logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಮಣಿನೂಪುರಮಂಜುಶಿಂಜಿತ
[ಗು] ರತ್ನಖಚಿತ ಕಾಲಂದುಗೆಯ ಇನಿದನಿ (ಆಗಳೇಂ ಪೊದಳ್ದೆಸೆದುದೊ ಚಾರುದೇವಗಣಿಕಾ ಮಣಿನೂಪುರಮಂಜುಶಿಂಜಿತಂ: ಆದಿಪು, ೭. ೨೨)

ಮಣಿಮಕುಟ
[ನಾ] ರತ್ನಖಚಿತವಾದ ಕಿರೀಟ (ಆತಂ ನಿಜವಿಜಯಖ್ಯಾತಿಯನಾಳ್ದು ಆಳ್ದನಧಿಕಬಲನವನಿಪತಿವ್ರಾತ ಮಣಿ ಮಕುಟ ಕಿರಣದ್ಯೋತಿತ ಪಾದಂ ಸಪಾದ ಲಕ್ಷಕ್ಷಿತಿಯಂ: ಪಂಪಭಾ, ೧. ೧೬)

ಮಣಿಮುದ್ರಿಕೆ
[ನಾ] ಹರಳುಂಗುರ (ಮಕುಟಂ ಕೇಯೂರಂ ಕರ್ಣಕುಂಡಲಂ ಕೊಪ್ಪು ಸರಿಗೆ ದುಸರಂ ಮಣಿಮುದ್ರಿಕೆ ತಿಸರಮೆಂಬ ಭೂಷಾನಿಕರಮಂ: ಆದಿಪು, ೫. ೩೩)

ಮಣಿರತ್ನ
[ನಾ] [ಜೈನ] ಭರತ ಚಕ್ರವರ್ತಿಯ ಏಳು ಅಜೀವರತ್ನಗಳಲ್ಲೊಂದು, ಶ್ರೀಗೃಹದಲ್ಲಿ ಹುಟ್ಟಿದ್ದು (ಎರಡಱೊಳಂ ಚಂದ್ರಾದಿತ್ಯರನಾಗಳ್ ಬರೆದು ಕಾಕಿಣೀರತ್ನದೊಳಂ ಸ್ಫುರಿತಮಣಿರತ್ನದೊಳಂ: ಆದಿಪು, ೧೩. ೪೯)

ಮಣಿರಶನಾ
[ನಾ] ರತ್ನದ ಡಾಬು (ಸುರಗಣಿಕಾ ಗುಂಜನ್ಮಣಿರಶನಾ ಮಣಿಮಂಜೀರ ಮಂಜುಶಿಂಜಿತಂ ರಂಜಿಸುಗುಂ: ಆದಿಪು, ೮. ೧೮)

ಮಣಿವಳಯ
[ನಾ] ರತ್ನಕಂಕಣ (ಮೃದುಕರತಳವದನದ ಚೆಲ್ವೊದವಿರೆ ಮಣಿವಳಯಕಳರವಂ ಸೊಗಯಿಸೆ ಚೆಲ್ವಿದಿರ್ಗೊಳೆ: ಆದಿಪು, ೭. ೬)

ಮಣಿವಿಷ್ಟರ
[ನಾ] ರತ್ನದ ಪೀಠ (ಆದರದಿಂದ ಅನರ್ಘ್ಯ ಮಣಿವಿಷ್ಟರದೊಳ್ ಕುಳ್ಳಿರ್ದು: ಆದಿಪು, ೧೫. ೪೨)

ಮತ್
[ಗು] ನನ್ನ (ಆಜಿರಂಗದೊಳ್ ಮುಂದೆ ಸಮಾನನಾಗಿ ಬೆಸದೆ ಇರ್ಪವನುಂ ತುಱುಕಾಱನಾಗೆ ಮತ್ ಸ್ಯಂದನ ಚೋದನಕ್ರಮಮದುಂ ಪೊಲೆಯಂಗೆ ಅಮರ್ದು ಇರ್ಕುಂ: ಪಂಪಭಾ, ೧೨. ೯೪)

ಮತ
[ನಾ] ಇಷ್ಟ (ಅತಿಮೃದುರವದಾಯಿಗಳಂ ತತ ಘನ ಸುಷಿರ ಅವನದ್ಧ ವಾದ್ಯಂಗಳಂ ಏಂ ಮತಮಱಿದು ಓಲಗಿಪುದೊ ದಂಪತಿಗೆಂದುಂ ಅವಾರ್ಯವೀರ್ಯತೂರ್ಯಕ್ಷ್ಮಾಜಂ: ಆದಿಪು, ೫. ೩೫); [ನಾ] ಅಭಿಪ್ರಾಯ, ಸಲಹೆ (ಕೊಂತಿ ಹರಿಯ ಮತದಿಂ ಕಾಯಲ್ಕೊಡರಿಸಿ ಬಂದಳ್ ಸುತರಂ ಕುಡದಿರ್ ಪುರಿಗಣೆಯಂ ಎನಿತು ಲಲ್ಲೈಸಿದೊಡಂ: ಪಂಪಭಾ, ೯. ೭೮)

ಮತಂಗಜ
[ನಾ] ಮದ್ದಾನೆ (ಬೆಡಂಗೊಳಕೊಳೆ ಸೊರ್ಕಿದ ಅಂಗಜಮತಂಗಜದಂತಿರೆ ಬರ್ಪ ಮಾದ್ರಿಯಂ: ಪಂಪಭಾ, ೨. ೧೭)


logo