logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಯತಿಸಮಿತಿ
[ನಾ] ಮುನಿಸಮುದಾಯ (ಪರಮತಪಶ್ಚರಣನಿರತ ಯತಿಸಮಿತಿಗೆಲ್ಲಂ ಪ್ರತಿಗ್ರಹಾದಿಪುರಸ್ಸರಂ ನಿರವದ್ಯಾಹಾರಾದಿ ವಿತರಣರೂಪ ಪಾತ್ರದತ್ತಿಯುಂ: ಆದಿಪು, ೧೫. ೧೩ ವ)

ಯತ್ಯಾಶ್ರಮ
[ನಾ] [ಯತಿ+ಆಶ್ರಮ] ಯತಿಯ ಸ್ಥಿತಿ (ಅಂತಾ ತ್ರಿಲೋಕಗುರು ಧರಾತಳಂ ಪೊಗೞ್ವಿನಂ ಯತ್ಯಾಶ್ರಮದೊಳ್ ನಿಂದಂ: ಆದಿಪು, ೬. ೨೪ ವ)

ಯಥಾಖ್ಯಾತಚಾರಿತ್ರ
[ನಾ] [ಜೈನ] ಮೋಹನೀಯ ಕರ್ಮಗಳನ್ನೆಲ್ಲ ಕಳೆದುಕೊಂಡ ಆತ್ಮನ ಸ್ಥಿತಿ, ಸಪ್ತಸಂಯಮಗಳಲ್ಲಿ ಒಂದು (ವೀತರಾಗದ್ವೇಷ ಭಾವನಾಭಾವಿತ ಯಥಾಖ್ಯಾತಚಾರಿತ್ರಕ್ಷೀಣ ಕಷಾಯ ವೀತರಾಗಛದ್ಮಸ್ಥ: ಆದಿಪು, ೧೦. ೧೪ ವ)

ಯಥಾಯೋಗ್ಯ
[ನಾ] ತಕ್ಕುದಾದ ಬಗೆ, ಆದಿದೇವನು ವಿಭಾಗಿಸಿದ ಮೂರುವರ್ಣಗಳಲ್ಲಿ ಕೊನೆಯದಾದ ಶೂದ್ರರಲ್ಲಿ ಒಂದು ವರ್ಗ (ಸ್ಪೃಶ್ಯಾಸ್ಪೃಶ್ಯಕಾರುಗಳುಮೆಂದಿರ್ತೆಱದ ಶೂದ್ರಸಂತತಿಗೆ ಶುಶ್ರೂಷಾ ನಿಯೋಗಂಗಳುಮಂ ಯಥಾಯೋಗ್ಯಂ ಉಪದೇಶಂಗೆಯ್ದು: ಆದಿಪು, ೮. ೬೪ ವ)

ಯಥಾ ರಾಜಾ ತಥಾ ಪ್ರಜಾ
ರಾಜನು ಹೇಗೋ ಪ್ರಜೆಗಳೂ ಹಾಗೆ (ಪ್ರಿಯಧರ್ಮನೃಪತಿಯಂ ನೋಡಿ ಯಥಾ ರಾಜಾ ತಥಾ ಪ್ರಜಾ ಎಂಬವೊಲ್ ಓಜೆಯೊಳೋಜೆಗೊಂಡು ಧರ್ಮಪ್ರಿಯರಾದರ್ ಪ್ರಜೆಗಳುಂ ಸಮಸ್ತಾವನಿಯೊಳ್: ಆದಿಪು, ೧೬. ೪೦)

ಯಥೋಕ್ತವಿಧಿ
[ನಾ] [ಯಥಾ+ಉಕ್ತವಿಧಿ] ಶಾಸ್ತ್ರಗಳಲ್ಲಿ ಹೇಳಿರುವ ಕ್ರಮ (ಹರಿಚಂದನಕರ್ಪೂರ ಕಾಳಾಗರು ಕಾಷ್ಠಂಗಳಿಂದಂ ಯಥೋಕ್ತವಿಧಿಯಿಂ ಸಂಸ್ಕಾರಿಸಿ ಕರ್ಣಂಗೆ ಕರ್ಣಸ್ಥಳಿಯೆಂಬ ತೀರ್ಥಮಂ ಮಾಡಿ: ಪಂಪಭಾ, ೧೪. ೧೦ ವ)

ಯಥೋಚಿತ
[ಗು] [ಯಥಾ+ಉಚಿತ] ಹೇಗೆ ತಕ್ಕುದೋ ಹಾಗೆ (ಪಾಂಡವರಯ್ವರುಂ ಇದಿರ್ವೋಗಿ ಯಥೋಚಿತ ಪ್ರತಿಪತ್ತಿಗಳಿಂ ಕಂಡು ಪೊೞಲ್ಗೊಡಗೊಂಡು ಬಂದು: ಪಂಪಭಾ, ೫. ೨೪ ವ)

ಯದುವಂಶೋತ್ತಮೆ
[ನಾ] ಯದುವಂಶದ ಶ್ರೇಷ್ಠ ಪುತ್ರಿ (ಮತ್ತಿತ್ತ ನೆಗೞ್ತೆಯ ಪುರುಷೋತ್ತಮನ ಪಿತಾಮಹಂಗೆ ಶೂರಂಗೆ ಮಗಳ್ ಮತ್ತಗಜಗಮನೆ ಯದುವಂಶೋತ್ತಮೆಯೆನೆ ಕುಂತಿ ಕುಂತಿಭೋಜನ ಮನೆಯೊಳ್: ಪಂಪಭಾ, ೧. ೮೮)

ಯಮನಂದನ
[ನಾ] ಯಮನ ಮಗ, ಯುಧಿಷ್ಠಿರ (ಎಂದು ತನ್ನ ಮನದೊಳಚ್ಚೊತ್ತಿದಂತೆ ನುಡಿದ ಗಾಂಗೇಯನ ಮಾತಂ ಮನದೆಗೊಂಡು ಯಮನಂದನಂ ಆನಂದಂಬೆರಸಂತೆ ಗೆಯ್ವೆನೆಂದು: ಪಂಪಭಾ, ೬. ೪೧ ವ)

ಯಮಸುತ
[ನಾ] ಯಮಧರ್ಮನ ಮಗ, ಯುಧಿಷ್ಠಿರ (ಯಮಸುತನುಂ ಸುರೇಂದ್ರಸುತನುಂ ಪೊಸೆದೀಗಳೆ ಮುಕ್ಕಿತೋಱರೇ: ಪಂಪಭಾ, ೪. ೭)


logo