logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಮಗಧನಾಯಕ
[ನಾ] ಶ್ರೇಣಿಕ ಮಹಾರಾಜ (ವರ್ಧಮಾನಜಿನ ಸನ್ನಿಧಿಯೊಳ್ ವಿಪುಳಾದ್ರಿಯೊಳ್ ನಿಜಾದರದೊಳೆ ಗೌತಮರ್ ಮಗಧನಾಯಕನುಂ ತಿಳಿವಂತು ಪೇೞ್ದುದಂ: ಆದಿಪು, ೧. ೪೧)

ಮಗನೆಯಿನ್
ಮಗನೇ ಆಗಿದ್ದೀಯೆ (ಕೃತಾಂತನೆಂ ಎನಗಮ್ಮ ನೀಂ ಮಗನೆಯಿನ್ ಪೆಱತೇಂ ನಿನಗೆ ಉತ್ತರೋತ್ತರಂ: ಪಂಪಭಾ, ೮. ೪೮)

ಮಗಮಗಿಸು
[ನಾ] ಪರಿಮಳ ಬೀರು (ನಿಡುಸುಯ್ದ ನಲ್ಲಳ ಮುಖಾಂಬುಜಸೌರಭದೊಳ್ ಪೊದಳ್ದು ಅದೇಂ ಮಗಮಗಿಸಿತ್ತೊ ಕತ್ತುರಿಯ ಕಪ್ಪುರದೊಂದು ಕದಂಬದಂಬುಲಂ: ಪಂಪಭಾ, ೪. ೧೦೭)

ಮಗುೞ್
[ಕ್ರಿ] ವಾಪಸಾಗು (ಅರಸರೀಗಳೆ ಬಂದಪ್ಪರ್ ಅಂಜದಿರಿಂ ಎಂದು ಆಸೆವಾತುಗಳೊಳಾಱಿಸಿ ನುಡಿದೊಡಗೊಂಡು ಮಂದಿರಕ್ಕೆ ಮಗುೞ್ದರ್: ಆದಿಪು, ೯. ೭೬ ವ); [ಕ್ರಿ] ಸಂತೋಷಿಸು (ಸುರಯಿಯೊಳ್ ಗಿಳಿ ಮಗುೞ್ವರಗಿಳಿ ಬಿರಯಿಗೆ ಮೊರೆವಂತೆ ಮೊರೆವ ಮಱಿದುಂಬಿ: ಆದಿಪು, ೬. ೧೦೦)

ಮಗುೞೆ ಕುಡಿಸು
[ಕ್ರಿ] ವಾಪಸು ಕೊಡಿಸು (ಎಮ್ಮಾಳ್ವ ನೆಲನೊತ್ತೆಯೆಂದೊಡೆ ಬಗೆದು ನೋಡಿ ಗೆಲ್ದಿಂ ಬೞಿಯಂ ಮುದುಗಣ್ಗಳ್ ಮಗುೞೆ ಕುಡಿಸುವರೆಂಬ ಬಗೆಯೊಳಂ: ಪಂಪಭಾ, ೭. ೩ ವ)

ಮಗುೞ್ಚು
[ಕ್ರಿ] ಹಿಂದೆ ಕಳಿಸು (ಎಂದತಿಲಲಿತಸಮುಚ್ಚಳಿತ ರಶನಾಕಳಾಪ ನೂಪುರಕಿಂಕಿಣೀಕ್ವಣಿತ ಅನುಸಾರಿಯಾಗಿ ಬರ್ಪ ರಾಜಹಂಸಮಂಡಲಮಂ ಮಗುೞ್ಚಿ ಬರ್ಪಾಗಳ್: ಆದಿಪು, ೧೧. ೧೩೮ ವ)

ಮಗುೞ್ದು
[ಗು] ರಭಸದಿಂದ (ಪೊಸೆದೊಡೆ ಪಾಲ್ಗಡಲಂ ಮಗುೞ್ದಸುರರ್ ಪೊಸೆದಲ್ಲಿ ಕಾಳಕೂಟಾಂಕುರಂ ಅಂದು ಅಸದಳಮೊಗೆದಂತೊಗೆದುವು ಬಸಿಱಿಂ ನೂಱೊಂದು ಪಿಂಡಂ ಅರುಣಾಕೀರ್ಣಂ; ಪಂಪಭಾ, ೧. ೧೩೦)

ಮಗುೞ್ದುಂ
[ಅ] ಮತ್ತೆ, ಪುನಃ (ವಿವಾಹಸಮಯದೊಳ್ ತನ್ನನಾ ಶ್ರೀಧರದೇವನೇ ಬಂದು ಮಗುೞ್ದುಂ ಮೂದಲಿಸೆ: ಆದಿಪು, ೫. ೯೬ ವ)

ಮಗುೞ್ದುಬರ್
[ಕ್ರಿ] ವಾಪಸು ಬಾ (ಅಂತು ಕರ್ಣನುಂ ಶಾಪಹತನಾಗಿ ಮಗುೞ್ದು ಬಂದು ಸೂತನ ಮನೆಯೊಳಿರ್ಪನ್ನೆಗಂ ಇತ್ತಲ್ ಕುಂತಿಗವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡೆ: ಪಂಪಭಾ, ೧. ೧೦೫ ವ)

ಮಗುೞ್ದುಮಗುೞ್ದುಂ
[ಅ] ಮತ್ತೆ ಮತ್ತೆ (ಅಂತು ಮುನಿವೃಷಭನಂ ಕಿಱಿದಂತರಮಂ ಕೞಿಪಿ ಮಗುೞ್ದುಮಗುೞ್ದುಂ ಕಾಂತಾರಾಂತರಮಂ ಪುಗುವನ್ನೆಗಂ ಅಂತವರೆಯಿಕ್ಕದಂತೆ ನೋಡಿದರಾಗಳ್: ಆದಿಪು, ೧೦. ೭)


logo