logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಶಿಲ್ಪಕರ್ಮ
[ನಾ] ಕುಶಲಕಲೆ (ಅಸಿ ಮಸಿ ಕೃಷಿ ವಣಿಕಗ್ವಿದ್ಯಾ ಶಿಲ್ಪಕರ್ಮಂಗಳಂ ಶುದ್ಧವೃತ್ತಿಯಿಂದ ಅರ್ಥೋಪಾರ್ಜನಂ ಗೆಯ್ವ ವಾರ್ತೆಯುಂ: ಆದಿಪು, ೧೫. ೧೩ ವ)

ಶಿವಪದ
[ನಾ] ಮುಕ್ತಿಸ್ಥಾನ (ಶಿವಪದಪರ್ಯಂತಂಬರಂ ಅಮೋಘಮುದ್ಧರಿಸುಗೆ ತಾತ್ಪರ್ಯದಿಂ ಅರ್ಹಂ ಸಿದ್ಧ ಆಚಾರ್ಯ ಉಪಾಧ್ಯಾಯ ಸರ್ವಸಾಧುಗಳೆಮ್ಮಂ: ಆದಿಪು, ೧. ೬)

ಶಿವಾ
[ನಾ] ನರಿ (ಪ್ರತಿಮೆಗಳೞ್ತು ಮೊೞಗಿದುದತಿರಭಸದೆ ಧಾತ್ರಿ ದೆಸೆಗಳುದುರಿದುವು ಭೂತಪ್ರತತಿಗಳಾಡಿದುವು ಒಳಱಿದವು ಅತಿ ರಮ್ಯಸ್ಥಾನದೊಳ್ ಶಿವಾನಿವಹಂಗಳ್: ಪಂಪಭಾ, ೧. ೧೩೨)

ಶಿವಾಶಿವರವ
[ನಾ] [ಶಿವಾ+ಅಶಿವರವ] ನರಿಗಳ ಅಶುಭಕರ ಊಳು (ನೀಮುಂ ಈ ಮರದಡಿಯೊಳ್ ಶಿವಾಶಿವರವಂಗಳಿಂ ಎೞ್ಚಱರುವಂತುಟಾದುದೇ: ಪಂಪಭಾ, ೩. ೧೧)

ಶಿಶಿರ
[ಗು] ಶೀತಲ, ತಂಪಾದ (ಅಂತು ಕಾಳಿಂದೀಜಲಶಿಶಿರಶೀಕರ ವಾರಿಚಾರಿಯುಂ ಮೃಗಯಾಪರಿಭ್ರಮಶ್ರಮೋತ್ಥಿತ ಸ್ವೇದಜಲ ಲವಹಾರಿಯುಂ ಆಗಿ ಬಂದ ಮಂದಾನಿಲಕ್ಕೆ: ಪಂಪಭಾ, ೫. ೫೩ ವ)

ಶಿಶಿರಕರ
[ನಾ] ತಂಪುಕಿರಣ[ವುಳ್ಳವನು], ಚಂದ್ರ (ಬಾಳಕಳಹಂಸೆ ಬಾಳಮೃಣಾಳಂಗಳ ನಡುವೆ ಶಿಶಿರಕರ ಕರಶತದಾಂದೋಳಿರ್ಪಂತಿರ್ದುದು ಲೀಲೆಯಿಂ: ಆದಿಪು, ೧೧. ೪೯)

ಶಿಶಿರದ್ರವ್ಯ
[ನಾ] ತಂಪು ಸಾಮಗ್ರಿ (ಏಕೀಭೂತ ಸಕಲಭುವನ ಶಿಶಿರದ್ರವ್ಯ ಸಂಬಾರದ್ರವ್ಯ ಶಂಕಾಕರ ಶಿಖರಿಣೀ ರಮಣೀಯಮುಂ: ಆದಿಪು, ೧೧. ೨೬ ವ)

ಶಿಶಿರಶೀಕರಾಸಾರ
[ನಾ] ತಂಪು ತುಂತುರ ಸೋನೆ (ಅಂತು ಮಳಯಜ ರಸಶಿಶಿರಶೀಕರಾಸಾರಚಾರಿಯಾಗಿ ಬಂದ ಮಂದಾನಿಳನ ಬೞಿಯನೆ ಬಂದು: ಆದಿಪು, ೧೧. ೫೫ ವ)

ಶಿಶು
[ನಾ] ಮಗು (ಪುಟ್ಟುವುದುಂ ಧರ್ಮಮೊಡವುಟ್ಟಿದುದು ಈತನೊಳೆ ಧರ್ಮನಂಶದೊಳ್ ಈತಂ ಪುಟ್ಟಿದನೆಂದಾ ಶಿಶುಗೊಸೆದಿಟ್ಟುದು ಮುನಿಸಮಿತಿ ಧರ್ಮಸುತನೆನೆ ಪೆಸರಂ: ಪಂಪಭಾ, ೧. ೧೨೨)

ಶಿಶುಮಾರ
[ನಾ] ಮೊಸಳೆ (ಬೆನ್ನಟ್ಟೆ ದುರ್ಮೋಹಮತ್ಸ್ಯಗಣಂಗಳ್ ಕಡಿದಿಕ್ಕೆ ಲೋಭಮಕರಾನೀಕಂಗಳ್ ಆಟಂದು ನುಣ್ಣಗೆ ನುಂಗುತ್ತಿರೆ ಮಾರರಾಗಶಿಶುಮಾರಂಗಳ್ ಮಹೋಗ್ರಂUಳ್ ಇನ್ನೆಗಂ ಓರಂತೆ ತೊೞಲ್ದೆಂ: ಆದಿಪು, ೯. ೬೦)


logo