logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ವನಾಂತರ
[ನಾ] ಕಾಡಿನ ಒಳಭಾಗ (ಕರಿಯ ಮುಗಿಲ್ಗಳಿಂ ಗಗನಮಂಡಳಮೊಪ್ಪಿರೆ ಸೋಗೆಯಿಂ ವನಾಂತರಂ ಎಸೆದು ಒಪ್ಪೆ ತೋರ್ಪ ಮೊಳೆವುಲ್ಗಳಿನೀ ಧರಣೀವಿಭಾಗಂ ಒಪ್ಪಿರೆ: ಪಂಪಭಾ, ೭. ೨೩)

ವನಾಂತರಾಳ
[ನಾ] ವನಾಂತರ (ಜಲಜಲನೆ ಒೞ್ಕುತಿರ್ಪ ಪರಿಕಾಲ್ ಪರಿಕಾಲೊಳ್ ಅಳುರ್ಕೆಗೊಂಡ ನೈದಿಲ ಪೂ .. .. ಸಿರಿ ನೋಡುಗುಮಾ ವನಾಂತರಾಳದೊಳ್: ಪಂಪಭಾ, ೧. ೫೨)

ವನಾಧೀಶ
[ನಾ] ಕಾಡಿನ ರಾಜ (ಕಸ್ತೂರಿಕಾಂಡಕಂ ವನಹಸ್ತಿರದಂ ಹಸ್ತಿಮಸ್ತಕೋದ್ಭವ ಮುಕ್ತಾವಿಸ್ತಾರಮೆಂದು ತಂದು ಸಮಸ್ತ ವನಾಧೀಶರ್ ಅವನಿಪತಿಯಂ ಕಂಡರ್: ಆದಿಪು, ೧೨. ೬೭)

ವನೀಪಕ
[ನಾ] ಯಾಚಕ (ಎಡಱು ಅಱಿದು ಈವ ಕಲ್ಪತರುವೆಂದು ವನೀಪಕಕೋಟಿ ಸಂತಸಂಬಡೆ ಪೊಡೆವ ಒಂದಕಾಳವಿಳಯಾಶನಿ ಎಂದು ವಿರೋಧಿಗಳ್ ಮನಂಗಿಡೆ: ಪಂಪಭಾ, ೨. ೯೮); [ನಾ] ಭಿಕ್ಷುಕ ವೇಷದ ಗೂಢಚಾರ (ತನ್ನ ಪೊನ್ನ ರಥದೊಳ್ ನೆಲಸಿರ್ದು ವಿಳಾಸದಿಂದೆ ಭೀಮನ ಮೊನೆಯಂ ವನೀಪಕರಂ ಆರಯಲಟ್ಟಿ: ಪಂಪಭಾ, ೧೦. ೫೮)

ವನೇಚರಾಧಿಪ
[ನಾ] ಬೇಟೆಗಾರರ ಮುಖಂಡ (ಅಲ್ಲಿ ಕೋಳ್ಮಿಗದ ವನೇಚರಾಧಿಪರ ದಾಯಿಗರತ್ತಣಿಂ ಅಪ್ಪ ಅಪಾಯಕೋಟಿಗೆ ಪವಣಿಲ್ಲ: ಪಂಪಭಾ, ೭. ೨೧)

ವನ್ಯಗಜ
[ನಾ] ಕಾಡಾನೆ (ಕೇಸರಿಣೀಸ್ತನ್ಯಮಂ ಅನ್ಯ ವನ್ಯಗಜಪೋತಾನೀಕಮುಂಡಾಡೆ: ಆದಿಪು, ೯. ೯೭)

ವನ್ಯಮತಂಗಜ
[ನಾ] ಕಾಡಾನೆ (ತುಂಗವನ್ಯಮತಂಗಜದಂತೆ ಆಘಾತ ನಿಪಾತಿತ ಸಲ್ಲಕೀಭಂಗಮಂ: ಪಂಪಭಾ, ೧. ೧೧೫)

ವಪು
[ನಾ] ದೇಹ (ಪಳುಕಿನ ಪಾಪೆಯನಮರ್ದಿಂ ತೊಳೆದಂತೆ ಒರ್ಮೊೞದ ದಿವ್ಯವಪು ಮಣಿಮಯಕುಂಡಳ ಮಕುಟ ಕಟಕ ಭೂಷಣವಿಳಾಸದಿಂದೇಂ ವಿಳಾಸಮಂ ತಾಳ್ದುದೋ: ಆದಿಪು, ೬. ೩೯)

ವಪ್ರ
[ನಾ] ಪ್ರಾಕಾರ, ಆಳುವೇರಿ (ಭಾಭಾಸುರಮೊಪ್ಪಿ ತೋಱುಗುಂ ಪಂಚರತ್ನಪಾಂಶೂಚ್ಚದೀಪ್ತಿದೀಪ್ರಂ ವಪ್ರಂ: ಆದಿಪು, ೬. ೧೦೩)

ವಯಲ್
[ನಾ] [ಯುದ್ಧದ] ಬಯಲು (ವಯಲ್ಗೆ ಮೆಯ್ದೋಱುವೆವೆಂಬ ಪೂಣಿಗರ್ ಅಡಂಗಿ ಕುನುಂಗಿ ಸಿಡಿಲ್ದು ಜೋಲ್ದು ಕಾಯ್ಪಾಱೆ ನಭಕ್ಕೆ ಪಾಱಿದುದು: ಪಂಪಭಾ, ೧. ೧೦೯)


logo