logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಮಂತ್ರಬಲ
[ನಾ] ಬುದ್ಧಿಬಲ (ಮಂತ್ರಬಲದೆ ಸುಟ್ಟೊಡಂ ಅವರಂ ದೆಯ್ವಬಲಮೊಂದೆ ಕಾದುದು: ಪಂಪಭಾ, ೪. ೩)

ಮಂತ್ರವಾದಿ
[ನಾ] ಮಂತ್ರ ಹಾಕುವವನು (ಅಂತು ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂ ಸ್ತೋಭಂಗೊಂಡ ದಿವ್ಯಗ್ರಹದಂತೆ: ಪಂಪಭಾ, ೪. ೫೯ ವ)

ಮಂತ್ರವಿಧಿ
[ನಾ] ಮಂತ್ರಪೂರ್ವಕ (ಕರ್ಣನ ಕಳೇವರಮಂ ಅನಿಬರಿಂ ಮಿಗೆ ಮಹಾಬ್ರಾಹ್ಮಣರಿಂದಂ ಮಂತ್ರವಿಧಿಯಿಂದಿರಿಸಿ: ಪಂಪಭಾ, ೧೪. ೧೦ ವ)

ಮಂತ್ರಶಕ್ತಿ
[ನಾ] ಮಂತ್ರದಿಂದ ಗಳಿಸಿಕೊಂಡ ಸಾಮರ್ಥ್ಯ (ನಿನ್ನ ನಿರ್ಬೇಗಮಂ ಅಱಿದೆಂ ಇದಂ ಶಕ್ತಿಯೊಳ್ ಮುಕ್ತಿಯಂ ಸಾಧಿಸಲಕ್ಕುಂ ಮಂತ್ರಶಕ್ತಿಪ್ರಕಟನಪಟುಗಳ್ಗೆ ಏನಸಾಧ್ಯಂಗಳೋ ಪೇೞ್: ಆದಿಪು, ೩. ೪೪)

ಮಂತ್ರಶಾಲೆ
[ನಾ] ಸಮಾಲೋಚನಾ ಶಾಲೆ (ಸಂಗರಶ್ರಮನಾಱಿಸಿ ಮಂತ್ರಶಾಲೆಗೆ ವಂದು ಶಲ್ಯ ಶಕುನಿ ಶಾರದ್ವತ ದುಶ್ಶಾಸನಾದಿಗಳಂ ಬರಿಸಿ: ಪಂಪಭಾ, ೧೨. ೪೬ ವ)

ಮಂತ್ರಸಂತಾನ
[ನಾ] ಮಂತ್ರಗಳ ಸಮೂಹ (ಜ್ಞಾನದಿನಿರ್ದು ನಿಟ್ಟಿಪೊಡೆ ದಿವ್ಯಮುನೀಂದ್ರಂ ಕೊಟ್ಟ ಮಂತ್ರಸಂತಾನಮಂ ಓದಿಯೋದಿ ಯಮರಾಜನನದ್ಭುತ ತೇಜನಂ ಸರೋಜಾನನೆ ಜಾನದಿಂ ಬರಿಸೆ: ಪಂಪಭಾ, ೧. ೧೧೯)

ಮಂತ್ರಾಕ್ಷರ
[ನಾ] ಧ್ಯಾನಿಸಿ ವರ ಪಡೆಯಬಹುದಾದ ಮಂತ್ರ (ಆ ನಳಿನಾಸ್ಯೆಯ ಗೆಯ್ದುದೊಂದು ಶುಶ್ರೂಷೆ ಮನಂಗೊಳೆ ಕೊಟ್ಟಂ ದುರ್ವಾಸಂ ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ: ಪಂಪಭಾ, ೧. ೮೮ ಮತ್ತು ೧. ೮೯)

ಮಂತ್ರಾಕ್ಷರನಿಯಮ
[ನಾ] ಮಂತ್ರಾಕ್ಷರದ ವ್ರತ (ಮಂತ್ರಾಕ್ಷರ ನಿಯಮದಿಂ ಅಭಿಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದು ಏಂ ಮಂತ್ರಂ ಪೇೞೆನೆ ಕುಡು ರಿಪುತಂತ್ರಕ್ಷಯಕರನಂ ಎನಗೆ ಹಿತನಂ ಸುತನಂ: ಪಂಪಭಾ, ೧. ೧೨೪)

ಮಂತ್ರಾವಾಸ
[ನಾ] ಮಂತ್ರಶಾಲೆ (ಮಂತ್ರಾವಾಸದೊಳ್ ಮಂತ್ರನಿಶ್ಚಿತನಾಗು ಈಗಡೆ: ಪಂಪಭಾ, ೮. ೮೭)

ಮಂಥನ
[ನಾ] ಕಡೆಯುವುದು (ಮದಗಜ ಬೃಂಹಿತಧ್ವನಿ ತುರಂಗಮ ಹೇಷಿತಘೋಷಂ ಆದಂ ಒರ್ಮೊದಲೆ ಪಯೋಧಿಮಂಥನ ಮಹಾರವಮಂ ಗೆಲೆ: ಪಂಪಭಾ, ೩. ೩೮)


logo