logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಶಿಖರ
[ನಾ] ತುದಿ (ತೃಣಶಿಖರ ಅಧ್ಯುಷಿತಾಂಭಃಕಣಸಂಚಳಂ ಅಮರಚಾಪಚಪಳಂ ವಿದ್ಯುತ್ ಕ್ಷಣಿಕಂ: ಆದಿಪು, ೪. ೭೫)

ಶಿಖರಿ
[ನಾ] ಶಿಖರವುಳ್ಳದ್ದು, ಬೆಟ್ಟ (ಗಗನತಳಮಂ ತಱುಂಬುವಂತಿರ್ದ ಶಿಖರಿಶಿಖರಂಗಳಿಂದಂ: ಪಂಪಭಾ, ೭. ೨೯ ವ)

ಶಿಖರಿಣಿ
[ನಾ] ಒಂದು ಭಕ್ಷ್ಯ, ಸೀಕರಣೆ (ಏಕೀಭೂತ ಸಕಳಭುವನ ಶಿಶಿರದ್ರವ್ಯಸಂಬಾರದ್ರವ್ಯಶಂಕಾಕರ ಶಿಖರಿಣೀ ರಮಣೀಯಮುಮಂ: ಆದಿಪು, ೧೧. ೨೬ ವ)

ಶಿಖಾಕಳಾಪ
[ನಾ] ಬೆಂಕಿಯ ನಾಲಗೆಗಳ ಸಮೂಹ (ಅಗ್ನಿದೇವನ ಶಿಖಾಕಳಾಪದ ಕೋಳುಮಂ ಎಂತಾನುಂ ಬಂಚಿಸಿ ಬಲೆಪಱಿದ ಕೋಕನಂತೆ ಒರ್ವ ವನಪಾಲಕಂ ಪೋಗಿ ದೇವೇಂದ್ರನಂ ಕಂಡು: ಪಂಪಭಾ, ೫. ೯೩ ವ)

ಶಿಖಾವಳ
[ನಾ] ನವಿಲು (ಪೊಳೆವಿನಕಿರಣಂ ಮೆಯ್ಗಳನಳುರೆ ಕನಲ್ದಗಿದು ಸೋಗೆಯಂ ಪರಪಿ ನೆೞಲ್ಗಳನಾಸೆವಡೆ ಶಿಖಾವಳಕುಳತಾಂಡವಮೆಸೆದುದು ಶರತ್ಸಮಯದೊಳ್: ಆದಿಪು, ೧೧. ೫೧)

ಶಿಖಿ
[ನಾ] ಬೆಂಕಿ (ಕ್ರಂದತ್ ಸ್ಯಂದನ ಜಾತ ನಿರ್ಗತ ಶಿಖಿಜ್ವಾಳಾಸಹಸ್ರಂಗಳ್ ಆಟಂದೆತ್ತಂ ಕವಿದೇೞ್ವ ಬೇವ ಶವಸಂಘಾತಂಗಳಂ: ಪಂಪಭಾ, ೧೩. ೭೧); [ನಾ] ನವಿಲು (ಭವ್ಯನೃಪನಿಕರಮದೇನೆಂಬುತ್ಸಾಹದೆ ನಲಿದುದೊ ಸಾಂಬುಪಯೋಧರಕೆ ನಲಿವ ಶಿಖಿನಿಕರದವೊಲ್: ಆದಿಪು, ೧೦. ೧೨)

ಶಿಖಾನೀಕ
[ನಾ] [ಶಿಖಾ+ಆನೀಕ] ಜ್ವಾಲೆಗಳ ಮಾಲೆ (ಮುಳಿದೆಚ್ಚಾಗಳ್ ಮಹೋಗ್ರಪ್ರಳಯ ಶಿಖಿಶಿಖಾನೀಕಮಂ ವಿಸ್ಫುಲಿಂಗಂಗಳುಮಂ ಬೀಱುತ್ತುಂ: ಪಂಪಭಾ, ೧೨. ೨೧೩)

ಶಿಖೆ
[ನಾ] ಜ್ವಾಲೆ (ಬನಮನಿತುಂ ಶಿಖೆಗಳಲುರೆ ಬೆಂಕೆಯ ಪೊಯ್ದುರ್ವಿನೊಳೆ ಕೊರಗಿರ್ದ ಲತೆಗಳ ನನೆಕೊನೆಯನೆ ದಹನನಳುರ್ದು ಕೊನೆಗೊನೆಗೊಂಡಂ: ಪಂಪಭಾ, ೫. ೮೭)

ಶಿತಶರ
[ನಾ] ಹರಿತವಾದ ಬಾಣ (ಪೂಣ್ದಂತೆ ಊಡು ಪೂಡು ಶಿತಶರಸಂತತಿಯಂ ಬಿಲ್ಲೊಳೇಕೆ ನೀಂ ತಡೆದಿರ್ಪಯ್: ಪಂಪಭಾ, ೫. ೮೩)

ಶಿತಾಸ್ತ್ರ
[ನಾ] ಚೂಪಾದ ಬಾಣ [ಆಯುಧ] (ದಿವಿಜರ್ ವಾಯುಪಥದೊಳ್ ಶಿತಾಸ್ತ್ರಂಗಳಂ ಪೊಂಕಂಗಿಡಿಸೆ ಸುಗಿದಂ ಭಾರ್ಗವಂ ಇದೇಂ ಪ್ರತಿಜ್ಞಾಗಾಂಗೇಯಂಗೆ ಅದಿರದಿದಿರ್ ನಿಲ್ವನ್ನರೊಳರೇ: ಪಂಪಭಾ, ೧. ೮೦)


logo