logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಮತ್ತಹಸ್ತಿ
[ನಾ] ಮದ್ದಾನೆ (ಸುಖಮಿರ್ಪನ್ನೆಗಂ ಒಂದು ದೆವಸಂ ಒಂದು ಮಾಯಾಮತ್ತಹಸ್ತಿ: ಪಂಪಭಾ, ೮. ೩೬ ವ)

ಮತ್ತಾಲಂಬನ
[ನಾ] ಒರಗುದಿಂಬು (ರಾಜ್ಯಲಕ್ಷ್ಮೀ ಲೀಲಾಲಂಬನಂ ಎನಿಸಿದ ಬಿಸುಗೆಯ ಮತ್ತಾಲಂಬನಮಂ ಅವಳಂಬಿಸಿ: ಆದಿಪು, ೧೪. ೧೦೨ ವ)

ಮತ್ತಿನ
[ಅ] ಆನಂತರದ (ಮತ್ತಿನ ಕೂಸುಗಳ್ಗೆಲ್ಲಂ ದುಶ್ಶಾಸನಾದಿಯಾಗಿ ನಾಮಂಗಳನಿಟ್ಟು ಕೊಟ್ಟು ಪರಕೆಯಂ ಕೊಟ್ಟು: ಪಂಪಭಾ, ೧. ೧೩೩ ವ); [ಅ] ಉಳಿದ, ಮಿಕ್ಕ (ಇಂದೆ ಕೆಟ್ಟಿತ್ತಾಗದೆ ಸೋಮವಂಶಂ ಎನಗಿಂ ಬಾೞ್ವಾಸೆಯೆಲ್ಲಿತ್ತೊ ಬಿಟ್ಟುೞಿದೆಂ ಮತ್ತಿನ ಮಕ್ಕಳಾಸೆಯುಮಂ ಆಂ: ಪಂಪಭಾ, ೯. ೮೬)

ಮತ್ತೇಭವಿಕ್ರೀಡಿತ
[ನಾ] ಮದ್ದಾನೆಯ ಆಟ (ಆಶ್ರಮಕ್ಕಿಂತು ಬೇವಸಮಂ ಮಾಡುವುದಾಯ್ತದೊಂದು ವಿಭವಂ ಮತ್ತೇಭವಿಕ್ರೀಡಿತಂ: ಪಂಪಭಾ, ೮. ೩೭)

ಮತ್ಪ್ರತಾಪ
[ನಾ] [ಮತ್+ಪ್ರತಾಪ] ನನ್ನ ಪರಾಕ್ರಮ (ಮತ್ಪ್ರತಾಪಕ್ಕಿದಱಿಂದಂ ನೋಡ ಅಗುರ್ವು ಉರ್ವಿದುದು ಇದುವೆ ಮಹಾಭಾರತಕ್ಕಾದಿಯಾಯ್ತು: ಪಂಪಭಾ, ೧೨. ೧೫೬)

ಮತ್ಸನ್ನಿಧಿ
[ನಾ] [ಮತ್+ಸನ್ನಿಧಿ] ನನ್ನ ಸಮಕ್ಷಮ (ಮನದೊಲವರದಿಂದ ಈ ಯಮತನಯನ ಕುಡುವಗ್ರಪೂಜೆ ಮತ್ಸನ್ನಿಧಿಯೊಳ್ ನಿನಗೆ ಅಶನಿಯ ಮಿೞ್ತುವ ನಂಜಿನ ದೊರೆ ಎಂದು ಒಣರ ನಂದಗೋಪಾಲಸುತಾ: ಪಂಪಭಾ, ೬. ೫೧)

ಮತ್ಸ್ಯ
[ನಾ] ಮೀನು (ವಾನರ ವಾರಣ ಉಷ್ಟ್ರ ಖರ ಮತ್ಸ್ಯ ಕಳೇವರ ಪೂತಿಗಂಧಮೇನೇನೊಳವುಳ್ಳುವೊಂದೆಡೆಗೆ ಬಂದುಂ ಅವಂದಿರ ಮೆಯ್ಯ ಗಂಧುದ್ದಾನಿಗೆ ವಾರದು: ಆದಿಪು, ೫. ೯೦); [ನಾ] ವಿರಾಟರಾಜ (ನಮಗಿನ್ನುಂ ಪೊಕ್ಕಿರಲಿಂಬು ಮತ್ಸ್ಯಪುರಂ ಶತ್ರುಗೆ ಶತ್ರು ಮತ್ಸ್ಯಂ: ಪಂಪಭಾ, ೮. ೫೦)

ಮತ್ಸ್ಯನ್ಯಾಯ
[ನಾ] ದೊಡ್ಡ ಮೀನು ಸಣ್ಣ ಮೀನನ್ನು ನುಂಗುವ ಕ್ರಮ, ದುರ್ಬಲನನ್ನು ಪ್ರಬಲನು ಪೀಡಿಸುವುದು (ಅತ್ಯಂತ ದುಷ್ಟಬಳವಜ್ಜನಗ್ರಸನದಿಂ ದುರ್ಬಲಜನಂಗಳೊಳ್ ಮತ್ಸ್ಯನ್ಯಾಯಂ ಪ್ರವರ್ತಿಸುಗುಮೆಂದು: ಆದಿಪು, ೮. ೭೪ ವ)

ಮತ್ಸ್ಯಪುರ
[ನಾ] ವಿರಾಟನಗರ (ನಮಗಿನ್ನುಂ ಪೊಕ್ಕಿರಲಿಂಬು ಮತ್ಸ್ಯಪುರಂ ಶತ್ರುಗೆ ಶತ್ರು ಮತ್ಸ್ಯಂ: ಪಂಪಭಾ, ೮. ೫೦)

ಮಥ್ಯಮಾನ
[ಗು] ಕಡೆಯಲ್ಪಟ್ಟ (ಒಳಗೆ ವೇದನಾದದಿಂ ಎತ್ತಂ ಎಯ್ದೆ ಶೋಭಿಸೆ ಸುರಮಥ್ಯಮಾನ ವನಧಿಕ್ಷುಭಿತಾರ್ಣವ ಘೋಷದಂತೆ: ಪಂಪಭಾ, ೧೪. ೫೭)


logo