logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಮಂಡಳಿಕ
[ನಾ] ಸಾಮಂತ (ನಕುಳನುಂ ತೆಂಕಣ ದೆಸೆಯ ಮಲೆಪರಂ ಮಂಡಳಿಕರುಮಂ ಅಸಿಯರಾಗೆ ಕವರ್ದುಕೊಂಡು ಲಂಕೆಯ ಮೇಗೆ ನಡೆದು: ಪಂಪಭಾ, ೬. ೩೨ ವ)

ಮಂಡಳಿಸು
[ಕ್ರಿ] ವೃತ್ತಾಕಾರವಾಗಿ ತಿರುಗು (ತುಱುಗಿರ್ದ ಬಲ್ಮಿಡಿಯ ತೂಗುಂಗೊಂಬಿನೊಳ್ಪಾಯ್ದು ಮಂಡಳಿಸುತ್ತಿರ್ಪ ಶುಕಾಳಿ: ಆದಿಪು, ೧೧. ೯೬)

ಮಂಡಿತ
[ಗು] [ಅಧಿಕಾರಕ್ಕಾಗಿ] ನೆಲೆಗೊಳಿಸಿದ (ಶೌರ್ಯಾವಷ್ಟಂಭದಿಂ ಆಳ್ದವನಾಂ ಷಟ್ಖಂಡಮಂಡಿತ ಕ್ಷಿತಿತಳಮಂ: ಆದಿಪು, ೧೩. ೭೬)

ಮಂತಣ
[ನಾ] ಆಲೋಚನೆ (ಅದಱಿಂದಂ ಪೆಱತು ಮಂತಣಕ್ಕೆಡೆಯಿಲ್ಲ: ಪಂಪಭಾ, ೧೨. ೪೮ ವ )

ಮಂತಣಮಿರ್
[ಕ್ರಿ] ಆಲೋಚಿಸು (ಕಳಹಂಸಗಮನೆಯಾ ಸುರತಮಕರಧ್ವಜನನಲ್ಲದೆ ಪೆಱನನೇಕೆ ಬಯಸುಗುಂ ಎಂದು ಮನದೊಳೆ ಮಂತಣಮಿರ್ದು ಬಗೆಯೊಳೆ ಗುಡಿಗಟ್ಟಿ ಸಂತಸಮಿರ್ದಳ್: ಪಂಪಭಾ, ೬. ೬೮ ವ); [ಕ್ರಿ] ಸಮಾಲೋಚನೆ ಮಾಡು (ದುಶ್ಶಾಸನ ಕರ್ಣ ಶಕುನಿ ಸೈಂದವರೆಂಬ ದುಷ್ಟಚತುಷ್ಟಯದೊಳ್ ಮಂತಣಮಿರ್ದು: ಪಂಪಭಾ, ೬. ೬೭ ವ)

ಮಂತ್ರ
[ನಾ] ಸಮಾಲೋಚನೆ (ಗಾಂಗೇಯನಂ ಏಗೆಯ್ದುಂ ಒಡಂಬಡಿಸಲಾಱದೆ ಸತ್ಯವತಿ ತಾನುಂ ಆತನುಂ ಆಳೋಚಿಸಿ ನಿಶ್ಚಿತಮಂತ್ರರಾಗಿ ಕೃಷ್ಣದ್ವೈಪಾಯನನಂ ನೆನೆದು: ಪಂಪಭಾ, ೧. ೮೪ ವ); [ನಾ] ಆಲೋಚನೆ, ಆಸೆ (ಮಂತ್ರಾಕ್ಷರ ನಿಯಮದಿಂ ಅಭಿಮಂತ್ರಿಸಿ ಬರಿಸಿದೊಡೆ ವಾಯುದೇವಂ ಬಂದು ಏಂ ಮಂತ್ರಂ ಪೇೞೆನೆ ಕುಡು ರಿಪುತಂತ್ರಕ್ಷಯಕರನಂ ಎನಗೆ ಹಿತನಂ ಸುತನಂ: ಪಂಪಭಾ, ೧. ೧೨೪)

ಮಂತ್ರಗುಪ್ತಿ
[ನಾ] ಸಮಾಲೋಚನೆ (ಆ ಮುನಿನಾಥಂ ತ್ರಿಗುಪ್ತಿಯೊಳ್ ನೆರೆದಂ ಈ ಮಹೀನಾಥಂ ಮಂತ್ರಗುಪ್ತಿಯೊಳ್ ನೆರೆದಂ: ಆದಿಪು, ೬. ೨೪ ವ)

ಮಂತ್ರದೇವತೆ
[ನಾ] ಮಂತ್ರಾಭಿಮಾನಿ ದೇವತೆ (ಬೆಸನಂ ಪಾರ್ವುವು ಮಂತ್ರದೇವತೆಗಳ್ ಆದ ಏ ಬಾರ್ತೆಗಂ: ಆದಿಪು, ೧. ೬೯)

ಮಂತ್ರಪದ
[ನಾ] ಮಂತ್ರಾಕ್ಷರ (ಮಂತ್ರಪದಕ್ಕೆ ಉರಗಂ ಸುಗಿವಂತೆವೊಲ್ ಅಗಿದು ಸುಗಿದು ತಲೆಗರೆದಿರ್ಪಂ: ಪಂಪಭಾ, ೭. ೪೩)

ಮಂತ್ರಪೂತ
[ಗು] ಮಂತ್ರದಿಂದ ಪಾವನಗೊಂಡ (ಮಂತ್ರಪೂತಾಂಗಮಂ ನೃಪನೆಯ್ದಿದಂ ಉದ್ಯಚ್ಛೃಂಗಮಂ ಆ ಶತಶೃಂಗಮಂ: ಪಂಪಭಾ, ೧. ೧೧೫)


logo