logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಶಾರಿಕೆ
[ನಾ] ಮೈನಾ ಹಕ್ಕಿ (ಮೃದುಮಧುರವಿದಗ್ಧ ಮುಗ್ಧ ಪರಿಹಾಸ ಮನೋಹರಾಳಾಪ ಶುಕಶಾರಿಕೆಗಳಿರ್ದಂತೆ ಪಂಜರಗತ ಕುಂಜರಾರಾತಿಕಿಶೋರಕೇಸರಿಗಳನೆ ತರಿಸಿ ನೋಡುತ್ತಿರಲುಂ: ಆದಿಪು, ೮. ೩೨ ವ)

ಶಾರೀರ
[ಗು] ಶರೀರಕ್ಕೆ ಸಂಬಂಧಿಸಿದ, ದೈಹಿಕ (ದುಷ್ಕೃತಂ ಸಡಿಲ್ದೊಡೆ ಪಡೆಗುಂ ಮಾನುಷ್ಯಮನತಿದಾರುಣ ಮಾನಸ ಶಾರೀರ ದುಃಖಪೀಡಿತನಕ್ಕುಂ: ಆದಿಪು, ೯. ೪೮)

ಶಾರ್ದೂಲ
[ನಾ] ಹುಲಿ (ಭೀಕರಶಾರ್ದೂಲಕುಳಂ ಕುರಂಗ ಕುಲದೊಳ್ ತಳ್ಪೊಯ್ದು ಬಂದಾಡೆ: ಆದಿಪು, ೯. ೯೭)

ಶಾರ್ದೂಲನಖಾಂಕುರ
[ನಾ] ಹುಲಿಯುಗುರು (ಕೊರಲೊಳ್ ಶಾರ್ದೂಲ ನಖಾಂಕುರಂಗಳುಂ ಹರಿ ನಖಾಂಕುರಂಗಳುಮಂ ಅಂದೇಂ ಕರಮೆಸೆದಿರ್ದುವೊ ಶೌರ್ಯಾಂಕುರಗಳೆಂಬಿನಂ ಆದಿದೇವಾತ್ಮಜನಾ: ಆದಿಪು, ೮. ೪೦)

ಶಾಲತರು
[ನಾ] ಸಾಲವೃಕ್ಷ (ಬಱಸಿಡಿಲ್ ಪೊಡೆಯೆ ಕೆಡೆದ ಶಾಲತರುಗಳಂತಿರ್ದ ನಾಲ್ವರ್ ತಮ್ಮಂದಿರುಮಂ ಕಂಡು ಬೆಕ್ಕಸಂಬಟ್ಟು: ಪಂಪಭಾ, ೮. ೪೫ ವ)

ಶಾಲ್ಮಲಿ
[ನಾ] ಬೂರುಗ (ಇದು ಶಾಲ್ಮಲಿಪಾದಪಂ ಇಂತಿದು ಜಂಬೂವೃಕ್ಷಂ: ಆದಿಪು, ೨. ೨೬)

ಶಾಶ್ವತಪದ
[ನಾ] ಮೋಕ್ಷ (ಶ್ರೀಮತ್ ಸಮಂತಭದ್ರಸ್ವಾಮಿಗಳ ಜಗತ್ ಪ್ರಸಿದ್ಧ ಕವಿಪರಮೇಷ್ಠಿಸ್ವಾಮಿಗಳ ಪೂಜ್ಯಪಾದಸ್ವಾಮಿಗಳ ಪದಂಗಳ್ ಈಗೆ ಶಾಶ್ವತಪದಮಂ: ಆದಿಪು, ೧. ೧೧)

ಶಾಶ್ವತಾಸ್ಪದ
[ನಾ] ಶಾಶ್ವತಪದವಿ, ಮೋಕ್ಷ (ನಿಂದಂ ಕೊಳಲ್ ಶಾಶ್ವತಾಸ್ಪದಮಂ ಯೋಗನಿಯೋಗನಿಶ್ಚಳಮನಂ ಸಂದಾಧಿಭಟ್ಟಾರಕಂ: ಆದಿಪು, ೯. ೧೨೩)

ಶಾಸನ
[ನಾ] ಆಜ್ಞೆ (ಮತ್ತಂ ಅಮರಾಧೀಶಶಾಸನದೊಳ್ ನಾಭಿರಾಜ ರಾಜಮಂದಿರಾಂಗಣದೊಳ್: ಆದಿಪು, ೭. ೨೩ ವ); [ನಾ] ಸ್ಮಾರಕ ಶಿಲೆ (ಚಾಗದ ಕಂಬಮಂ ನಿಱಿಸಿ ಬೀರದ ಶಾಸನಮಂ ನೆಗೞ್ಚಿ ಕೋಳ್ಪೋಗದ ಮಂಡಲಂಗಳನೆ ಕೊಂಡು: ಪಂಪಭಾ, ೧. ೫೦)

ಶಾಸನಂಬರೆ
[ಕ್ರಿ] ವಿಧಿಯನ್ನು ಬರೆ, ಕಾನೂನು ಬರೆ (ಇರ್ದಂ ಅಟ್ಟವಣೆಕೋಲ್ಗಳ ಮೇಲೆಸೆದಿರ್ದ ವೀರಸಿದ್ಧಾಂತದ ಶಾಸನಂಬರೆದ ಪೊತ್ತಗೆಯಂತಮರಾಪಗಾತ್ಮಜಂ: ಪಂಪಭಾ, ೧೧. ೪೬)


logo