logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಭದ್ರಾಂಕುಶ
[ನಾ] ಭದ್ರ ಜಾತಿಯ ಆನೆಗೆ ಅಂಕುಶಸ್ವರೂಪ (ಮಾಂಕರಿಸದಱಿವು ಗುರು ವಚನಾಂಕುಶಮಂ ಪಾೞಿಯೆಡೆಗೆ ಪೊಣರ್ದರಿಬಲಮಂ ಕಿಂಕೊಳೆ ಮಾೞ್ಪೆಡೆಗಣಮೆ ನಿರಂಕುಶಮೆನಿಸಿದುದು ಮುನಿಸು ಭದ್ರಾಂಕುಶನಾ: ಪಂಪಭಾ, ೧. ೩೨)

ಭಯಂಕರ ಕರ
[ನಾ] ಭಯ ಹುಟ್ಟಿಸುವಂತಹ ಬಾಹುಗಳುಳ್ಳವನು (ಅರಿಕೇಸರಿಗೆ ಆತ್ಮಜರ್ ಅರಿನೃಪಶಿರೋದಳನ ಪರಿಣತೋಗ್ರಾಸಿ ಭಯಂಕರರ್ ಆ ಇರ್ವರೊಳ್ ಆರ್ ದೊರೆಯೆನೆ ನರಸಿಂಹ ಭದ್ರದೇವರ್ ನೆಗೞ್ದರ್: ಪಂಪಭಾ, ೧. ೨೨)

ಭಯಂಕರತರ
[ನಾ] ಹೆಚ್ಚು ಭಯಂಕರ (ಆಜಿಯೊಳ್ ಭಯಂಕರತರಮಪ್ಪಿನಂ ಪಗೆವರೊಕ್ಕಲ್ ಓವೆನೆನಲ್ ಒರ್ವರಿಲ್ಲದಂತಿರೆ: ಪಂಪಭಾ, ೯. ೫೭)

ಭಯರಸಕ
[ನಾ] ಭಯ, ಹೆದರಿಕೆ (ಕಸವರದ ಸವಿಯುಮಂ ಭಯರಸಕದ ಸವಿಯುಮಂ ಅದೆಂತುಂ ಆನಱಿಯದುದಂ ವಸುಮತಿಯಱಿವುದು: ಪಂಪಭಾ, ೧೨. ೧೮೦)

ಭರ
[ನಾ] ಭಾರ, ಹೊಣೆ, ಆಳಿಕೆ (ಸಕಳಾವನೀತಳಭರಮಂ ಇನಸುತನೞಿಯೆ ಹರಿಗನಿಂದೆನಗೀಗಳ್ ದೊರೆಕೊಂಡುದು: ಪಂಪಭಾ, ೧೩. ೨)

ಭರಂಗೆಯ್
[ಕ್ರಿ] ಕಾರ್ಯಭಾರವನ್ನು ಹೊರು (ಧೃತರಾಷ್ಟ್ರಂ ನುಡಿದಾರ್ತನೇ ಹರಿ ಭರಂಗೆಯ್ದಾರ್ತನೇ ನೀಂ ಪೃಥಾಸುತರಂ ನೋಯಿಸಲಾಗದೆಂದು ನುಡಿದೇಮಾರ್ತೆಮೇ: ಪಂಪಭಾ, ೧೦. ೧೦); [ಕ್ರಿ] ಉತ್ಸಾಹಪಡು (ಭರಂಗೆಯ್ದೊಡೆ ಉರ್ಕುಳ್ಳ ಸಾಮಂತನಿಕಾಯಂ ಯಂತ್ರಮುಕ್ತಾನಳ ಶರದೃಷದಾಸಾರವಿಧ್ವಂಸಮಕ್ಕುಂ: ಆದಿಪು, ೧೩. ೫೮); [ಕ್ರಿ] ಆರ್ಭಟಿಸು (ಹರಿಯುಂ ತಾನುಂ ಭರಂಗೆಯ್ದು ತನ್ನ ಎಸಕಂ ಕಾಯದೆ ಅಧರ್ಮಯುದ್ಧದೆ ನರಂ ಕೊಲ್ವಲ್ಲಿ ಕಂಡು ಇಂತುಪೇಕ್ಷಿಸಿ ನೀಮುಂ ನಡೆ ನೋಡುತ್ತಿರ್ದಿರಿ ಎನೆ ಮತ್ತಿನ್ನಾರಂ ನಂಬುವೆಂ: ಪಂಪಭಾ, ೧೧. ೮೩)

ಭರತ
[ನಾ] ಒಬ್ಬ ಚಕ್ರವರ್ತಿ (ಭರತನ ವಂಶದೊಳ್ ನೆಗೞ್ದ ಪಾಂಡುಗೆವುಟ್ಟಿಯುಂ: ಪಂಪಭಾ, ೩. ೧೧); [ನಾ] ಒಂದು ಜನಪದ (ಆ ತಿರ್ಯಗ್ಲೋಕದ ನಟ್ಟನಡುವೆ ಲವಣಜಲಧಿಪರಿವೃತಮಾಗಿ ಭರತ ಹೈಮವತ .. .. ಐರಾವತಂಗಳೆಂಬ ಏೞುಂ ಜನಪದಗಳುಂಟು: ಆದಿಪು, ೧. ೪೮ ವ); [ನಾ] [ಭರತನ] ನಾಟ್ಯಶಾಸ್ತ್ರ (ಭರತಂಗೆ ಭರತಮುಮಂ ಅರ್ಥಶಾಸ್ತ್ರಮುಮಂ ವೃಷಭಸೇನಂಗೆ ಗೀತವಾದ್ಯಾರ್ಥ ಸಂಗ್ರಹಮಪ್ಪ ಗಾಂಧರ್ವಶಾಸ್ತ್ರಮುಮಂ: ಆದಿಪು, ೮. ೬೦ ವ)

ಭರತಕುಲಗಗನದಿನಕರ
[ನಾ] ಭರತವಂಶವೆಂಬ ಆಕಾಶಕ್ಕೆ ಸೂರ್ಯನಂತಿರುವವನು (ಭರತಕುಲಗಗನದಿನಕರಂ ಅರಾತಿಕುಳಕಮಳಹಿಮಕರಂ ಶಿಶು ತೇಜೋವಿರಚನೆಯುಂ ಕಾಂತಿಯುಂ ಆವರಿಸಿರೆ ಗರ್ಭೋದಯಾದ್ರಿಯಿಂದ ಉದಯಿಸಿದಂ: ಪಂಪಭಾ, ೧. ೧೪೫)

ಭರತಕುಲತಿಲಕ
[ನಾ] ಭರತವಂಶದ ಶ್ರೇಷ್ಠ (ಅಂತು ಭರತಕುಲತಿಲಕರಪ್ಪ ಇರ್ವರ್ ಮಕ್ಕಳಂ ಪೆತ್ತು ಕೊಂತಿ ಸಂತಸದ ಅಂತಮನೆಯ್ದಿರ್ಪುದುಂ: ಪಂಪಭಾ, ೧. ೧೨೮ ವ)

ಭರತಾಗಮ
[ನಾ] ಭರತನಿಂದ ರಚಿತವಾದ ನಾಟ್ಯಶಾಸ್ತ್ರ (ಭರತಾಗಮದೊಳ್ ಮೂವತ್ತೆರಡೆನೆ ನೆಗೞ್ದಂಗಾಹಾರಮುಂ ನೂಱೆಂಟುಂ ಕರಣಮುಮಂ ಅವಳ ಡವಕೆಯ ಪರಿಚಾರಿಕೆಯಱಿಗುಂ ಆಕೆಗವು ತೊಡರ್ವೆಡೆಯೇ: ಆದಿಪು, ೯. ೨೯)


logo