logo
भारतवाणी
bharatavani  
logo
Knowledge through Indian Languages
Bharatavani

Pampana Nudigani (Kannada)

Please click here to read PDF file Pampana Nudigani (Kannada)

ಭೂರ್ಜ
[ನಾ] ಒಂದು ಬಗೆಯ ಮರ (ಕಕುಭ ಅಶೋಕ ಕದಂಬ ಲುಂಗ ಲವಲೀಭೂಜ ಆರ್ಜುನ ಅನೋಕಹ ಪ್ರಕರಂ: ಪಂಪಭಾ, ೫. ೮೦)

ಭೂವಧೂವರ
[ನಾ] ಭೂಮಿಯೆಂಬ ಹೆಣ್ಣಿನ ಒಡೆಯ (ಪಯೋರುಹವಿಳಾಸಸ್ಥಾನೆಯಿಂ ಭೂವಧೂವರಂ ಅಬ್ಜೇಕ್ಷಣೆ ಕಲ್ಪವೃಕ್ಷದಿಂ ಇಳಾಲೋಕೈಕಕಲ್ಪದ್ರುಮಂ: ಆದಿಪು, ೮. ೨೭)

ಭೂವಲಯ
[ನಾ] ಭೂಮಂಡಲ, ರಾಜ್ಯ (ಭೂವಲಯಮಂ ಅಯ್ಯನಿತ್ತುದುಮಂ ಆಂ ನಿನಗಿತ್ತೆಂ ಇದೇವುದಣ್ಣ ನೀನೊಲಿದ ಲತಾಂಗಿಗಂ ಧರೆಗಂ ಆಟಿಸಿದಂದು ನೆಗೞ್ತೆ ಮಾಸದೇ: ಆದಿಪು, ೧೪. ೧೩೦);

ಭೂಷಣ
[ನಾ] ಆಭರಣ (ಸುರತರುಪ್ರಸೂನ ಗ್ರಥಿತ ಸುರಭಿದಾಮ ದುಕೂಲಾಂಬರ ವಿಚಿತ್ರ ಭೂಷಣ ಸುರಭಿವಿಲೇಪನ ಪ್ರಮುಖ ಭೋಗೋಪಭೋಗಂಗಳೊಳಂ: ಆದಿಪು, ೯. ೩ ವ)

ಭೂಷಣಾಂಗ
[ನಾ] [ಜೈನ] ಒಂದು ಕಲ್ಲವೃಕ್ಷ, ಆಭರಣಗಳನ್ನು ನೀಡುವಂಥದು (ಭಾಜನಾಂಗದ ವಸ್ತ್ರಾಂಗದ ಭೂಷಣಾಂಗದ ಅಳವಂ ಚಕ್ರೇಶ್ವರಂ ತಾಳ್ದಿದಂ: ಆದಿಪು, ೪. ೩೫)

ಭೂಷಾ
[ನಾ] ಆಭರಣ, ಕಿವಿಯ ಆಭರಣ (ಮಕುಟಂ ಕೇಯೂರಂ ಕರ್ಣಕುಂಡಲಂ ಕೊಪ್ಪು ಸರಿಗೆ ದುಸರಂ ಮಣಿಮುದ್ರಿಕೆ ತಿಸರಮೆಂಬ ಭೂಷಾನಿಕರಮಂ ಆ ಭೂಷಣಾಂಗತರು ಕುಡುತಿರ್ಕುಂ: ಆದಿಪು, ೫. ೩೪)

ಭೃಂಗ
[ನಾ] ದುಂಬಿ (ಎತ್ತಿದ ಪರಾಗರಾಗ ಮುದಿತ ಆಶಾ ಭಾಸಂ ಉದ್ಯತ್ ಮಧು ಉನ್ಮದಭೃಂಗಧ್ವನಿ ಮಂಗಳಧ್ವನಿಯೆನಲ್: ಪಂಪಭಾ, ೫. ೬)

ಭೃಂಗರುತಿ
[ನಾ] ದುಂಬಿಗಳ ಶಬ್ದ, ಝೇಂಕಾರ (ಭೃಂಗರುತಿಗಳ್ ಮಾಂಗಲ್ಯಗೇಯಂಗಳ ಅಂದಮನೀಯೆ: ಪಂಪಭಾ, ೭. ೭೭)

ಭೃಂಗಾಂಗನಾ
[ನಾ] [ಭೃಂಗ+ಅಂಗನಾ] ಹೆಣ್ಣು ದುಂಬಿ (ಪುಷ್ಪಿತ ಹೇಮಪಂಕಜ ರಜಸ್ಸಂಸಕ್ತಭೃಂಗಾಂಗನಾನಿಕರಂ ಸಾರಸ ಹಂಸ ಕೋಕಿಳಕುಳಧ್ವಾನೋತ್ಕರಂ: ಪಂಪಭಾ, ೫. ೮೦)

ಭೃಂಗಾರ
[ನಾ] ಬಂಗಾರದ ಕಳಶ, ಪಾತ್ರೆ (ಸಾರಮಿದು ರತ್ನಮಯ ಭೃಂಗಾರಂ ಹರಿಪೀಠಮಿದು ಜಗತ್ತ್ರಿತಯಾಳಂಕಾರಂ: ಆದಿಪು, ೧೩. ೧೭)


logo