logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಮಡಿವಳ್ಳ
[ನಾ] ಅಗಸ, ಮಡಿವಾಳ (ಪೞಿ ಚಿತ್ರಾವಳಿ ಜೋನೆಗವೞಿಯಂ ದೇವಾಂಗಮೆಂಬ ವಸನಂಗಳನೇಂ ಮಡಿವಳ್ಳನ ಪೞಿಯತನನೆ ಪೋಲ್ತು ವಿಶದ ವಸನಾಂಗಕುಜಂ: ಆದಿಪು, ೫. ೩೪)

ಮಡು
[ನಾ] ನದಿಯ ಆಳವಾದ ಜಾಗ (ಕನ್ನಿಕೆಯ ಬೆಮರ ನೀರ್ಗಳ ಪೊನಲೊೞ್ಕುಡಿಯಲ್ ಒಡಗೂಡೆ ಗಂಗೆಯ ಮಡು ಕರೆಗಣ್ಮಿದುದು ನಾಣ ಪೆಂಪೇಂ ಪಿರಿದೋ: ಪಂಪಭಾ, ೧. ೯೨); [ನಾ] ಕೊಳ (ಅರೆಮುಚ್ಚಿ ಕಣ್ಗಳಂ ನಿಶ್ಚಳಿತಂ ತಾನಿರ್ದು ಮಱೆದು ಕೆಂದಿದ ಮೀನಂ ತಳ್ತಾಡದಿರ್ದ ಮಡುವಂ ಪೋಲ್ತಂ: ಪಂಪಭಾ, ೮. ೧೩)

ಮಣಲ್
ಮರಳು (ಮುಡಿಯ ಕುಚಯುಗದ ಜಘನದ ಕಡುವಿಣ್ಪಿಂ ಮಣಲೊಳ್ ಅೞ್ದುಬರೆ ಮೆಲ್ಲಡಿಗಳ್: ಪಂಪಭಾ, ೭. ೮೫)

ಮಣಿ
[ಕ್ರಿ] ಸೋಲು (ಉಗ್ರಮಾರ್ಗಣಂ ಆ ವೀರನಿನಾದ ಸಿಂಹನಿನದಂ ತಮ್ಮಂ ಪಳಂಚಲ್ಕೆ ತತ್ಫಣಿವೃಂದಂ ಮಣಿದೋಡೆ: ಆದಿಪು, ೧೩. ೬೭); [ನಾ] ರತ್ನ (ಮಣಿಮೌಕ್ತಿಕ ನೀಳಸ್ಥೂಳಶಿಲಾಪ್ರವಿಭಾಸಿತ ಉತ್ತುಂಗಮಂ ಮುನಿಮುಖ್ಯ ಮುಖಾಂಭೋಜೋದರ ನಿರ್ಗತ ಮಂತ್ರಪೂತಾಂಗಮಂ ನೃಪನೆಯ್ದಿದಂ ಉದ್ಯತ್ ಶೃಂಗಮಂ ಶತಶೃಂಗಮಂ: ಪಂಪಭಾ, ೧. ೧೧೫); [ಕ್ರಿ] ಹೆದರು (ಅಂತಣಿ ಮಣಿಯದೆ ಸೆಣಸಿ ಪೊಣರ್ದು ಕಿಱಿದು ಪೊೞ್ತು ಕಾದಿ ನಿಂದಾಗಳ್: ಪಂಪಭಾ, ೧೦. ೮೫ ವ); [ಕ್ರಿ] ಬಾಗು (ಮಣಿಕುಂಡಲಂ ಕವಚಂ ಮಣಿಯದ ಚಾರಿತ್ರಂ ಉಗ್ರತೇಜಮುಂ ಈ ಒಳ್ಗುಣಮುಂ ಕಲಿತನಮುಂ ಇವೇಂ ಪ್ರಣತಾರೀ ಸೂತಸುತನೊಳ್ ಒಡವುಟ್ಟುಗುಮೇ: ಪಂಪಭಾ, ೧೨. ೯೮)

ಮಣಿಕಟಕ
[ನಾ] ರತ್ನದ ಕಟಕ ಹಾಗೂ ಸಾನು ಪ್ರದೇಶ (ಮಣಿಮಕುಟಂ ಶಿಖರಂ ಲಂಬಣಿಗೆಯ ಪೊಸಮುತ್ತು ನಿರ್ಝರಂ ಮಣಿಕಟಕಂ ಮಣಿಕಟಕಮಾಗೆ ತದ್ಗಿರಿಗೆಣೆಯಾದಂ ತನ್ನ ಪೆಸರೊಳಂ ವಿಜಯಾರ್ಧಂ: ಆದಿಪು, ೧೩. ೧೩)

ಮಣಿಕುಂಡಲ
[ನಾ] ರತ್ನಖಚಿತವಾದ ಕವಚ (ಒಡವುಟ್ಟಿದ ಮಣಿಕುಂಡಲಂ ಒಡವುಟ್ಟಿದ ಸಹಜಕವಚಂ ಅಮರ್ದಿರೆ ತನ್ನೊಳ್ ತೊಡರ್ದಿರೆಯುಂ ಬಂದಾಕೆಯ ನಡುಕಮಂ ಒಡರಿಸಿದನಾಗಳ್: ಪಂಪಭಾ, ೧. ೯೫)

ಮಣಿಕುಟ್ಟಿಮ
[ನಾ] ರತ್ನಖಚಿತ ನೆಲಗಟ್ಟು (ರಂಜಿಸೆ ಚರಣಾಲಕ್ತಕ ರಂಜನೆ ಮಣಿಕುಟ್ಟಿಮಂಗಳಂ: ಆದಿಪು, ೮. ೧೮)

ಮಣಿಗಣ
[ನಾ] ರತ್ನದ ರಾಶಿ (ಚಳತ್ ಅನಿಳ ಆಹತ ಕ್ಷುಭಿತ ಭಂಗುರತುಂಗತರಂಗಮಾಳಿಕಾವಳನ ಸಮುಚ್ಚಳತ್ ಮಣಿಗಣ ಆತ್ತ ಮರೀಚಿಲತಾಪ್ರತಾನಸಂವಳಿಯಿತ: ಪಂಪಭಾ, ೪. ೨೫)

ಮಣಿದೀಪ
[ನಾ] ರತ್ನಖಚಿತ ದೀಪ (ಆಪೊತ್ತುಂ ಮಣಿದೀಪಕಳಾಪೋದ್ಯಜ್ಜ್ಯೋತಿಗಳ್ ದಿಶಾಮಂಡಲಮಂ ವ್ಯಾಪಿಸುತಿರೆ: ಆದಿಪು, ೫. ೪೦)

ಮಣಿನಿಚಯ
[ನಾ] ರತ್ನರಾಶಿ (ಗಂಡಸ್ಥಳಕರಿನಿಕರಂ ಬಾೞ್ತೆಯೋ ಮೆಚ್ಚುವೇೞ್ ಆಜಾನೇಯ ಅಶ್ವೋತ್ಕರಂ ಬಾೞ್ತೆಯೋ ಮಣಿನಿಚಯಂ ಬಾೞ್ತೆಯೋ: ಪಂಪಭಾ, ೬. ೪೦)


logo