logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ವಲ್ಕಲವಸನ
[ನಾ] ನಾರುಮಡಿಯುಟ್ಟವನು (ವಲ್ಕಲವಸನರುಂ ಕೌಪೀನಧಾರಿಗಳುಂ ಭಸ್ಮೋದ್ಧೂಳಿತಾಂಗರುಂ .. .. ಆಗಿ ತಮಗೆ ತಾವೇ ವನಪ್ರವೇಶಮಂ ಮಾಡಿ: ಆದಿಪು, ೯. ೯೩ ವ)

ವಲ್ಗತ್ತುರಗ
[ನಾ] [ವಲ್ಗತ್+ತುರಗ] ಬಿರುಗುದುರೆ (ಕುಂಕುಮಾಂಭ ಸ್ಫುರಿತ ಅಂಗೋತ್ತುಂಗ ವಲ್ಗತ್ತುರಗಬಲಮದೋದ್ದಾಮಮಂ: ಆದಿಪು, ೧೧. ೨೪)

ವಲ್ಲಕಿ
[ನಾ] ವೀಣೆ (ಶ್ರುತಿಸೌಖ್ಯಾವಹ ವಲ್ಲಕೀಕ್ವಣಿತದೊಳ್ ಕರ್ಪೂರಪಾಳೀವಿಮಿಶ್ರಿತ ತಾಂಬೂಲರಸೋತ್ಕಟ ಪ್ರಮದದೊಳ್: ಆದಿಪು, ೯. ೧೧೮)

ವಲ್ಲಬಿಕಾ[üಕೆ]
[ನಾ] ಹೆಂಡತಿ (ತ್ರಿಷಷ್ಟಿಸಂಖ್ಯಾತ ವಲ್ಲಭಿಕಾ ವಿಭ್ರಮಭ್ರೂಲತಾತ್ರಿಭಾಗಭಾಜನನುಮಾಗಿ: ಆದಿಪು, ೬. ೧೩ ವ)

ವಲ್ಲರಿ
[ನಾ] ಗೊಂಡೆ, ತುರುಗಲು (ತಲೆಯೊಳ್ ಸೀರೆಯನಿಕ್ಕಿ ಕೆಮ್ಮನಿತಂ ಪೂಣ್ದಿರ್ಪಮುಗ್ರಾರಿ ವಂಶಲತಾವಲ್ಲರಿಗಳ್ಗೆ ದಾವಶಿಖಿವೊಲ್ ಮೆಯ್ದೋಱೆ: ಪಂಪಭಾ, ೩. ೩೩); [ನಾ] ಬಳ್ಳಿ (ಪೂತಚೂತಮಂ ನೆರ್ಮಿದ ಅಶೋಕವಲ್ಲರಿಯ ಪಲ್ಲವಮೊಂದನೆ ಕೊಯ್ದು ರಾಗದಿಂ ಸೋರ್ಮುಡಿಯೊಳ್ ತಗುಳ್ಚಿದೊಡೆ: ಪಂಪಭಾ, ೫. ೮೨)

ವಲ್ಲೀವನ
[ನಾ] ಬಳ್ಳಿಗಳ ವನ, ಬಳ್ಳಿಗಳ ಸಮೂಹ (ಭಂಗಿ ಭಂಗಿಯನೆ ಪೋಲೆ ದೇವೀವಿಳಾಸಮಂ ನಿಜವಿಳಾಸದಿಂ ನಗುವುವಲ್ಲಿ ವಲ್ಲೀವನಂ: ಆದಿಪು, ೧೦. ೨೭)

ವಶೀಕರಣ
[ನಾ] ಆಕರ್ಷಿಸುವುದು, ಮನಸ್ಸನ್ನು ಗೆಲ್ಲುವುದು (ಮನಸಿಜನ ಅಂಗನಾಜನವಶೀಕರಣ ಔಷಧಂ ಅಂಗಜನ್ಮನಂಬಿನ ಮದಶಕ್ತಿ ಮೋಹನಯಂತ್ರಂ ಇದಪ್ಪುದು: ಆದಿಪು, ೪. ೪೧)

ವಶ್ಯ
[ಗು] ವಶಮಾಡಿಕೊಳ್ಳಬೇಕಾದುದು, ವಶೀಕರಣ (ಜಗತ್ತಿಳಕ ಭವತ್ಪದಚಂದನತಿಳಕಂ ತ್ರೈಲೋಕ್ಯವಶ್ಯಮಕ್ಕುಂ ಅವಶ್ಯಂ: ಆದಿಪು, ೧೦. ೬೦)

ವಷಟ್ಕಾರ
[ನಾ] ಹವಿಸ್ಸಿನ ಅರ್ಪಣೆಯ ಕಾಲದಲ್ಲಿ ಹೇಳುವ ಮಂತ್ರ (ಚಾರುತರಯಜ್ಞವಿದ್ಯಾಪಾರಗರ ರವಂಗಳಿಂ ಸ್ವಧಾಕಾರ ವಷಟ್ಕಾರ ಸ್ವಾಹಾಕಾರ ಓಂಕಾರಧ್ವನಿ ನೆಗೞೆ ನೆಗೞ್ದುದಾಹುತಿಧೂಮಂ: ಪಂಪಭಾ, ೬. ೩೪)

ವಶಮಾಗು
[ಕ್ರಿ] ಶಕ್ಯವಾಗು (ಗಂಧೇಭಚರ್ಮಂಗಳಂ ಪಸರಂಗೆಯ್ದನೊ ಶಂಭುವೆಂಬ ಬಗೆಯಿಂದೆ ತಳ್ಪೊಯ್ದು ಕೞ್ಪೇಱಿ ಸೂಚಿಸಲಾರ್ಗಂ ವಶಮಾಗದಂತು ಕವಿದತ್ತು ಉದ್ದಾಮಭೀಮಂ ತಮಂ: ಪಂಪಭಾ, ೪. ೪೯)


logo