logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಯಮಸ್ಥಾನ
[ನಾ] ಯಮನ ಜಾಗ, ಸಾವು (ಪತಿ ಪರಸಿ ಯಮಸ್ಥಾನಮನೆಂತೆಯ್ದಿಸಿದಿರೊ ಕಾನೀನನ ದೊರೆಯ ಕಲಿಯಂ ಉಗ್ರ ಆಹವದೊಳ್: ಪಂಪಭಾ, ೧೨. ೧೨೨)

ಯಮಳ
[ನಾ] ಅವಳಿ ಜವಳಿ, ನಕುಲ, ಸಹದೇವರು (ಅಡವಿಯ ಕಾಯಂ ಪಣ್ಣುಮಂ ಉದಿರ್ಪಿ ತಿಂದಗಲದೆ ನಿಂದೀ ಯಮಳರಾದ ತೆಱದಿಂ ನೋಯಿಸರಯ್ ನಿನ್ನ ನನ್ನಿಕಾಱನ ಮನಮಂ: ಪಂಪಭಾ, ೭. ೪೮)

ಯವ
[ನಾ] ಗೋಧಿ (ಮಲ್ಲಿಗೆಯಲರ್ಗಳಂ ಪೂವಾಸಿ ಮೃಣಾಳನಾಳದೊಳ್ ಸಮೆದ ಸರಿಗೆಗಂಕಣಗಳುಮಂ ಯವ ಕಲಿಕೆಗಳೊಳ್ ಸಮೆದ ಕಟಿಸೂತ್ರಮಂ: ಪಂಪಭಾ, ೫. ೬ ವ)

ಯವನಾಳ
[ನಾ] ಜೋಳ (ಕೞಮ ಷಷ್ಟಿಕಾ ವ್ರೀಹಿ ಯವನಾಳ ಗೋಧೂಮ ಕಂಗು ಶ್ಯಾಮಕ ಕೋದ್ರವ ನೀವಾರ ತಿಲಾತಸಿ ಮಸೂರಿಕಾ ಕುಳತ್ಥ: ಆದಿಪು, ೬. ೭೨ ವ) [ಎಲ್. ಬಸವರಾಜು ಆವೃತ್ತಿ]

ಯವನಿಕಾ
[ನಾ] ತೆರೆ, ಪರದೆ (ನವಮೇಘಧ್ವನಿ ಪುಷ್ಕರಧ್ವನಿ ತರತ್ತರಾಳಿ ಪುಷ್ಪೋಪಹಾರವಿಳಾಸಂ ರುಚಿರಾಂಬುದಂ ಯವನಿಕಾವಿನ್ಯಾಸಮಾದಲ್ಲಿ: ಆದಿಪು, ೬. ೭೨)

ಯವಸ
[ನಾ] ಹುಲ್ಲು (ಅಭಿರಾಮ ಜಲಾಶಂಗಳುಮಂ ಪ್ರಭೂತ ಯವಸ ಉದಕಂಗಳುಮಂ ಸಮಸ್ತಸಸ್ಯಸಂಪತ್ಸಂಪನ್ನ ಸುಕ್ಷೇತ್ರಂಗಳುಮಂ: ಆದಿಪು, ೮. ೬೩ ವ)

ಯಶಃಪಿಂಡ
[ನಾ] ಜಯಗಳ ಸಾಲು (ವಿಪುಯಶಃಪಿಂಡಂ ಪುಣ್ಯಪುಂಜಂ ಆ ಕ್ಷತ್ರಧಾಮಂ ತಾನಾ ನೃಪಸುತಂ: ಆದಿಪು, ೮. ೪೪)

ಯಶಃಪ್ರಕಾಶ
[ನಾ] ಕೀರ್ತಿಕಾಂತಿ (ಅೞಿಪದೆ ಪದಗೞಿಪದೆ ಪೊಂಪುೞಿವೋಗೆ ಯಶಃಪ್ರಕಾಶಂ ಈಗಳೆ ಧರೆಯಂ ಪೞಿಕೆಯ್ದು: ಆದಿಪು, ೪. ೮೭)

ಯಶೋದುಂದುಭಿ
[ನಾ] ಗೆಲವನ್ನು ಸಾರುವ ದುಂದುಭಿಧ್ವನಿ (ಪ್ರಕಟ ಯಶೋದುಂದುಭಿ ಸಿಂಹಾಸನ ಸುರದುಂದುಭಿ ಪತಿಚರಣಕ್ಕಮಳಭೃಂಗಂ ಪಂಪಂ: ಆದಿಪು, ೧. ೩೩)

ಯಶೋಭಾಗಿ
[ನಾ] ಕೀರ್ತಿಭಾಜನ (ತಾಂ ತಂದನಂದು ಅಂಬೆಯಂಬಿಕೆಯಂಬಾಲೆಯರೆಂಬ ಬಾಲೆಯರನೇಂ ಭೀಷ್ಮಂ ಯಶೋಭಾಗಿಯೋ: ಪಂಪಭಾ, ೧. ೭೪)


logo