logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಶರಭ
[ನಾ] ಸಿಂಹಕ್ಕಿಂತ ಬಲಿಷ್ಠವಾದ ಎಂಟುಕಾಲುಗಳ ಒಂದು ಕಲ್ಪಕ ಪ್ರಾಣಿ (ಉರಿ ಕೊಳೆ ದೆಸೆಗಾಣದೆ ದೆಸೆವರಿವರಿದು ಕುಜಂಗಳಂ ಪಡಲ್ವಡಿಸಿ ಭಯಂಬೆರಸು ಒಳಱೆ ನೆಗೆದುದಾ ವನ ಕರಿ ಶರಭ ಕಿಶೋರಕಂಠಗರ್ಜನೆ ಬನದೊಳ್: ಪಂಪಭಾ, ೫. ೯೧)

ಶರಭವನ
[ನಾ] ಬಾಣಗಳ ಮನೆ, ಬತ್ತಳಿಕೆ (ಕಂತುಶರಭವನನಾ ಪ್ರಿಯಕಾಂತಾ ಭ್ರೂವಿಭ್ರಮ ಗ್ರಹಾಗ್ರಹ ವಶದಿಂ: ಪಂಪಭಾ, ೧. ೬೬)

ಶರಶಯ್ಯೆ
[ನಾ] ಬಾಣಗಳ ಹಾಸಿಗೆ (ಚಿತ್ತದೊಳ್ ಮೃಡಂ ತೊಡರ್ದಿರೆ ಬಿೞ್ದು ಅದೇಂ ಎಸೆದನೋ ಶರಶಯ್ಯೆಯೊಳ್ ಅಂದು ಸಿಂಧುಜಂ: ಪಂಪಭಾ, ೧೩, ೬೨)

ಶರಶಾಳಿ
[ನಾ] ನಿಪುಣ ಬಿಲ್ಗಾರ (ಶರಶಾಳಿಯೆಂ ಎಂಬುದಂ ಈ ಶರದಿಂದೆಮಗಱಿಪಲೆಚ್ಚು ಕುಲಧನಚಯಮಂ ತರಿಸಿ ಕೊಳಲ್ಬಗೆದ ಅದಟನ: ಆದಿಪು, ೧೨. ೯೯)

ಶರಸಂಧಾನ
[ನಾ] ಬಿಲ್ಲಿಗೆ ಬಾಣವನ್ನು ಹೂಡುವುದು (ಶರಸಂಧಾನದ ಬೇಗಂ ಅಂಬುಗಳಂ ಅಂಬು ಈಂಬಂತೆ ಮೇಣಂಬಿನಾಗರಮೆಂಬಂತೆನೆ ಪಾಯ್ದ ಅರಾತಿಶರ ಸಂಘಾತಂಗಳಂ ನುರ್ಗಿ: ಪಂಪಭಾ, ೧೧. ೪೦)

ಶರಸ್ತಂಬ
[ನಾ] ಲಾಳದ ಕಡ್ಡಿ, ಜೊಂಡು (ಒಗೆದ ಶರಸ್ತಂಬದೊಳ್ ಇರ್ಬಗಿಯಾಗಿ ಮನೋಜರಾಗರಸಂ ಉಗುತರೆ ತೊಟ್ಟಗೆ ಬಿಸುಟು ಬಿಲ್ಲಂ ಅಂಬುಮಂ ಅಗಲ್ದಂ ಆಶ್ರಮದಿಂ ಉದಿತಲಜ್ಜಾವಶಂ: ಪಂಪಭಾ, ೨. ೩೩)

ಶರಾಚಾರ್ಯ
[ನಾ] ಬಿಲ್ವಿದ್ಯೆಯ ಗುರು, ದ್ರೋಣ (ತದೀಯ ಕೌಕ್ಷೇಯP ಧಾರಾವಿದಾರಿತಶರೀರನುಂ ಆಗಿ ಬಿೞ್ದಿರ್ದ ಶರಾಚಾರ್ಯರಂ ಕಂಡು: ಪಂಪಭಾ, ೧೩. ೫೫ ವ)

ಶರಾಸನ
[ನಾ] ಬಿಲ್ಲು (ಬೂದಿ ಜೆಡೆ ಲಕ್ಕಣಂ ತಪಕೆ ಆದುವು ಎರೞ್ದೊಣೆ ಶರಾಸನಂ ಕವಚಂ ಇದೆಂತಾದುವೋ ಮುತ್ತುಂ ಮೆೞಸುಂ ಕೋದಂತುಟೆ ನಿನ್ನ ತಪದ ಪಾಂಗೆಂತು ಗಡಾ: ಪಂಪಭಾ, ೭. ೯೨)

ಶರಾಸನಗುಣಘಾತಜಾತಕಾಳಿಕೆ
[ನಾ] ಬಿಲ್ಲಿನ ಹೆದೆಯ ಹೊಡೆತದಿಂದ ಆದ ಕಲೆ (ವಿಜಯ ಶರಾಸನಗುಣಘಾತ ಜಾತಕಾಳಿಕೆಯನೆತ್ತಮಗ್ಗಳಿಸಿದುದು ಆ ಭುಜಬಲಿಯ ಭುಜದ್ವಯದೊಳ್ ಭುಜಂಗನಿಶ್ವಾಸ ಧೂಮವೇಣೀನಿಕರಂ: ಆದಿಪು, ೧೪. ೧೪೧)

ಶರಾಸನವಿದ್ಯೆ
[ನಾ] ಬಿಲ್ವಿದ್ಯೆ (ಆಲೀಢ ಪ್ರತ್ಯಾಲೀಡ ಸಮಪಾದಂಗಳೆಂಬ ಆಸನಂಗಳೊಳಂ ಪೆಱವುಂ ಶರಾಸನವಿದ್ಯೆಗಳೊಳ್ ಅತಿ ಪ್ರವೀಣರುಂ ಜಾಣರುಂ ಆಗಿ: ಪಂಪಭಾ, ೧೩. ೩೮ ವ)


logo