logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಶರಾಸನಾಗಮ
[ನಾ] ಧನುರ್ವಿದ್ಯೆ (ಸುರಸಿಂಧುಪುತ್ರ ಗುರು ಕರ್ಣ ಕೃಪ ಪ್ರಮುಖರ್ಕಳಿಂತು ನೇರಿದರೆ ಶರಾಸನಾಗಮದೊಳ್ ಎಂಬಿನಂ: ಪಂಪಭಾ, ೧೨. ೬೭)

ಶರಾಸಾರ
[ನಾ] ಬಾಣಗಳ ಮಳೆ (ಅಂತು ನರನಾರಾಯಣರಿರ್ವರುಂ ಅನವರತ ಶರಾಸಾರಶೂನ್ಯೀಕೃತ ಕಾನನಮಾಗೆಚ್ಚು: ಪಂಪಭಾ, ೫. ೫೦ ವ)

ಶರೀರ
[ನಾ] ಪ್ರಾಣಿ (ಜಗತ್ಕಾಯಸ್ವಭಾವಭಾವನಾಪರಂ ಸಕಳಶರೀರ ಗುಣಾಧಿಕ ದುಃಖಾರ್ದಿತಾವಿನೀತರೊಳ್: ಆದಿಪು, ೯. ೧೨೯ ವ)

ಶರೀರತ್ರಿಗುಣಬಹುಳತೆ
[ನಾ] [ಜೈನ] ಪೂರ್ವಶರೀರವನ್ನು ಬಿಡದೆ ತೈಜಸ, ಕಾರ್ಮಣ ಶರೀರಗಳನ್ನು ಹಿಗ್ಗಿಸುವುದು (ಅಂತರ್ಮುಹೂರ್ತಕಾಲದಿಂ ಶರೀರತ್ರಿಗುಣಬಹುಳತೆಯಿಂ ಚತುರ್ದಶರಜ್ಜ್ವಾಯಾಮಾತ್ಮತ್ರಿಗುಣಪ್ರಮಾಣಾತ್ಮಪ್ರದೇಶ ವಿಸರ್ಪಣದಿಂ: ಆದಿಪು, ೧೬. ೪೯ ವ)

ಶರೀರಭಾರಮನಿೞಿಪು
[ಕ್ರಿ] ಸಾಯಿ (ಮಹಾಬಳಖಚರೇಂದ್ರಂ ಪ್ರಾಯೋಪಗಮನವಿಧಿಯಿಂದಂ ಆತ್ಮೀಯ ಶರೀರಭಾರಮನಿೞಿಪಿ: ಆದಿಪು, ೨. ೬೧ ವ)

ಶರೀರಶೋಭೆ
[ನಾ] ಶವಕ್ಕೆ ಮಾಡುವ ಅಲಂಕಾರ (ಹಾಹಾಕ್ರಂದನ ಧ್ವನಿಗಳ್ ಅಂತಃಪುರಕ್ಕಂ ಪುರಕ್ಕಂ ನೆಗೞೆ ಮತಿವರಾದಿಗಳ್ ತದ್ದಂಪತಿಗಳ್ಗೆ ಶರೀರಶೋಭೆಯಂ ಮಾಡಿ: ಆದಿಪು, ೫. ೨೭ ವ)

ಶರೀರೋಪಾದಾನ
[ನಾ] ಹುಟ್ಟು (ಜೀವಂಗಳ್ ಶುಭಾಶುಭಕರ್ಮ ಶೈಲೂಷಪ್ರೇರಿತಂಗಳಾಗಿ .. .. ನಾನಾಕಾರಶರೀರೋಪಾದಾನ ಪರಿತ್ಯಜನಪುರಸ್ಸರಂ ಪರಿಭ್ರಮಿಸುಗುಂ: ಆದಿಪು, ೧೬. ೫೭ ವ)

ಶಲ್ಯ
[ನಾ] ಶಲ್ಯವೆಂಬ ಆಯುಧ, ಕಠಾರಿ (ಆಕರ್ಣಕೃಷ್ಠ ವಿಕ್ರಮಾರ್ಜುನ ಕಾರ್ಮುಕವಿಮುಕ್ತ ನಿಶಿತಸಾಯಕಸಂಕುಳ ಶಲ್ಯನಿಪತಿತ ಅನೇಕ ಕಳಕಳಾಕಳಿತಮುಂ: ಪಂಪಭಾ, ೧೩. ೫೧ ವ)

ಶಶಾಂಕ
[ನಾ] ಚಂದ್ರ (ಧವಳಹಯಂ ಧವಳರಥಂ ಧವಳ ಉಷ್ಣೀಷಂ ಶಶಾಂಕಸಂಕಾಶ ಯಶೋಧವಳಿತ ಭುವನಂ ತಾಗಿದಂ ಅವಯವದಿಂ ಬಂದು ಧರ್ಮತನಯನ ಬಲದೊಳ್: ಪಂಪಭಾ, ೧೧. ೩೯)

ಶಶಿಕಾಂತಶಿಳಾತಳ
[ನಾ] ಚಂದ್ರಕಾಂತಶಿಲೆಯ ಹಾಸುಗಲ್ಲು (ತಚ್ಛಶಿಕಾಂತ ಶಿಳಾತಳಂ ಸಿಡಿಲ್ದು ಅಂದೊಡೆದತ್ತು ಇದೇಂ ಬಿಸಿದೊ ಬೇಟದ ಬೆಂಕೆ ಮೃಗಾಂಕವಕ್ತ್ರೆಯಾ: ಪಂಪಭಾ, ೫. ೭)


logo