logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಶರತ್ಸಮಯ
[ನಾ] ಶರತ್ಕಾಲ (ಅಮೃತಮಯೋಕ್ತಿ ಶರತ್ಸಮಯ ಸುಧಾಂಶುವಿಶದಕೀರ್ತಿವಿತಾನಂ: ಆದಿಪು, ೧. ೩೦)

ಶರದ
[ನಾ] ಸೆಕೆ (ಆ ಗುಹೆಯೊಳಗಣ ಶರದದೊಳಾಗಳೆ ಬಸವಳಿದ ಬಲಮನಾಱಿಸುವವೊಲಾಯ್ತಾ ಗಿರಿಯ ಕೊಳದ ಮರಗಳ ಪೂಗಳ ಕಂಪನೆ ತೆರಳ್ಚಿ ಬೀಸುವ ಪವನಂ: ಆದಿಪು, ೧೩. ೫೬); [ನಾ] ಶರತ್ಕಾಲ (ಶರದದ ಚಂದ್ರನಂ ವಿಮಲಚಂದ್ರಿಕೆ ಬಾಳದಿನೇಶನಂ ತಮೋಹರಕಿರಣಂ ಕಿಶೋರಹರಿಯಂ ನವಕೇಸರಾಜಿ ಪಂಪಭಾ, ೨. ೩೯)

ಶರದಾಗಮ
[ನಾ] ಶರತ್ಕಾಲದ ಆರಂಭ (ಘನಾಗಮಂ ಮೊದಲ್ಗಿಡೆ ಶರದಾಗಮಂ ನೆಱೆಯೆ ಪರ್ಬೆ ಸಮಸ್ತಮಹೀವಿಭಾಗಮಂ: : ಪಂಪಭಾ, ೭. ೬೯)

ಶರದಾತಪ
[ನಾ] ಶರತ್ಕಾಲದ ಬಿಸಿಲು, ಮಾಗಿಯ ಬಿಸಿಲು (ಪೊಳೆವಲರ ಪಸೆಯೊಳಿರ್ದುಂ ಪುಳಿನದ ಲೋಹಾಸನಂಗಳೊಳ್ ನೆಮ್ಮಿರ್ದುಂ ಚಳದಳಕೆಯರ್ ಅರೆಬರ್ ಅದೇಂ ಕಳೆದರೊ ಶರದಾತಪಪ್ರಭೂತ ಶ್ರಮಮಂ: ಆದಿಪು, ೧೧. ೭೬)

ಶರಧಿ
[ನಾ] ಬತ್ತಳಿಕೆ (ಬಂದು ದ್ರೋಣಾಚಾರ್ಯಂಗೆ ಪೊಡೆವಟ್ಟು ಶರಧಿಯಿಂ ದಿವ್ಯಾಸ್ತ್ರಂಗಳಂ ಉರ್ಚಿಕೊಡು: ಪಂಪಭಾ, ೨. ೭೮ ವ)

ಶರದ್ಘನ
[ನಾ] ಶರತ್ಕಾಲದ ಮೋಡ, ಬೆಳ್ಮುಗಿಲು (ಆನ್ನೋಡೆ ನೋಡೆ ನೋಡ ಮನನ್ನೋಡುವವೊಲ್ ಶರದ್ಘನಂ ಕರಗಿದುದು: ಆದಿಪು, ೪. ೬೬)

ಶರಪಂಜರ
[ನಾ] ಬಾಣಗಳಿಂದ ಮಾಡಿದ ಪಂಜರ, ಶಯ್ಯೆ (ಅಂತು ಶರಪಂಜರದೊಳ್ ಒಱಗಿಯುಂ ಒಡಲಿಂ ಪತ್ತುವಿಟ್ಟು ಪೋಪ ಜೀವಮಂ ಪೋಗಲೀಯದೆ: ಪಂಪಭಾ, ೧೧. ೪೭ ವ)

ಶರಪರಿಣತಿ
[ನಾ] ಬಾಣವಿದ್ಯೆಯ ಪ್ರೌಢಿಮೆ (ಅನ್ನುಮಂ ಗೆಲೆವಂದ ಸಾಮಂತಚೂಡಾಮಣಿಯ ಶರಪರಿಣತಿಯಂ ಆರಯಲೆಂದು: ಪಂಪಭಾ, ೨. ೫೯ ವ

ಶರಪಾತ
[ನಾ] ಬಾಣಗಳ ಮಳೆ (ಶರಪಾತಮೆ ದೂತನವೊಲ್ ತರೆ ಮಾಗಧವರತನುಪ್ರಭಾಸಾಮರರಂ ಕರುಣಿಸಿ ಬಿಟ್ಟಂ ಕುಲಧನಪರಿಕರಮಂ ಕಯ್ಗೆಮಾಡಿ ಮನುಕುಲತಿಲಕಂ: ಆದಿಪು, ೧೪. ೫೫)

ಶರಪಾಶ
[ನಾ] ಬಾಣಗಳ ಹಗ್ಗ, ಬಾಣಗಳ ಬಲೆ (ನಿಮಿರ್ವ ಸುಯ್ಗಳಿಂ ಕುಸಿಯುತ್ತುಂ ಶರಪಾಶಂಗಳ ನಡುವಣ ಹರಿಣಿಯವೋಲ್ ಮನದೊಳಾಗಳ್ ಆಕುಳೆಯಾದಳ್: ಆದಿಪು, ೪. ೫೦)


logo