭೬)

ಷೋಡಶಕ್ರಿಯೆ
[ನಾ]ಷೋಡಶಸಂಸ್ಕಾರಗಳು (ಅಂತವರ್ಗೆ ಜಾತಕರ್ಮ ನಾಮಕರಣಾನ್ನಪ್ರಾಶನಚೌಲೋಪನಯನಾದಿ ಷೋಡಶಕ್ರಿಯೆಗಳಂ ಗಾಂಗೇಯಂ ತಾಂ ಮುಂತಿಟ್ಟು ಮಾಡಿ:ಪಂಪಭಾ,೧, ೮೭, ವ) [ಗರ್ಭಾದಾನ, ಪುಂಸವನ, ಸೀಮಂತ, ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ, ಉಪನಯನ, ಪ್ರಾಜಾಪತ್ಯ, ಸಾಮ್ಯ, ಆಗ್ನೇಯ, ವೈಶ್ವದೇವ, ಗೋದಾನ, ಸಮಾವರ್ತನ, ವಿವಾಹ, ಅಂತ್ಯೇಷ್ಟಿ]

ಷೋಡಶ ಋತ್ವಿಜರ್ಕಳ್
[ನಾ] ಯಜ್ಞಕಾರ್ಯದಲ್ಲಿ ವಿವಿಧ ಪಾತ್ರಗಳನ್ನು ವಹಿಸುವ ಹದಿನಾರು ಮಂದಿ (ಅಗ್ನೀಧ್ರ ಮೈತ್ರಾವರುಣ ಅಗ್ನಿಪರಿಚಾರಕ ಉದ್ಗಾತೃ ನೇತೃ ಹೋತೃ ಜಮದಗ್ನಿ ಆದಿಗಳಪ್ಪ ಷೋಡಶರ್ ಋತ್ವಿಜರ್ಕಳಿಂ: ಪಂಪಭಾ, ೬. ೩೩ ವ) [ಹೋತೃಗಣ: ಹೋತೃ, ಮೈತ್ರಾವರುಣ, ಅಚ್ಛಾವಾಹ ಮತ್ತು ಗ್ರಾವಸ್ತುತ್; ಅಧ್ವರ್ಯುಗಣ: ಅಧ್ವರ್ಯು, ಪ್ರತಿಪಸ್ಥಾತಾ, ನೇಷ್ಟಾ ಮತ್ತು ಉನ್ನೇತಾ; ಉದ್ಗಾತೃಗಣ: ಉದ್ಗಾತೃ, ಪ್ರಸ್ತೋತೃ, ಪ್ರತಿಹರ್ತೃ ಮತ್ತು ಸುಬ್ರಹ್ಮಣ್ಯ; ಬ್ರಹ್ಮಗಣ: ಬ್ರಹ್ಮ, ಬ್ರಾಹ್ಮಣಾಚ್ಛಂಸಿ, ಅಗ್ನೀಧ್ರ ಮತ್ತು ಪೋತೃ]

ಷೋಡಶತೀರ್ಥಕರಭಾವನೆ
[ನಾ] [ಜೈನ] ತೀರ್ಥಂಕರನಾಗಲು ಕಾರಣವಾಗುವ ಹದಿನಾರು ಮನೋವೃತ್ತಿಗಳು (ಪರಮಜಿನಪತಿ ಪರಿಭಾಷಿತಮಪ್ಪ ಸಕಳಶ್ರಾವಕವ್ರತಂಗಳಂ ಷೋಡಶ ತೀರ್ಥಕರಭಾವನೆಗಳಂ ಚತುಸ್ತ್ರಿಂಶತ್ ಅತಿಶಯಂಗಳುಮಂ ಅಷ್ಟಮಹಾ ಪ್ರಾತಿಹಾರ್ಯಂಗಳುಮಂ: ಆದಿಪು, ೩. ೪೦ ವ), ನೋಡಿ, ‘ಷೋಡಶಭಾವನೆ’

ಷೋಡಶಭಾವನೆ
[ನಾ][ಜೈನ] ತೀರ್ಥಂಕರನಾಗಲು ಕಾರಣವಾಗುವ ದರ್ಶನವಿಶುದ್ಧಿ, ವಿನಯಸಂಪನ್ನತೆ, ಅನತಿಚಾರ, ಅಭೀಕ್ಷ್ನಕ್ಞಾನೋಪಯೋಗ, ಸಂವೇಗ, ಶಕ್ತಿತಸ್ತ್ಯಾಗ, ಶಕ್ತಿತಸ್ತಪ, ಸಾಧುಸಮಾಧಿ, ವೈಯಾವೃತ್ಯ, ಅರ್ಹದ್ಭಕ್ತಿ, ಆಚಾರ್ಯಭಕ್ತಿ, ಉಪಾಧ್ಯಾಯಭಕ್ತಿ, ಪ್ರವಚನಭಕ್ತಿ, ಅವಶ್ಯಕಾಪರಿಹಾರಿಣಿ, ಮಾರ್ಗಪ್ರಭಾವನೆ, ಪ್ರವಚನವತ್ಸಲತ್ವ ಎಂಬ ಹದಿನಾರು ಮನೋವೃತ್ತಿಗಳು (ತ್ರೈಲೋಕ್ಯ ಕ್ಷೆÆÃಭಕಾರಣ ತೀರ್ಥಕರಪುಣ್ಯಹೇತುಗಳಪ್ಪ ಷೋಡಶ ಭಾವನೆಗಳಂ ಭಾವಿಸಿ: ಆದಿಪು, ೬. ೩೩ ವ)


logo