logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ವಕುಳ
[ನಾ] ನಾಗಕೇಸರ, ಪಗಡೆ ಗಿಡ (ಮತ್ತೊರ್ವಳ್ ವಕುಳ ಮುಕುಳಾಸವವದನಪರಿಮಳೆ: ಆದಿಪು, ೧೧. ೧೨೩ ವ)

ವಕ್ತ್ರಪದ್ಮ
[ನಾ] ಮುಖಕಮಲ (ಅದಱ ಪೊದಳ್ದು ನೀಳ್ದ ಲುಳಿತಾಳಕೆ ತನ್ನ ವಕ್ತ್ರಪದ್ಮದಿನೊಸೆದಾಂತೊಡೆ ಆಕೆಯ ಕಪೋಲದೊಳ್ ನವಧೂಮಲೇಖೆ ಚೆಲ್ವಿದಿರ್ಗೊಳೆ ಗಾಡಿವೆತ್ತು: ಪಂಪಭಾ, ೩. ೭೬)

ವಕ್ತ್ರಮಂಡನ
[ನಾ] ಮುಖಾಲಂಕಾರ (ಜಲಲವಮಂಜರಿಯಂ ಉಟುಮಾಡಿದುವು ದಿಶಾಲಲನೆಯರ ವಕ್ತ್ರಮಂಡನ ವಿಲಾಸದೊಳ್ ನೆಗೞ್ವ ಕರ್ಣಪೂರಶ್ರೀಯಂ: ಆದಿಪು, ೭. ೯೫)

ವಕ್ರ
[ನಾ] ತಡೆ (ಜವನಾಣೆಗಂ ಆಜ್ಞೆಗಂ ಉಂಟೆ ವಕ್ರಂ ಆ ಖಳನ ತುೞಿವುಮಂ ಸೋಂಕುಮಂ ಆರವಧರಿಪರ್: ಆದಿಪು, ೪. ೬೭); [ನಾ] ಅಡ್ಡಿ, ತೊಂದರೆ (ಚಕ್ರದೊಳೇಂ ಮತ್ತೇಜಶ್ಚಕ್ರಮೆ ಮುಂದಕ್ಕೆ ದಂಡರತ್ನಂಬರಂ ಆರ್ ವಕ್ರಮೆನಗೆ ಅಖಿಳ ಧರಣೀಚಕ್ರದೊಳ್: ಆದಿಪು, ೧೨. ೭೨)

ವಕ್ರಿಸು
[ಕ್ರಿ] ಅಡ್ಡಿಮಾಡು (ಅದಿನ್ನೆನಗೆ ತಪ್ಪುದು ತನ್ಮುನಿಶಾಪದಿಂದಂ ಇನ್ನಾರುಮಿದರ್ಕೆ ವಕ್ರಿಸದಿರಿಂ ವನವಾಸದೊಳಿರ್ಪೆಂ: ಪಂಪಭಾ, ೧. ೧೧೪); [ಕ್ರಿ] ವಕ್ರವಾಗು, ಬೇರೆಯಾಗು (ನಿಮ್ಮೀ ಕ್ರಮಕಮಲಕ್ಕೆ ಎಱಗದೆ ವಕ್ರಿಸಿ ಭೂಚಕ್ರದೊಳಗೆ ಬಾೞ್ವರುಂ ಒಳರೇ: ಪಂಪಭಾ, ೧೧. ೩೦); ಪ್ರತಿಭಟಿಸು, ಎದುರಿಸು (ವೈರಿನರಾಧಿಪಸೈನ್ಯವಾರ್ಧಿಯಂ ಪೊಸೆದೊಡೆ ಪುಟ್ಟಿದೀ ನಿನಗೆ ವಕ್ರಿಸಲೆನ್ನಂ ಅದೆಂತು ತೀರ್ಗುಮೋ: ಪಂಪಭಾ, ೧೩. ೧೦೧)

ವಕ್ರೋಕ್ತಿ
[ನಾ] ಸುಂದರವಾದ ಮಾತು, ಆಲಂಕಾರಿಕ ಮಾತು (ಎಂದೆಂದು ಓರೊರ್ವರ್ ಆಕೆಯ ರೂಪಂ ವಕ್ರೋಕ್ತಿಯೊಳೆ ಪೊಗೞ್ದು: ಪಂಪಭಾ, ೩. ೪೬ ವ)

ವಕ್ರೋಕ್ತಿನಿಪುಣ
[ನಾ] ಚತುರತೆಯಿಂದ ಮಾತಾಡುವುದರಲ್ಲಿ ಬಲ್ಲಿದ (ಜನಪದಸಮಭಿಜಾತನುಂ ಅನ್ವಯಾಗತನುಂ ಅಭಿರೂಪನುಂ ಪ್ರತ್ಯುತ್ಪನ್ನಪ್ರತಿಭನುಂ ವಕ್ರೋಕ್ತಿನಿಪುಣನುಂ: ಆದಿಪು, ೧೪. ೪೩ ವ)

ವಕ್ಷೋಜ
[ನಾ] ಮೊಲೆ (ವಿಜಯಲಕ್ಷ್ಮೀಲಲನಾವಕ್ಷೋಜ ಸ್ಪರ್ಶನಮಂ ಅನಕ್ಷರಮಱಿಪಿದುದು ಪತಿಗಮಂದಸ್ಪಂದಂ; ಆದಿಪು, ೧೧. ೧೧)

ವಚಃಪ್ರಸರ
[ನಾ] ಮಾತುಗಳ ಸಮೂಹ (ಉಚಿತಪೀಠನಿವಿಷ್ಟಂ ಭುವನೇಶಂ ಬೆಸಗೊಳೆ ವಿನಯವಚಃಪ್ರಸರಂಗಳ್ ಎಸೆದೊಡಂಬಡೆ ನುಡಿದಂ: ಆದಿಪು, ೧೩. ೨೪)

ವಚನರಚನೆ
[ನಾ] ಮಾತಿನ ಜೋಡಣೆ (ನಿನ್ನ ಬಗೆಯಂ ಬಗೆದಂತೆ ತೀರ್ಚುವೆಂ ಎಂದು ಅನೇಕ ಪ್ರಕಾರ ವಚನರಚನೆಗಳಿಂದಾಕೆಯ ಮನಮಂ ಆಱೆ ನುಡಿಯುತ್ತಿರ್ಪಿನಂ: ಪಂಪಭಾ, ೪. ೬೯ ವ)


logo