logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ವಾಙ್ಮಯ
[ನಾ] ಶಾಸ್ತ್ರಸಂಪತ್ತು (ಜನ್ಮಾಂತರ ಅಭ್ಯಸ್ತ ಕಳಾಕುಶಳನುಂ ಪ್ರತ್ಯಕ್ಷೀಕೃತಸಕಲ ವಾಞ್ಮಯನಪ್ಪುದಱಿಂದಂ: ಆದಿಪು, ೮. ೩ ವ); [ನಾ] ಸಾಹಿತ್ಯ (ತನನ್ನೊಸೆದು ಓಲಗಿಪಂಗರಿದಿಲ್ಲೆನಿಪ್ಪ ವಾಙ್ಮಯಮನಿತರ್ಕಮಂಬಿಕೆ ಸರಸ್ವತಿ .. .. ಈಗೆ ವಿಶುದ್ಧ ಬುದ್ಧಿಯಂ: ಪಂಪಭಾ, ೧.೫)

ವಾಙ್ಮರೀಚಿ
[ನಾ] [ವಾಕ್+ಮರೀಚಿ] ಮಾತೆಂಬ ಕಿರಣ (ಎಸೆವ ಪ್ರಚಂಡ ಮಾರ್ತಾಂಡನಲರ್ಚುಗೆನ್ನ ಹೃದಯಾಂಬುಜಮಂ ನಿಜ ವ಼ಾಮರೀಚಿಯಿಂ: ಪಂಪಭಾ, ೧. ೩)

ವಾಟ
[ನಾ] ವಾಸಸ್ಥಾನ, ಕೇರಿ (ಆಗಳಾ ಸ್ತ್ರೀಸಮೂಹಂ ನೆರೆದಿರಲ್ ಅಲ್ಲಿ ವಿಳಾಸಿನೀವಾಟದೊಳ್ ಒಂದೆಡೆಯೊಳ್: ಆದಿಪು, ೧೨. ೧೨ ವ)

ವಾಣಿಜ್ಯ
[ನಾ] ವ್ಯಾಪಾರ (ಸೇವಾಧರ್ಮೋಚಿತಮೆನಿಸುವ .. .. ಶಾಸ್ತ್ರಾನುಗತಮಪ್ಪ ವಿದ್ಯೆಯುಮಂ ವಣಿಗ್ವ್ಯವಹಾರಾನುಕಾರಿಯಪ್ಪ ವಾಣಿಜ್ಯಮುಮಂ: ಆದಿಪು, ೮. ೬೪ ವ)

ವಾತ
[ನಾ] ಗಾಳಿ (ಅಮರೇಂದ್ರಪುತ್ರನಂ ಕರೆವವೊಲಾದುದು ಪುರದ ವಾತವಿಧೂತವಿನೂತಕೇತುಗಳ್: ಪಂಪಭಾ, ೪. ೩೪)

ವಾತವಲಯ
[ನಾ] [ಜೈನ] ಅನಂತವಾದ ಲೋಕವನ್ನು ಆವರಿಸಿರುವ ವಾಯುಸಮೂಹ (ಕವಾಟಕ್ರಿಯೆಯಂ ನೆಱಪಿ ತದನಂತರಸಮಯದೊಳ್ ವಾತವಳಯಮುೞಿಯೆ ಜೀವಪ್ರದೇಶಂಗಳಿಂ ಲೋಕಪ್ರದೇಶಮಂ ಪರ್ವಿ: ಆದಿಪು, ೧೬. ೪೯ ವ)

ವಾತ್ಯಾ
[ಗು] ಕಡುಗಾಳಿಯಿಂದ (ವಾತ್ಯಾದುರ್ಧರಗಂಧಸಿಂಧುರ ಕಟಸ್ರೋತಃ ಸಮುದ್ಯತ್ ಮದವ್ರಾತೇಂದಿಂದಿರ ಚಂಡ ತಾಂಡವ ಕಲ ಸ್ವಾಭಾವಿಕಶ್ರೇಯಸಃ: ಪಂಪಭಾ, ೯. ೯೭)

ವಾದಕ
[ನಾ] ವಾದ್ಯಗಾರ (ಅಮರವಾದಕವಾದ್ಯಮಾನ ದುಂದುಭಿ ಶಂಖ ಕಾಹಳಾ ಪ್ರಭಾತಪಟಹಧ್ವನಿಗಳ್ ದೆಸೆದೆಸೆಗೆಸೆಯುಂ: ಆದಿಪು, ೮. ೨೬ ವ)

ವಾದಕಿ
[ನಾ] ವಾದ್ಯಗಾರ್ತಿ (ಕುಡುಪುಂ ಕಯ್ಯುಂ ಜತಿಯೊಳ್ ತಡತಡವರೆ ವಾದಕಂಗೆ ಪುರ್ವಿಂ ಜತಿಯಂ ತೊಡರದೆ ನಡೆಯಿಸಿ ಪುರ್ವದೆ ಕುಡುಪೆನೆ ನರ್ತಕಿಯೆ ಸಭೆಗೆ ವಾದಕಿಯಾದಳ್: ಆದಿಪು, ೯. ೩೨)

ವಾದಿ
[ನಾ] ತಾರ್ಕಿಕ (ಕವಿ ಗಮಕಿ ವಾದಿ ವಾಗ್ಮಿ ಪ್ರವರರ ಪಂಡಿತರ ನೆಗೞ್ದ ಸಬ್ಬವದವರೊಡನೆ ಅಂತು ಒಸೆದ ಅನ್ನವಾಸದೊಳ್ ಇರ್ದನಾಗಳ್ ಹರಿಗಂ: ಪಂಪಭಾ, ೩. ೮೦)


logo