logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಭರೋದ್ಧತ
[ನಾ] [ಭರ+ಉದ್ಧತ] ಸಮ್ಮರ್ದದಿಂದ ಗರ್ವಿಷ್ಠವಾದ (ಸಾಳತಮಾಳಕಾನನಭರೋದ್ಧತ ಸಿಂಧುರಕಂಠ ಗರ್ಜನಾ ಆಭೀಳಮಂ ಅಂಬರೇಚರವಧೂಕರಪಲ್ಲವ ಸಂಚಳಲ್ಲತಾಂದೋಳಮಂ: ಪಂಪಭಾ, ೭. ೭೬)

ಭರ್ಮ
[ನಾ] ಚಿನ್ನ (ಸಾಹಿಯಾಣದ ಚೀನದ ಧವಳವಟ್ಟದ ಭರ್ಮದ ಜೊಂಗದ ದೇವಾಂಗದ ಸಕಳವಟ್ಟಿಗೆಗಳುಮಂ: ಆದಿಪು, ೪. ೩೪ ವ)

ಭವ
[ನಾ] ಜೀವಿತಾವಧಿ (ಎನಿತೆನಿತು ಕೞಿದ ಭವಮಂ ನೆನದಪೆ ಎನಿತೆನಿತು ಭವದ ಬಂಧುಗಳಂ ನೀಂ ನೆನೆದಪೆ: ಆದಿಪು, ೨. ೬೦); [ನಾ] ಜನ್ಮ (ನಿನ್ನ ನಿರ್ನಾಮಿಕೆಯಾದ ಭವದೊಳ್ ಮದೀಯಜನನೀಚರಗುರುಗಳ್ ನಿನಗಂ ಗುರುಗಳಾದೊಡೆ: ಆದಿಪು, ೩. ೭೨ ವ); [ನಾ] ಸಂಸಾರ (ಇನ್ನೆಗಂ ಓರಂತೆ ತೊೞಲ್ದೆಂ ಇಂ ತಿರಿಯಲಾಱೆಂ ಭವಾಂಬೋಧಿಯೊಳ್: ಆದಿಪು, ೯. ೬೦); [ನಾ] ಶಿವ (ಭವಲಾಲಾಟವಿಲೋಚನಾಗ್ನಿ ಶಿಖೆಯಿಂ ಬೆಂದಳ್ಕಿ ಮತ್ತಂ ಮನೋಭವಂ ಎೞ್ಚತ್ತೊಡೆ ಕಾಮಕಾಂತೆ ಬೞಿಯಂ ತನ್ನಿಚ್ಚೆಯಿಂ ಮೆಚ್ಚಿ ಬಣ್ಣವುರಂ ತೀವಿದ ಮಾೞ್ಕೆಯಾಯ್ತು: ಪಂಪಭಾ, ೭. ೨೪)

ಭವಂಗಿಡಿಸು
[ಕ್ರಿ] ಹಿಕತೆಯನ್ನು ನಾಶಪಡಿಸು (ಭವಂ ತವೆ ಭವತ್ಪದಾಂಬುರುಹಸೇವೆಗೆಯ್ವಾರುಮಂ ಭವಂಗಿಡಿಪೆ: ಆದಿಪು, ೧೩. ೮೭)

ಭವತ್
ನಿನ್ನ (ಭವತ್ ಊರುಯುಗಂಗಳಂ ಆಜಿರಂಗದೊಳ್ ಗಿಜಿಬಿಜಿಮಾಡಲೆಂದು ಅವನ ಪೂಣ್ದುದು ನಿಕ್ಕುವಂ ಆಗದಿರ್ಕುಮೇ: ಪಂಪಭಾ, ೯. ೫೨); ತಮ್ಮ (ಬಾದೇನ್ ಆ ಮದೀಯ ಕರ್ಮಫಳೋದಿತ ಸಂತಾಪರೂಪಪಾಪಕಳಾಪ ವಿಚ್ಛೇದನಕರಮಾಯ್ತು ಭವತ್ ಪಾದಪ್ರಕ್ಷಾಳನ ಉದಕದಿಂ ಮುನಿನಾಥಾ: ಪಂಪಭಾ, ೬. ೧೩)

ಭವದೀಯ
[ಗು] ನಿನ್ನ (ಸೋಲ್ತೊಱಲ್ದು ನಡೆ ನೋೞ್ಪೆಡೆಯೊಳ್ ಭವದೀಯ ರೂಪಲಂಪಟವಿಟರಂ ಮರುಳ್ಗೊಳಿಸಿತು ಉತ್ಕಟಮೋಹತಮಃಪಟಂ ಪಟಂ: ಆದಿಪು, ೩. ೯೦)

ಭವನಕಳಹಂಸೆ
[ನಾ] ಮನೆಯಲ್ಲಿ ಸಾಕಿದ ರಾಜಹಂಸ (ಮೃಣಾಳಿಕೆಯಂ ಭವನಕಳಹಂಸೆಗೆ ಬಾಳಮೃಣಾಳ ನಾಳಂಗಳಂ ನೀಡಲುಂ: ಆದಿಪು, ೭. ೨೧ ವ)

ಭವನವನಜ್ಯೋತಿಃಕಲ್ಪಾವಾಸ
[ನಾ] [ಜೈನ] ಭವನವಾಸಿ, ವ್ಯಂತರ, ಜ್ಯೋತಿಷ ಮತ್ತು ಕಲ್ಪವಾಸಿಗಳೆಂಬ ನಾಲ್ಕು ಪ್ರಕಾರದ ದೇವತೆಗಳ ನಿವಾಸಗಳು (ಭವನವನಜ್ಯೋತಿಃ ಕಲ್ಪಾವಾಸದೊಳ್ ಕ್ರಮದೆ ಶಂಖ ಭೇರಿ ಕಂಠೀರವ ಘಂಟಾಧ್ವನಿಗಳ್ ನೆಗೞ್ದುವು: ಆದಿಪು, ೭, ೪೦)

ಭವಪ್ರತ್ಯಯಜ್ಞಾನ
[ನಾ] [ಜೈನ] ನಾರಕಿಗಳಿಗೂ ದೇವತೆಗಳಿಗೂ ಆಯಾ ಭವಗಳು ಕಾರಣವಾಗಿ ಉಂಟಾಗುವ ಜ್ಞಾನ (ಭವಪ್ರತ್ಯಯಜ್ಞಾನಂ ತೊಟ್ಟನೆ ಪುಟ್ಟೆ ಪೂರ್ವಭವದೊಳ್ ತೊಟ್ಟೊಂದು ವೃತ್ತಾಂತಮಂ: ಆದಿಪು, ೨. ೬೬)

ಭವಭಯಹರಣ
[ನಾ] ಸಂಸಾರದ ಕೋಟಲೆಯನ್ನು ನಾಶಮಾಡುವಂಥದು (ದುರಿತಘನತಿಮಿರದಶಶತಕಿರಣಂ ಅತಿಪ್ರೀತಿಕರಣಂ ಅಖಿಳವಿನೇಯೋದ್ಧರಣಂ ಎಮಗಭವ ಭವಭಯಹರಣಂ ಭವದೀಯ ಸಮವಸರಣಂ ಶರಣಂ: ಆದಿಪು, ೧೪. ೩೮)


logo