logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಭೋಂಕನೆ
[ಅ] ಬೇಗನೆ (ಮೆಲ್ಲನೆ ಮೃಗಮೆಂದು ಸಾರ್ದು ನೆಱನಂ ನಡೆ ನೋಡಿ ನರೇಂದ್ರನೆಚ್ಚು ಭೋಂಕನೆ ಮೃಗಚಾರಿಯಂ ತನಗೆ ಮಾಣದೆ ತಂದನದೊಂದು ಮಾರಿಯಂ: ಪಂಪಭಾ, ೧. ೧೧೧); [ಅ] ಇದ್ದಕ್ಕಿದ್ದಂತೆ (ನನೆಯಂಬನೆ ಕರ್ಚಿ ಪಾಱಿದಪುದೋ ಶೃಂಗಾರವಾರಾಶಿ ಭೋಂಕನೆ ಬೆಳ್ಳಂಗೆಡೆದತ್ತೊ ಕಾಮನ ಎಱೆ ಮೆಯ್ವೆರ್ಚಿತ್ತೊ ಪೇೞ್ ಈಕೆಗೆ ಎಂಬಿನಂ: ಪಂಪಭಾ, ೪. ೪೨)

ಭೋಂಕಲ್
[ಅ] ಭೋಂಕನೆ, ತಟ್ಟನೆ (ಶ್ರೀನಾರೀಪತಿ ದೀಕ್ಷೆಯಂ ಕೊಳಲೊಡಂ ಭೋಂಕಲ್ ಮನಃಪರ್ಯಾಯಜ್ಞಾನಂ ಪುಟ್ಟಿದುದು: ಆದಿಪು, ೧೬. ೭೩)

ಭೋಗ
[ನಾ] ಹಾವಿನ ಹೆಡೆ (ತನು ರೂಪ ವಿಭವ ಯೌವನ ಧನ ಸೌಭಾಗ್ಯ ಆಯುರಾದಿಗಳ್ಗೆಣೆ ಕುಡುಮಿಂಚಿನ ಪೊಳೆಪು ಮುಗಿಲ ನೆೞಲ್ ಇಂದ್ರನ ಬಿಲ್ ಬೊಬ್ಬುಳಿಕೆಯುರ್ಬು ಪರ್ಬಿದ ಭೋಗಂ: ಆದಿಪು, ೯. ೯. ೪೬); [ನಾ] ಸುಖ (ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನಿಂಪುಗಳ್ಗಾಗರಮಾದ ಮಾನಸರೆ ಮಾನಸರ್: ಪಂಪಭಾ, ೨. ೨೯)

ಭೋಗತೃಷ್ಣೆ
[ನಾ] ಭೋಗಾಕಾಂಕ್ಷೆ (ಅಂತಪಗತಗುರುಶೋಕವೇಗನಾಗಿ ಗಣಧರಚರಣ ಸರಸಿಜಂಗಳ್ಗೆಱಗಿ ತನ್ನ ಭೋಗತೃಷ್ಣೆಯಂ ತಾನೆ ತನ್ನ ಮನದೊಳ್ ನಿಂದಿಸುತ್ತುಂ: ಆದಿಪು, ೧೬. ೬೦ ವ)

ಭೋಗನಾಯಕ
[ನಾ] ಮಂಡಲವನ್ನು ರಕ್ಷಿಸುವವನು (ಭೋಗಿಗಳ್ ಭೋಗಿಗಳೆಂಬ ಭೋಗಿಗಳೆ ಭೋಗಿಗಳಲ್ಲಿಯ ಭೋಗನಾಯಕರ್: ಪಂಪಭಾ, ೪. ೧೬)

ಭೋಗಭೂಮಿ
[ನಾ] [ಜೈನ] ಭೂಮಿಯ ಮೇಲೆಯೇ ಇರುವುದುದೆಂದು ಹೇಳಲಾದ, ಪುಣ್ಯವಂತರು ಹುಟ್ಟುವ ಸ್ಥಳ, ಇಲ್ಲಿ ರೋಗರುಜಿನಾದಿಗಳಿರುವುದಿಲ್ಲ (ಫಳಮುಂ ಸುಪಾತ್ರದಾನದ ಫಳಮೆ ದಲ್ ಉತ್ಕೃಷ್ಟಂ ಭೋಗಭೂಮಿಯೊಳಂ: ಆದಿಪು, ೧೦. ೧೦)

ಭೋಗಾಂಗ
[ನಾ] ಸುಖಸಾಧನ (ಭೋಗಾಂಗಮಾಗಿಯುಂ ಕೃಷ್ಣಾಗರುಧೂಪಂ ಮುಸುಂಕಿ ಕೊಂದಿಕ್ಕಿದುದಾ ಭೋಗಿಗಳಂ: ಆದಿಪು, ೫. ೨೫)

ಭೋಗಾಭೋಗ
[ನಾ] ಭೋಗಸಾಮಗ್ರಿಗಳಿಂದ ಸಿಕ್ಕುವ ಸುಖ (ವಿದ್ಯುತ್ ಕ್ಷಣಿಕಂ ನಿಟ್ಟಿಯೆ ತನುಭೃದ್ಗಣ ಯೌವನ ರೂಪ ವಿಭವ ಭೋಗಾಭೋಗಂ: ಆದಿಪು, ೪. ೭೫)

ಭೋಗಿ
[ನಾ] ವಿಲಾಸವತಿ (ಚರಿತಂ ಬಂದರ್ ಕಣ್ಗೊಪ್ಪಿರಲ್ ವರಭೋಗಿಯರ್: ಪಂಪಭಾ, ೯. ೧೦೨); [ನಾ] ನಾಗ ಮತ್ತು ಸುಖಪಡುವವ (ಭೋಗಿಗಳ್ ಭೋಗಿಗಳೆಂಬ ಭೋಗಿಗಳೆ ಭೋಗಿಗಳಲ್ಲಿಯ ಭೋಗನಾಯಕರ್: ಪಂಪಭಾ, ೪. ೧೬); [ನಾ] ಸರ್ಪ (ತತ್ ಭೋಗಿ ಫಣಾದ್ಯುತಿಯೆ ಕೞ್ತಲೆಯಂ ತಲೆದೋಱಲೀಯದು: ಪಂಪಭಾ, ೪. ೧೬); [ನಾ] ಸುಖಿ [ಅರ್ಜುನ] (ಆಗಳ್ ಅನಂತಂ ಅನಂತಫಣಾಗಣಮಣಿ ಕಿರಣಂ ಎಸೆಯೆ ದುಗ್ಧಾರ್ಣವದೊಳ್ ರಾಗದಿನಿರ್ಪಂತಿರ್ದಂ ಭೋಗಿ ತೞತ್ತೞಿಸೆ ಬೆಳಗೆ ಕೆಯ್ದೀವಿಗೆಗಳ್: ಪಂಪಭಾ, ೪. ೫೩)

ಭೋಗಿಭೋಗ
[ನಾ] ಹಾವಿನ ಹೆಡೆ (ಇಂತು ಸಂಸೃತಿಭೋಗಂಗಳ್ ಭೋಗಿಭೋಗದಿಂ ವಿಷಮಂಗಳ್: ಆದಿಪು, ೨೫)


logo