logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಮಂದಾಕಿನಿ
[ನಾ] ಗಂಗೆ (ಎಂದು ಮುಂತಪ್ಪ ಕಜ್ಜಮಂ ತನ್ನೊಳೆ ಬಗೆದು ಅವಾರ್ಯವೀರ್ಯಂ ಸೂರ್ಯದಿನದಂದು ಮಂದಾಕಿನಿಯಂ ಮೀಯಲೆಂದು ಬಂದು: ಪಂಪಭಾ, ೯. ೭೧ ವ)

ಮಂದಾಕಿನೀತನೂಜ
[ನಾ] ಭೀಷ್ಮ (ದುರ್ಯೋಧನಂ ಸಹಸ್ರಕಿರಣೋದಯದೊಳ್ ಅನೇಕಸಹಸ್ರ ನರಪತಿ ಪರಿವೃತನುಮಾಗಿ ಮಂದಾಕಿನೀತನೂಜಂಗೆ ಬೞಿಯನಟ್ಟಿ: ಪಂಪಭಾ, ೧೦. ೧೪ ವ)

ಮಂದಾನಿಳ
[ನಾ] ಮೆಲುಗಾಳಿ (ಅಂತು ಮಳಯಜರಸಶಿಶಿರ ಶೀಕರಾಸಾರಿಯಾಗಿ ಬಂದ ಮಂದಾನಿಳನ ಬೞಿಯನೆ ಬಂದು: ಆದಿಪು, ೧೧. ೫೫ ವ)

ಮಂದಾರ
[ನಾ] ಮಂದರ ಪರ್ವತ (ಆ ಮಂದಾರದ ಪೂರ್ವಾಪರ ದಿಗ್ವಿಭಾಗಂಗಳೊಳ್ ವಿದೇಹಂಗಳಿರ್ದುವು: ಆದಿಪು, ೧. ೫೦ ವ)

ಮಂದಾರಮಾಲಿಕೆ
[ನಾ] ಮಂದಾರಪುಷ್ಪದ ಹಾರ (ಉತ್ಪಳಿಕೆಯಂ ಕೈಘಟ್ಟಿ ನೀಡಲುಂ ಮಂದಾರಿಕೆಯಂ ಮಂದಾರಮಾಲಿಕೆಯನೆತ್ತಲುಂ: ಆದಿಪು, ೭. ೨೧ ವ)

ಮಂದ್ರ
[ಗು] ಗಂಭೀರವಾದ (ಕರಿಣೀವೃಂದದ ಮೇಲೆ ತಳ್ತ ತೞೆಗಳ್ ವಾರಾಂಗನಾಗೀತಮಂದ್ರರವಂಗಳ್: ಆದಿಪು, ೧೧. ೪೨)

ಮಕರ
[ನಾ] ಮೊಸಳೆ, ಮಹಾ ಮೀನು (ರಥಂ ಮಕರಂಗಳಂತೆ ಅಗುರ್ವುವರಿಯುತ್ತುಂ ಇರ್ಪ ಅಣಿ ಬೃಹದ್ಬಡಬಾನಳನಂತೆ: ಪಂಪಭಾ, ೮. ೯೯); [ನಾ] ತಿಮಿಂಗಿಲ (ಕರಿಮಕರಾಹತಿಯಿಂ ಬಿರಿದಳಱುವ ಭೈತ್ರದಂತೆ ವಿವಿಧಾಯುಧ ದಂತುರಿತಂಗಂಳೞಿದುವಾ ಸಂಗರಜಳನಿಧಿಯೊಳ್ ವರೂಥ ಕರಿ ನಿಕರಂಗಳ್: ಪಂಪಭಾ, ೧೩. ೩೫)

ಮಕರಂದ
[ನಾ] ಹೂಜೇನು (ಮಂದಾರವರ್ಷ ನವಮಕರಂದ ರಜೋಗಂಧಬಂಧು ವಿವಿಧಪತಾಕಾಸಂದೋಹಾಂದೋಳನ ಪಟು ಬಂದಾಱಿಸಿದತ್ತು ಸಮವಸರಣಸಮೀರಂ: ಆದಿಪು, ೧೪. ೧೩೫)

ಮಕರಧ್ವಜ
[ನಾ] ಮನ್ಮಥ (ಅಂತಾ ಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟ ಎಳವಾಳೆಯಂತೆ ಸುರತಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತಿರ್ದಳ್: ಪಂಪಭಾ, ೫. ೧೦ ವ)

ಮಕರಮಸ್ತಕಭೂಮಿ
[ನಾ] ಮಕರವ್ಯೂಹದ ತಲೆಬದಿಯ ಜಾಗ (ಕೌರವಬಲದ ಒಡ್ಡಣದ ನಾಯಕರಿವರಾರೆಂದು ಬೆಸಗೊಳೆ ಮಕರಮಸ್ತಕಭೂಮಿಯೊಳ್ ಯುದ್ಧಸನ್ನದ್ಧನಾಗಿ: ಪಂಪಭಾ, ೧೦. ೫೩ ವ)


logo