logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಯುಗಪ್ರಮಾಣ
[ನಾ] ಒಂದು ನೊಗದಷ್ಟು ಉದ್ದವಾದ (ಯುಗಪ್ರಮಾಣ ಕ್ಷೋಣೀನಿರೀಕ್ಷಣನಿರುತನುಂ ಅತಿದ್ರುತವಿಲಂಬಿತ ಗತಿವ್ಯಪೇತನುಂ ಆಗಿ: ಆದಿಪು, ೯. ೧೨೯ ವ)

ಯುಗಳ
[ನಾ] ಜೋಡಿ, ಜೊತೆ (ವಿಜಯಶ್ರೀನಿವಾಸ ಬಾಹುಬಾಹುಯುಗಳಕ್ಕೆ ಕೇಯೂರ ಹಾರ ಅಂಗದಕಟಕಾಳಂಕಾರಂ ಮಾಡಿ: ಆದಿಪು, ೭. ೧೦೬ ವ)

ಯುಗಾಂತ
[ನಾ] ಯುಗದ ಕೊನೆ, ಪ್ರಳಯ ಕಾಲ (ಯುಗಾಂತಪಯೋಧರಾಳಿ ಭೋಂಕೆನೆ ಕವಿವಂದದಿಂ ಕವಿದಂ ಆ ಬನಮಂ ಮೃಗಯಾನಿಧಾನಮಂ: ಪಂಪಭಾ, ೮. ೧೪)

ಯುಗಾಂತವಾತ
[ನಾ] ಪ್ರಳಯಕಾಲದ ಗಾಳಿ (ಅಂತು ಯುಗಾಂತ ವಾತಾಹತಿಕುಲಗಿರಿಯೆ ನೆಲೆಯಿಂ ತಳರ್ವಂತೆ ತಳರ್ದು ಧ್ವಾಂಕ್ಷಧ್ವಜಂ: ಪಂಪಭಾ, ೧೨. ೧೩೬ ವ)

ಯುಗಾದಿ
[ನಾ] [ಯುಗ+ಆದಿ] ಕಾಲಘಟ್ಟದ ಆರಂಭ (ಈ ಯುಗಾದಿಯೊಳ್ ಆದಿದಾನತೀರ್ಥ ಪ್ರವರ್ತನೈಕಪುಣ್ಯ ಭಾಜನನೈ ನೀಂ: ಆದಿಪು, ೦. ೧೩ ವ)

ಯುದ್ಧಮಲ್ಲ
[ನಾ] ಪಂಪನು ಹೇಳುವ ಚಾಳುಕ್ಯವಂಶದ ಮೊದಲ ರಾಜ (ಶ್ರೀಮಚ್ಚಳುಕ್ಯವಂಶ ವ್ಯೋಮಾಮೃತಕಿರಣನೆನಿಪ ಕಾಂತಿಯನೊಳಕೊಂಡೀ ಮಹಿಯೊಳಾತ್ಮ ವಂಶಶಿಖಾಮಣಿ ಜಸಮೆಸೆಯೆ ಯುದ್ಧಮಲ್ಲಂ ನೆಗೞ್ದಂ: ಪಂಪಭಾ, ೧. ೧೫)

ಯುವ
[ನಾ] ಯುವಕ (ಯುವಸಂಘಾತಮದೊಂದು ತೋಳ್ದುಱುಗಳೊಳ್ ಮತ್ತೊಂದು ತೋಳೋಳಿಯೊಳ್ ಯುವತೀವ್ರಾತಂ: ಆದಿಪು, ೭. ೧೨೬)

ಯುಷ್ಮತ್
[ಗು] ನಿನ್ನ (ಯುಷ್ಮತ್ ಪದಪಾಂಸುಗಳಿಂದಾಂ ಪವಿತ್ರಗಾತ್ರನೆನಾದೆಂ: ಪಂಪಭಾ, ೯. ೩೨)

ಯೂಥ
[ನಾ] [ಪ್ರಾಣಿಗಳ] ಗುಂಪು, ಹಿಂಡು (ತನ್ನಳಿಯನನೆಯ್ದೆ ಪಾಲಿಸುಗೆ ಬಂದಿದನೀಗಳನಾಥಯೂಥಮಂ: ಆದಿಪು, ೪. ೮೪)

ಯೂಥಪತಿ
[ನಾ] ಸಲಗ (ಕಳಭಂ ವನಪಥಮಂ ಯೂಥಪತಿಗೆ ತೋರ್ಪಂತಕ್ಕುಂ: ಆದಿಪು, ೮. ೧೨); ಹಿಂಡಿನ ಮುಖ್ಯ ಸಲಗ (ಯೂಥಪತಿ ಕೆಡೆಯೆ ದೆಸೆದಪ್ಪಿದ ವನಕರಿರೇಣುಗಳುಮಂ: ಪಂಪಭಾ, ೧೪. ೪ ವ)


logo