logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ವರಿಸು
[ಕ್ರಿ] ಬರಿಸು, ಬರುವಂತೆ ಮಾಡು (ಆ ಪಾಣ್ಬನಂ ನಂಬೆ ನುಡಿದು ಆ ಪೊೞ್ತಿಂಗೆ ಎನ್ನನಲ್ಲಿಗೆ ವರಿಸು ಅವಂಗೆ ತಕ್ಕುದನಾನೆ ಬಲ್ಲೆಂ: ಪಂಪಭಾ, ೮. ೭೨ ವ)

ವರುಣಾನಿ
[ನಾ] ವರುಣನ ಹೆಂಡತಿ, ವಾರುಣಿ (ವರುಣನ ಮಕರಮಂ ವರುಣಾನಿಯ ಕೊರಲೊಳ್ ಅಯ್ದೆಮಿನುಗುಂ ಉೞಿಯೆ ಉೞಿದ ವಸ್ತುಗಳೆಲ್ಲಮಂ ಕವರ್ದುಕೊಂಡು: ಪಂಪಭಾ, ೬. ೩೨ ವ)

ವರುಣಾಶಾ
[ನಾ] ವರುಣನ ದಿಕ್ಕು, ಪಶ್ಚಿಮದಿಕ್ಕು (ತನ್ಮಹೀಧರ ವರುಣಾಶಾ ವಿಶೇಷಕಮಾಗಿರ್ದ .. .. ಎಂಬ ದ್ವಿಗುಣ ಚತುಃಕೂಟಂಗಳೊಳಂ: ಆದಿಪು, ೭. ೩ ವ)

ವರೂಥ
[ನಾ] ರಥ (ತೆರೆಯಿಲ್ಲದೆಡೆಯೊಳ್ ವರೂಥಮವಯವದೆ ತಡಿಯನೆಯ್ದಿದುದಾಗಳ್: ಆದಿಪು, ೧೨. ೧೨೭)

ವರೂಥಿನಿ
[ನಾ] ಸೈನ್ಯ (ಪುರನಿಧಿಶಯ್ಯಾಸನ ರಾಜ್ಯ ರತ್ನ ವಾಹನ ವರೂಥಿನೀ ನಾಟ್ಯ ಸಭಾಪರಿಕರಸಹಿತಂ ಭರತೇಶ್ವರಂಗೆ ಸಮಸಂದುದೀ ದಶಾಂಗಂ ಭೋಗಂ: ಆದಿಪು, ೧೫. ೫)

ವರೂಥಿನೀಪತಿ
[ನಾ] ಸೇನಾಪತಿ (ಪ್ರಪಾತಗುಹಾಸಮೀಪದೊಳ್ ಬೀಡಂ ಬಿಟ್ಟು ಮುನ್ನಿನ ಮಾೞ್ಕೆಯೊಳೆ ವರೂಥಿನೀಪತಿಯಂ ಬೆಸಸಿದೊಡೆ: ಆದಿಪು, ೧೩. ೭೮ ವ)

ವರ್ಣ
ಪ್ರಾಚೀನ ಸಾಮಾಜಿಕ ವ್ಯವಸ್ಥೆಯ ಒಂದು ಪಂಗಡ (ತನ್ನ ಮುನ್ನ ಪಡೆದ ವರ್ಣತ್ರಯಕ್ಕಂ ಭರತನಿಂದನಿಂದಮಿನ್ನಪ್ಪ ವಿಪ್ರವರ್ಣಕ್ಕಂ ಯಥೋಚಿತ ವೃತ್ತಿಗಳಂ ಅಱುಪಲು: ಆದಿಪು, ೮. ೭೨ ವ); [ನಾ] ಭಾಷೆಯಲ್ಲಿನ ಧ್ವನಿ (ಅಂದು ಅಪಗತ ತಾಲು ಓಷ್ಠಸ್ಪಂದನಂ ಅಸ್ಪೃಶ್ಯಕರಣವರ್ಣಂ ಜಗದಾನಂದಕರಂ ಜಳಧರರವಸೌಂದರಂ: ಆದಿಪು, ೧೦. ೬೩)

ವರ್ಣಕ
[ನಾ] ವರ್ಣನೆಗಳು, ವರ್ಣನಾಪ್ರಧಾನ ಕಾವ್ಯ, ದೇಸಿ ಛಂದಸ್ಸಿನ ಕಾವ್ಯ (ವರ್ಣಕಂ ಕತೆಯೊಳೊಡಂಬಡಂ ಪಡೆಯೆ ಪೆೞ್ವೊಡೆ ಪಂಪನೆ ಪೇೞ್ಗುಂ: ಪಂಪಭಾ, ೧. ೧೧)

ವರ್ಣಕವಿತ್ವ
[ನಾ] ದೇಸೀಶೈಲಿಯ ಕಾವ್ಯ (ಬೇಟಮನೆ ವಸ್ತುಮಾಡಿಯೆ ಕವಿತ್ವ ವಸ್ತುಕವಿತ್ವ ಕಾಮತತ್ವವಿದನೆನಿಸಿದ ಅತಿವಿದಗ್ಧನೊರ್ವಂ ಇಂತೆಂದಂ: ಆದಿಪು, ೧೨. ೨೨ ವ)

ವರ್ಣಕ್ರಮ
[ನಾ] ಬಣ್ಣ ಹಾಕುವಿಕೆಯ ವಿನ್ಯಾಸ (ನೋಡುವಂತೆ ಉಸಿವಂðತೆ ಇರ್ದುದು ರೇಖೆ ಕೋಮಲತೆಯಂ ತಾಳ್ದಿತ್ತು ವರ್ಣಕ್ರಮಂ: ಆದಿಪು, ೪. ೪)


logo