logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಮೌನಾಧ್ಯಯನವೃತ್ತತ್ವ
[ನಾ] [ಜೈನ] ಗರ್ಭಾನ್ವಯಕ್ರಿಯೆಗಳಲ್ಲಿ ಒಂದು, ಮೌನ ಶಾಸ್ತ್ರಾಭ್ಯಾಸ (ಮೌನಾಧ್ಯಯನವೃತ್ತತ್ವ .. .. ಅಗ್ರನಿರ್ವೃತಿ ಎಂಬ ಅಯ್ವತ್ತಮೂಱು ಗರ್ಭಾದಿನಿರ್ವಾಣ ಪರ್ಯಂತಂಗಳಪ್ಪ ಗರ್ಭಾನ್ವಯಕ್ರಿಯೆಗಳಂ: ಆದಿಪು, ೧೫. ೧೫ ವ)

ಮೌರ್ವೀ
[ನಾ] ಬಿಲ್ಲಿನ ಹೆದೆ (ಸಮುದ್ಯತ್ ರಜತಗಿರಿ ತಟ ಸ್ಪಷ್ಟ ಸಂಶ್ಲಿಷ್ಟ ಮೌರ್ವೀನಿನದಂ ಪರ್ವಿತ್ತು ಅಕಾಂಡಪ್ರಳಯ ಘನಘಟಾಟೋಪ ಗಂಭೀರನಾದಂ: ಪಂಪಭಾ, ೧೨. ೧೩೭)

ಮೌಲ
[ನಾ] ರಾಜನ ಸೇವೆಯಲ್ಲಿರುವವನು (ಮೌಲ ಭೃತ್ಯ ಸುಹೃತ್ ಶ್ರೇಣಿ ಮಿತ್ರ ಅಟವಿಕ ತಂತ್ರಂಗಳ್ ಪಣ್ಣಿದಜಂತ್ರಂಗಳಂತೆ ಕೞಕುೞಮಾದುವು: ಪಂಪಭಾ, ೧೩. ೨೦ ವ)

ಮೌಹೂರ್ತಿಕ
[ನಾ] ಜೋಯಿಸ (ಆತ್ಮೀಯ ಪುತ್ರೀ ವಿವಾಹೋತ್ಸವಕ್ಕೆ ಮೌಹೂರ್ತಿಕರಂ ಕರೆದು ದಿವಸಮಂ ಬೆಸಗೊಳ್ವುದುಂ: ಆದಿಪು, ೪. ೩೦ ವ)

ಮೌಳಿ
[ನಾ] ಕಿರೀಟ (ಶ್ರೀಪತಿಗೆ ಯುದ್ಧಮಲ್ಲ ಮಹೀಪತಿಗೆ ನೆಗೞ್ತೆ ಪುಟ್ಟೆ ಪುಟ್ಟಿದಂ ಅಖಿಳ ಕ್ಷ್ಮಾಪಾಲಮೌಳಿ ಮಣಿರಂಜಿತ ಕಿರಣಾಪಾಳಿತ ನಖಮಯೂಖರಂಜಿತ ಚರಣಂ: ಪಂಪಭಾ, ೧. ೧೮); [ನಾ] ತಲೆ (ಸಕಲ ಸಾಮಂತ ಮಕುಟಬದ್ಧ ಮೌಳಿಮಾಳಾವಿಗಳಿತ ಮಕುಟಕೋಟಿ ಸಂಘಟ್ಟನ ಉಚ್ಚಳಿತ ಮಣಿಶಲಾಕಾ ಸಂಕುಳಮುಂ: ಪಂಪಭಾ, ೧೩. ೫೧ ವ)

ಮ್ಲೇಚ್ಛರಾಜ
[ನಾ] ಅನಾರ್ಯರ ದೊರೆ (ವಸ್ತುವಾಹನಪುರಸ್ಸರಂ ಮ್ಲೇಚ್ಛರಾಜರಂ ಲಲಾಟಘೃಷ್ಟಭೂತಳರಂ ಮಾಡಿ: ಆದಿಪು, ೧೩. ೪೦ ವ)


logo